ಕರಾವಳಿ

ಎನ್ ಆರ್ ಸಿ‌ ವಿರುದ್ಧ ಇಂದು ಪರಂಗಿಪೇಟೆಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

(ನ್ಯೂಸ್ ಕಡಬ)‌newskadaba.com, ಮಂಗಳೂರು. ಫೆ. 7. ಸಂವಿಧಾನ ಸಂರಕ್ಷಣಾ ಸಮಿತಿ ಫರಂಗಿಪೇಟೆ, ಮಂಗಳೂರು ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಹಾಗೂ ಧರ್ಮಾಧಾರಿತ ತಾರತಮ್ಯದ ಮಾರಕ ಕರಾಳ ಕಾಯ್ದೆ ಎನ್ ಆರ್ ಸಿ, ಸಿಎಎ, ಎನ್ ಪಿ ಆರ್ ಇದರ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶವು ಇಂದು ಮಧ್ಯಾಹ್ನ 2:30 ಕ್ಕೆ ಫರಂಗಿಪೇಟೆ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು, ಪ್ರಮುಖ ಸಾಹಿತಿಗಳು ಖ್ಯಾತ ವಾಗ್ಮಿಗಳು ಹಾಗೂ ವಿವಿಧ ಸಮಾನ […]

ಎನ್ ಆರ್ ಸಿ‌ ವಿರುದ್ಧ ಇಂದು ಪರಂಗಿಪೇಟೆಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ Read More »

ಕರಾವಳಿ, ಕರ್ನಾಟಕ

ನೂಜಿಬಾಳ್ತಿಲ; ಹಾಸ್ಯ ನಟ ಅರವಿಂದ ಬೋಳಾರ್‍ಗೆ ಸಮ್ಮಾನ

(ನ್ಯೂಸ್ ಕಡಬ) newskadaba.com, ಕಡಬ, ಫೆ.6.  ತುಳು ಚಿತ್ರರಂಗ, ನಾಟಕ ರಂಗಭೂಮಿಯ ಹಾಸ್ಯ ಕಲಾವಿದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರನ್ನು ನೂಜಿಬಾಳ್ತಿಲ ಕನ್ವರೆ ಸಾರಿಮಂಟಮೆಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಸೋಮವಾರ ಕನ್ವರೆ ಸಾರಿಮಂಟಮೆ ಶ್ರೀ ರಾಜನ್ ದೈವದ ನೇಮೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಮಕ್ಕಳಿಂದ ಹಾಗೂ ಗ್ರಾಮಸ್ಥರಿಂದ ವಿವಿಧ ವಿನೋಧಾವಳಿಗಳು, ಬಾಲಕೃಷ್ಣ ಗೌಡ ಶಾಂತಿಗುರಿ ಅವರ ಪ್ರಾಯೋಜಕತ್ವದಲ್ಲಿ ಆನಂದ ಮತ್ತು ಬಳಗದವರ ಉಪ್ಪಿನಂಗಡಿ ಬೀಟ್ ಡಾನ್ಸ್ ವಾರಿಯರ್ಸ್ ತಂಡದಿಂದ ನೃತ್ಯ ವೈಭವಹಾಸ್ಯ ನಡೆಯಿತು.

ನೂಜಿಬಾಳ್ತಿಲ; ಹಾಸ್ಯ ನಟ ಅರವಿಂದ ಬೋಳಾರ್‍ಗೆ ಸಮ್ಮಾನ Read More »

