ಕರಾವಳಿ

ಉಡುಪಿ: ಲೈಂಗಿಕ ದೌರ್ಜನ್ಯ ಆರೋಪ; ಆರೋಪಿಗೆ 20 ವರ್ಷ ಕಠಿಣ ಸಜೆ

ಉಡುಪಿ, ಫೆ.14: ಒಂದೂವರೆ ವರ್ಷ ಹಿಂದೆ ತಾಲೂಕಿನ ಕಲ್ಯಾಣಪುರ ಸಂತೆಕಟ್ಟೆ ಸಮೀಪದ ನೇಜಾರಿನಲ್ಲಿ ನಡೆದ ಮೂರು ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ಗುರುವಾರ 20 ವರ್ಷಗಳ ಕಠಿಣ ಸಜೆ ಹಾಗೂ 10,000 ರೂ ದಂಡ ವಿಧಿಸಿದೆ. ನೇಜಾರು ನಿವಾಸಿ ಪಳನಿ (65) 2018ರ ಅ. 3ರಂದು ಅಂಗನವಾಡಿಗೆ ಹೋಗುತ್ತಿದ್ದ ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, […]

ಉಡುಪಿ: ಲೈಂಗಿಕ ದೌರ್ಜನ್ಯ ಆರೋಪ; ಆರೋಪಿಗೆ 20 ವರ್ಷ ಕಠಿಣ ಸಜೆ Read More »

ಕರಾವಳಿ

ಮಂಗಳೂರು: ಟ್ಯಾಂಕರ್ ಢಿಕ್ಕಿ ಹೊಡೆದು ಬೈಕ್ ಸವಾರ ವಿದ್ಯಾರ್ಥಿ ಮೃತ್ಯು

ಮಂಗಳೂರು, ಫೆ.13: ಟ್ಯಾಂಕರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಂತೂರು ಸರ್ಕಲ್ ಬಳಿ ನಡೆದಿದೆ. ಮೃತರನ್ನು ಮಣ್ಣಗುಡ್ಡೆ ನಿವಾಸಿ, ನಗರದ ಬೆಸೆಂಟ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಕಾರ್ತಿಕ್ ಮಲ್ಯ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಕಾರ್ತಿಕ್ ಸುರತ್ಕಲ್ ಕಡೆಯಿಂದ ನಂತೂರು ಸರ್ಕಲ್ ಬಳಿ ಬರುತ್ತಿದ್ದಂತೆ ಈ ಘಟನೆ ನಡೆದಿದೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಟ್ಯಾಂಕರ್ ಢಿಕ್ಕಿ ಹೊಡೆದು ಬೈಕ್ ಸವಾರ ವಿದ್ಯಾರ್ಥಿ ಮೃತ್ಯು Read More »

ಕರಾವಳಿ

ವಿಟ್ಲ: ದಿನಸಿ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ

ಬಂಟ್ವಾಳ, ಫೆ.13: ದಿನಸಿ ಸಾಮಗ್ರಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವೀರಕಂಭದಲ್ಲಿ ನಡೆದಿದೆ. ವೀರಕಂಭ ನಿವಾಸಿ ಹಮೀದ್ ಎಂಬವರ ದಿನಸಿ ಸಾಮಾಗ್ರಿ ಅಂಗಡಿಗೆ ರಾತ್ರಿ ಸುಮಾರು 9:30ರ ಸುಮಾರಿಗೆ ಬೆಂಕಿ ತಗುಲಿ ಅಂಗಡಿ ಭಾಗಶಃ ಬೆಂಕಿಗೆ ಆಹುತಿಯಾಯಿತು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದ ಎರಡು ವಾಹನಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇನ್ನು ಅಂಗಡಿಗೆ ತಾಗಿಕೊಂಡೆ ಇವರ

ವಿಟ್ಲ: ದಿನಸಿ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಕಾಸರಗೋಡು: 22 ಕೆ.ಜಿ. ಗಾಂಜಾ ಸಾಗಾಟ, ವಶ

  ಕಾಸರಗೋಡು, ಜ 13: ಅಕ್ರಮವಾಗಿ ಬಸ್‌ನಲ್ಲಿ ಸಾಗಾಟ ಮಾಡುತ್ತಿದ್ದ ನಿಷೇಧಿತ ಗಾಂಜಾವನ್ನು ಅಬಕಾರಿ ದಳದ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್‌ನ ಸೀಟಿನಡಿಯಲ್ಲಿ ಸುಮಾರು 22 ಕೆಜಿ ಗಾಂಜಾವನ್ನು ಬಚ್ಚಿಟ್ಟು ಗಾಂಜಾವನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಮಂಜೇಶ್ವರ ಚೆಕ್‌ಪೋಸ್ಟ್ ಸಮೀಪ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ ಓರ್ವ ವ್ಯಕ್ತಿಯು ಹಿಂಬಾಗಿಲಿನ ಮೂಲಕ ಇಳಿದು ಪರಾರಿಯಾಗಿದ್ದಾನೆ. ಆತನನ್ನು ಅಧಿಕಾರಿಗಳು ಬೆನ್ನಟ್ಟಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ ಎಂದು