ಕರಾವಳಿ

ಬೈತಡ್ಕ: 31ನೇ ಸ್ವಲಾತ್ ವಾರ್ಷಿಕ ಸಮಾರೋಪ

(ನ್ಯೂಸ್ ಕಡಬ) newskadaba.com, ಸವಣೂರು. ಫೆ.6. ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಬೈತಡ್ಕ, ಕಾಣಿಯೂರು ಇದರ ಆಶ್ರಯದಲ್ಲಿ ಅಸ್ವಲಾತುಲ್ ಕಫೀಲು ಬಿಶ್ಯಫಾಅಃ ಇದರ 31 ನೇ ವಾರ್ಷಿಕ ಹಾಗೂ ನಾಲ್ಕು ದಿನಗಳ ಧಾರ್ಮಿಕ ಮತ ಪ್ರಭಾಷಣದ ಸಮಾರೋಪ ನಡೆಯಿತು. ಮಗ್ರಿಬ್ ನಮಾಜಿನ ಬಳಿಕ ಸಯ್ಯದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್‌ ರವರು ವಾರ್ಷಿಕ ಸ್ವಲಾತ್ ಮಜ್ಲಿಸ್‌ಗೆ ನೇತೃತ್ವ ನೀಡಿ ದುವಾ ನೆರವೇರಿಸಿದರು. ಪಾರತ್ರಿಕ ನರಕಾಗ್ನಿಯಿಂದ ಮುಕ್ತಿಹೊಂದಲು ಮತ್ತು ಐಹಿಕ ಜೀವನದಲ್ಲಿ ಯಶಸ್ಸು ಸಂಪಾದಿಸಬೇಕಾದರೆ ಪ್ರವಾದಿ ಮುಹಮ್ಮದ್(ಸ.ಅ)ರವರ

ಬೈತಡ್ಕ: 31ನೇ ಸ್ವಲಾತ್ ವಾರ್ಷಿಕ ಸಮಾರೋಪ Read More »

ಕರಾವಳಿ

ನಾಳೆಯಿಂದ ಅಜಿಲಮೊಗರು ಮಾಲಿದಾ ಉರೂಸ್

(ನ್ಯೂಸ್ ಕಡಬ) newskadaba.com, ಬಂಟ್ವಾಳ, ಫೆ.6. ಅಜಿಲಮೊಗರುವಿನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಸೈಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ (ರ.ಅ) ಇವರ ಸವಿನೆನಪಿಗಾಗಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧವಾದ 747 ನೇ ಮಾಲಿದಾ ಉರೂಸ್ ನಾಳೆಯಿಂದ (ಫೆಬ್ರವರಿ) 7, 8, 9 ದಿನಾಂಕಗಳಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖ ಉಲಮಾಗಳು, ಸಾದಾತುಗಳು, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ನಾಳೆಯಿಂದ ಅಜಿಲಮೊಗರು ಮಾಲಿದಾ ಉರೂಸ್ Read More »

ಕರಾವಳಿ

ಶಾಸಕರ ಅನುದಾನ ಬಿಡುಗಡೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.6  ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದ.ಕ ಜಿಲ್ಲೆಯ ಶಾಸಕ ಹರೀಶ್ ಪೂಂಜ, ಇವರ 2018-19ನೇ ಸಾಲಿನ ಅನುದಾನದಲ್ಲಿ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮ ವಿವಿಧೆಡೆಗಳಲ್ಲಿ ಸೋಲಾರ್ ದಾರಿದೀಪ ಅಳವಡಿಕೆ ಕಾಮಗಾರಿಗೆ ರೂ. 2 ಲಕ್ಷ, ಕುವೆಟ್ಟು ಗ್ರಾಮದ ಓಡಿಲ್ನಾಳ ಹಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ – ಬಣ್ಣ ಅಳವಡಿಸುವುದಕ್ಕೆ ರೂ. 2 ಲಕ್ಷ, ಕೊಕ್ರಾಡಿ ಗ್ರಾಮದ ಮೂಡುಬೈಲು ಕ್ರಾಸ್‍ನಿಂದ ಪುಣ್ಕೆದಬೆಟ್ಟು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಕಾಂಕ್ರೀಟೀಕರಣಕ್ಕೆ ರೂ.

ಶಾಸಕರ ಅನುದಾನ ಬಿಡುಗಡೆ Read More »

ಕರಾವಳಿ, ಕರ್ನಾಟಕ

ಅಬ್ಬಕ್ಕ ಉತ್ಸವ 2020 – ಕವಿಗೋಷ್ಠಿಗೆ ಅರ್ಜಿ ಅಹ್ವಾನ

(ನ್ಯೂಸ್ ಕಡಬ) newskadaba.com,  ಮಂಗಳೂರು, ಫೆ.6.  ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಜರಗುವ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತ  ಕವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನ್ನಡ, ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ ಹಾಗೂ ಕನ್ನಡಗಳಲ್ಲಿ ಕನಿಷ್ಠ ಒಂದು ಕವನ ಸಂಕಲನವನ್ನು ಪ್ರಕಟಿಸಿರುವ ಕವಿಗಳಿಗೆ ಈ ಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಸಕ್ತರು ತಾವು ಪ್ರಸ್ತುತ ಪಡಿಸಬಯಸುವ ಒಂದು ಕವಿತೆಯೊಂದಿಗೆ ಸಂಪೂರ್ಣ ಸ್ವವಿವರಗಳನ್ನೊಳಗೊಂಡ ಅರ್ಜಿಯನ್ನು ಫೆಬ್ರವರಿ 10 ರೊಳಗೆ ತಲುಪುವಂತೆ ಅಂಚೆ ಅಥವಾ ಮಿಂಚಂಚೆ ಮೂಲಕ  ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ

ಅಬ್ಬಕ್ಕ ಉತ್ಸವ 2020 – ಕವಿಗೋಷ್ಠಿಗೆ ಅರ್ಜಿ ಅಹ್ವಾನ Read More »

ಕರಾವಳಿ, ಕರ್ನಾಟಕ

ಅಬ್ಬಕ್ಕ ಉತ್ಸವ – ಕಲಾತಂಡಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.6. ದ.ಕ ಜಿಲ್ಲೆ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವವನ್ನು 2020ರ ಫೆಬ್ರವರಿ ತಿಂಗಳಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದೆ. ಅಬ್ಬಕ್ಕ ಉತ್ಸವ ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಲು ಜಿಲ್ಲೆಯ ವಿವಿಧ ಕಲಾತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕಲಾತಂಡಗಳು ಅರ್ಜಿ ಸಲ್ಲಿಸುವಾಗ ತಮ್ಮ ಕಲಾಪ್ರಕಾರ, ಈ ಹಿಂದೆ ನೀಡಿರುವ ಕಾರ್ಯಕ್ರಮಗಳ ಬಗ್ಗೆ ವಿವರ, ಛಾಯಾಚಿತ್ರಗಳು ಈ ಬಗ್ಗೆ ಪತ್ರಿಕಾ ವರದಿಗಳನ್ನೊಳಗೊಂಡ ದಾಖಲೆಗಳು ಮತ್ತು ನಿರೀಕ್ಷಿಸುವ ಸಂಭಾವನೆ ವಿವರಗಳೊಂದಿಗೆ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಕನ್ನಡ

ಅಬ್ಬಕ್ಕ ಉತ್ಸವ – ಕಲಾತಂಡಗಳಿಂದ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಪರಿಶಿಷ್ಟರ ಮೀಸಲಾತಿ ಹೆಚ್ಚಳ – ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.6 ಕರ್ನಾಟಕ ಸರ್ಕಾರ ನ್ಯಾಯಮೂತಿ ಹೆಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಸರ್ಕಾರಿ, ಸಾರ್ವಜನಿಕ ಉದ್ಯೋಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕುರಿತು ವರದಿಯನ್ನು ನೀಡುವಂತೆ ಆಯೋಗವನ್ನು ರಚಿಸಲಾಗಿರುತ್ತದೆ. ಹೆಚ್.ಎನ್. ನಾಗಮೋಹನ ದಾಸ್, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚನ್ಯಾಯಾಲಯ ಇವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 10 ರಂದು ಬೆಳಿಗ್ಗೆ 10.30 ಗಂಟೆಗೆ ಕರ್ನಾಟಕ ಕಲಾ ಮಂದಿರ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ, ಹುಣಸೂರು ರಸ್ತೆ,