ಕಾಸರಗೋಡು: 22 ಕೆ.ಜಿ. ಗಾಂಜಾ ಸಾಗಾಟ, ವಶ Read More »

ಕರಾವಳಿ

ಮಂಗಳೂರು: ಅಪಘಾತದ ಗಾಯಾಳು ಮೃತ್ಯು

ಮಂಗಳೂರು, ಫೆ.13: ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಲಾರಿ ಚಾಲಕ ಇಂದು ಬೆಳಗ್ಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಬೆಳಗಾವಿ ಓಬಳಾಪುರ ಮೂಲದ ಕಿರಣ್ ರಾಥೋಡ್(22) ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ಸ್ಟೀಲ್ ಲೋಡ್ ಅನ್ನು ಕಾಸರಗೋಡಿಗೆ ತಂದಿದ್ದ ರಾಥೋಡ್, ಮತ್ತೆ ಬೆಳಗಾವಿಗೆ ವಾಪಸ್ಸಾಗುವಾಗ ಈ ಘಟನೆ ನಡೆದಿದೆ. ತಲಪಾಡಿ ಟೋಲ್ ಗೇಟ್ ಎದುರುಗಡೆ ಲಾರಿ ನಿಲ್ಲಿಸಿ ಚಹಾ ಕುಡಿಯಲೆಂದು ರಸ್ತೆಯಲ್ಲಿದ್ದ ಸಂದರ್ಭ ಖಾಸಗಿ ಸಿಟಿ ಬಸ್ ಢಿಕ್ಕಿ ಹೊಡೆದಿತ್ತು. ತಲಪಾಡಿಯಿಂದ ಮಂಗಳೂರಿಗೆ

ಮಂಗಳೂರು: ಅಪಘಾತದ ಗಾಯಾಳು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ತಿಂಗಳು ಕಳೆದರೂ ನೇಮಕವಾಗಿಲ್ಲ ಬೆಳ್ಳಾರೆ ಠಾಣೆಗೆ ನೂತನ ಎಸ್ಐ

(ನ್ಯೂಸ್ ಕಡಬ) newskadaba.com, ಬೆಳ್ಳಾರೆ. ಫೆ.12. ಸುಳ್ಯ ತಾಲೂಕಿನ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಯ್ಯ ಡಿ ಎನ್ ರವರು ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡು 2 ತಿಂಗಳುಗಳು ಕಳೆದರೂ, ತೆರವಾದ ಬೆಳ್ಳಾರೆ ಠಾಣೆಯ ಠಾಣಾಧಿಕಾರಿ ಹುದ್ದೆಗೆ ನೂತನ ಎಸ್ ಐ ಇನ್ನೂ ಕೂಡ ನೇಮಕವಾಗಿಲ್ಲ. ವರ್ಗಾವಣೆಗೊಂಡ ಬಳಿಕ ಕೆಲ ದಿನಗಳ ಕಾಲ ಎಎಸ್ ಐ ಮಧುರವರು ಠಾಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಆ ಬಳಿಕ ಪ್ರೊಬೆಷನರಿ ಎಸ್ ಐ ಆಗಿರುವ ಆಂಜನೇಯ ರೆಡ್ಡಿರವರು

ತಿಂಗಳು ಕಳೆದರೂ ನೇಮಕವಾಗಿಲ್ಲ ಬೆಳ್ಳಾರೆ ಠಾಣೆಗೆ ನೂತನ ಎಸ್ಐ Read More »

ಕರಾವಳಿ
Astrology

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಶ್ರೀ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ 9945410150 ಮೇಷ ರಾಶಿ ಆರೋಗ್ಯದಲ್ಲಿ ಹೆಚ್ಚಿನ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ Read More »

ಕರಾವಳಿ

ನಿಧನ ನ್ಯೂಸ್ ➤ ನೆಲ್ಯಾಡಿ: ಕೊಣಾಲು ಪುದುಕಾಟಿಲ್ ನಿವಾಸಿ ಜಾರ್ಜ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ ಫೆ.08. ಕೊಣಾಲು ಪುದುಕಾಟಿಲ್ ನಿವಾಸಿ, ಹಿರಿಯರಾದ ಜಾರ್ಜ್ (97) ರವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ಕೊಣಾಲಿನ ಸ್ವಗೃಹದಲ್ಲಿ ನಿಧನರಾದರು. ಆರಂಭಿಕ ಕಾಲದಲ್ಲಿ ನೆಲ್ಯಾಡಿಯ ಆರ್ಲದಲ್ಲಿ ವ್ಯಾಪಾರಸ್ಥರಾಗಿದ್ದ ಇವರು ಕೊಣಾಲು ಸಂತ ತೋಮಸ್ ಜಾಕೋಬೈಟ್ ಚರ್ಚಿನ ನಿರ್ಮಾಣ ರೂವಾರಿಗಳಲ್ಲಿ ಓರ್ವರಾಗಿದ್ದರು. ಹಲವಾರು ಸಮಾಜಮುಖಿ ಸೇವೆಗಳು, ದಾನ ಧರ್ಮಗಳ ಮೂಲಕ ನೆಲ್ಯಾಡಿ ಪರಿಸರದಲ್ಲಿ ಚಿರಪರಿಚಿತರು. ಮೃತರ ಮನೆಗೆ ವಿವಿಧ ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು ಆಗಮಿಸಿ ಅಂತಿಮ ದರ್ಶನ ಮಾಡುತ್ತಿದ್ದು, ಮೃತರ ಅಂತಿಮ

ನಿಧನ ನ್ಯೂಸ್ ➤ ನೆಲ್ಯಾಡಿ: ಕೊಣಾಲು ಪುದುಕಾಟಿಲ್ ನಿವಾಸಿ ಜಾರ್ಜ್ Read More »

ಕರಾವಳಿ

ಬೆಳ್ಳಾರೆ: ಡಾ| ಬಿ.ಎಂ ಶೆಟ್ಟಿ ಇನ್ನಿಲ್ಲ

(ನ್ಯೂಸ್ ಕಡಬ) newskadaba.com, ಸುಳ್ಯ. ಫೆ.7. ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ವೈದ್ಯ ಡಾ.ಬಿ.ಎಂ.ಶೆಟ್ಟಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವೈದ್ಯರಾಗಿ, ಪ್ರಗತಿಪರ ಕೃಷಿಕರಾಗಿ, ಧಾರ್ಮಿಕ ನೇತಾರರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದ ಬೆಳ್ಳಾರೆಯ ಡಾ.ಬಿ.ಎಂ. ಶೆಟ್ಟಿ ತಡಗಜೆ ಅವರು ದಾವಣಗೆರೆ ಜಿಲ್ಲೆಯ ಜಗಳೂರು ಎಂಬಲ್ಲಿ 25 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿದ್ದರು. ಬಳಿಕ ಊರಿಗೆ ಹಿಂತಿರುಗಿ ಕೃಷಿ ಹಾಗೂ ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, ಸೊಸೆಯಂದಿರು,

ಬೆಳ್ಳಾರೆ: ಡಾ| ಬಿ.ಎಂ ಶೆಟ್ಟಿ ಇನ್ನಿಲ್ಲ Read More »

ಕರಾವಳಿ, ಕ್ರೈಮ್ ನ್ಯೂಸ್

ಇಂದು ಮಾಡನ್ನೂರಿನಲ್ಲಿ ಬೃಹತ್ ಮಜ್ಲಿಸುನ್ನೂರ್, ಪೌರತ್ವ ಸಂರಕ್ಷಣೆ ವಿಶೇಷ ದುವಾ ಸಮ್ಮೇಳನ

(ನ್ಯೂಸ್ ಕಡಬ) Newskadaba.com, ಪುತ್ತೂರು. ಫೆ.7. ನೂರುಲ್ ಹುದಾ ಮಾಡನ್ನೂರ್ ಶಹೀದಿಯ್ಯಾ ನಗರದಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಬೃಹತ್ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ಪೌರತ್ವ ಸಂರಕ್ಷಣೆಯ ಬಗ್ಗೆ ವಿಶೇಷ ದುವಾ ಮಜ್ಲಿಸ್ ಇಂದು ಮಗ್ರಿಬ್ ನಮಾಝ್ ಬಳಿಕ ಬಹು| ಉಸ್ತಾದುಲ್ ಅಸಾತೀದ್ ಶೈಖುನಾ ಚೇಲಕ್ಕಾಡ್ ಉಸ್ತಾದ್ ಇವರ ನೇತೃತ್ವದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹಲವಾರು ಪ್ರಮುಖ ಉಲಮಾಗಳು, ಸಾದಾತುಗಳು, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇಂದು ಮಾಡನ್ನೂರಿನಲ್ಲಿ ಬೃಹತ್ ಮಜ್ಲಿಸುನ್ನೂರ್, ಪೌರತ್ವ ಸಂರಕ್ಷಣೆ ವಿಶೇಷ ದುವಾ ಸಮ್ಮೇಳನ Read More »

ಕರಾವಳಿ, ಕರ್ನಾಟಕ
Scroll to Top