ಪರಿಶಿಷ್ಟರ ಮೀಸಲಾತಿ ಹೆಚ್ಚಳ – ಸಮಾಲೋಚನಾ ಸಭೆ Read More »

ಕರಾವಳಿ, ಕರ್ನಾಟಕ

ನೂಜಿಬಾಳ್ತಿಲ ಕನ್ವರೆ; ಶ್ರೀರಾಜನ್ ದೈವದ ನೇಮ

(ನ್ಯೂಸ್ ಕಡಬ) newskadaba.com, ಕಡಬ, ಫೆ.6 : ನೂಜಿಬಾಳ್ತಿಲ ಗ್ರಾಮದ ಕನ್ವರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ರಾಜನ್ ದೈವ ನೇಮ ನಡೆಯಿತು. ಸೋಮವಾರ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು, ರಾತ್ರಿ 7.30ಕ್ಕೆ ಬಾಳ್ತಿಲ ಚಾವಡಿಯಿಂದ ಶ್ರೀ ರಾಜನ್ ದೈವದ ಭಂಡಾರ ಹಿಡಿದು ಸಾರಿಮಂಟಮೆಗೆ ಬರಲಾಯಿತು. ಮಂಗಳವಾರ ಬೆಳಿಗ್ಗಿನ ಜಾವ ಶ್ರೀರಾಜನ್ ದೈವ ಹಾಗೂ ಗುಳಿಗ ದೈವದ ನೇಮ ನಡೆಯಿತು. ಬಳಿಕ ಶ್ರೀರಾಜನ್ ದೈವಕ್ಕೆ ಹರಕೆ ಸಲ್ಲಿಸಿ ದೈವವು ಸಾರಿಮಂಟಮೆಯಿಂದ

ನೂಜಿಬಾಳ್ತಿಲ ಕನ್ವರೆ; ಶ್ರೀರಾಜನ್ ದೈವದ ನೇಮ Read More »

ಕರಾವಳಿ

ರೆಂಜಿಲಾಡಿ: ಸತ್ಯಶಾಂತ ಪ್ರತಿಷ್ಠಾನದ ವತಿಯಿಂದ ಧನಸಹಾಯ

(ನ್ಯೂಸ್ ಕಡಬ) newskadaba.com, ಕಡಬ, ಫೆ.6. ಸತ್ಯ ಶಾಂತಿ ಪ್ರತಿಷ್ಠಾನದ ವತಿಯಿಂದ ರೆಂಜಿಲಾಡಿ ಸಾಂತೋಮ್ ಶಾಲೆಯ ವಿದ್ಯಾರ್ಥಿ ತನು ಅವರಿಗೆ ಕಲಿಕಾ ಸಹಯಾರ್ಥವಾಗಿ ಧನಸಹಾಯ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸತ್ಯಶಾಂತ ಪ್ರತಿಷ್ಠಾನದ  ಅಧ್ಯಕ್ಷೆ ಪ್ರಶಸ್ತ ಕಯತ್ರಿ ಶಾಂತ ಕುಂಟಿನಿ, ಅವರ ತಂದೆ ಡಿ.ಕೃಷ್ಣ ಭಟ್,  ಸತ್ಯಾತ್ಮ ಕುಂಟಿನಿ, ಶಿಕ್ಷಕಿಯರಾದ ಜ್ಯೋತಿ, ರೆಹಮತ್, ಪ್ರಿಯಾ, ಶಿಲ್ಪಾ, ಯುವ ಸಾಹಿತಿ ದಿಲೀಪ್ ವೇದಿಕ್ ಕಡಬ ಉಪಸ್ಥಿತರಿದ್ದರು.

ರೆಂಜಿಲಾಡಿ: ಸತ್ಯಶಾಂತ ಪ್ರತಿಷ್ಠಾನದ ವತಿಯಿಂದ ಧನಸಹಾಯ Read More »

ಕರಾವಳಿ
Scroll to Top