ಕರಾವಳಿ

ಬಿದ್ದು ಸಿಕ್ಕಿದ್ದ ಪರ್ಸ್ ಹಿಂತಿರುಗಿಸಿದ ಸವಣೂರು ವಿದ್ಯಾರಶ್ಮಿ ಕಾಲೇಜಿನ ವಿದ್ಯಾರ್ಥಿನಿಯರು ➤ ಪ್ರಾಮಾಣಿಕತೆ ಮೆರೆದ ಯಶ್ವಿನಿ, ಸ್ಪೂರ್ತಿಗೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಫೆ.05. ಸವಣೂರು ವಿದ್ಯಾರಶ್ಮಿ ಪದವಿ ಕಾಲೇಜಿನ ಆವರಣದೊಳಗೆ ಬಿದ್ದು ಸಿಕ್ಕಿದ ಪರ್ಸನ್ನು ವಿದ್ಯಾರ್ಥಿನಿಯರಿಬ್ಬರು ಕಾಲೇಜಿನ ಮುಖ್ಯಸ್ಥರ ಮೂಲಕ ವಾರಿಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಯಶ್ವಿನಿ ಹಾಗೂ ಪ್ರಥಮ ವರ್ಷದ ಬಿ.ಎ. ವಿದ್ಯಾರ್ಥಿನಿ ಸ್ಪೂರ್ತಿ ಎಂಬವರಿಗೆ ಹಣ ಇರುವ ಪರ್ಸ್ ಬಿದ್ದು ಸಿಕ್ಕಿದ್ದು, ಅವರು ಅದನ್ನು ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್. ರೈ ಅವರಿಗೆ ನೀಡಿದ್ದರು. ಬಳಿಕ ಉಪನ್ಯಾಸಕ, ಎನ್ನೆಸ್ಸೆಸ್ ಸಂಯೋಜಕ ವೆಂಕಟ್ರಮಣ ಅವರು ಪರ್ಸ್ […]

ಬಿದ್ದು ಸಿಕ್ಕಿದ್ದ ಪರ್ಸ್ ಹಿಂತಿರುಗಿಸಿದ ಸವಣೂರು ವಿದ್ಯಾರಶ್ಮಿ ಕಾಲೇಜಿನ ವಿದ್ಯಾರ್ಥಿನಿಯರು ➤ ಪ್ರಾಮಾಣಿಕತೆ ಮೆರೆದ ಯಶ್ವಿನಿ, ಸ್ಪೂರ್ತಿಗೆ ವ್ಯಾಪಕ ಪ್ರಶಂಸೆ Read More »

ಕರಾವಳಿ

ಪರೀಕ್ಷಾ ಭಯ ನಿವಾರಣೆಗೆ ಸರಳ ಸೂತ್ರ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ. 5 ಈಗ ಪರೀಕ್ಷಾ ಸಮಯ, ಪರೀಕ್ಷೆ ಮುಗಿದರೂ ಓದಿದಷ್ಟು ಮುಗಿಯುವುದಿಲ್ಲ ಎಂಬುದು ಇಂದಿನ ವಿದ್ಯಾರ್ಥಿಗಳ ವಾದ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಮಕ್ಕಳಿಂದ ಹಿಡಿದು ಪೋಷಕರು, ಶಿಕ್ಷಕರಿಗೂ ಒಂದಲ್ಲ ಒಂದು ರೀತಿಯ ಆತಂಕ ಇದ್ದೇ ಇರುತ್ತದೆ. ಜೊತೆಗೆ ಈ ಸಮಯದಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ವಿದ್ಯಾರ್ಥಿಗಳು ಭಯಭೀತರಾಗುತ್ತಾರೆ. ಇಂತಹ ಸಮಸ್ಯೆಗಳಿಂದ ಒತ್ತಡ ಹೆಚ್ಚಾಗಿ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಮಾಡಲಾಗುವುದಿಲ್ಲ. ಹಾಗಾಗಿ ಈ ತೊಂದರೆಗಳಿಂದ ಮುಕ್ತಿ ಹೊಂದಲು ಧ್ಯಾನ ಉಪಯುಕ್ತವಾಗಲಿದ್ದು, ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಲು

ಪರೀಕ್ಷಾ ಭಯ ನಿವಾರಣೆಗೆ ಸರಳ ಸೂತ್ರ Read More »

ಕರಾವಳಿ

ಶಾಸಕರ ಅನುದಾನ ಬಿಡುಗಡೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ. 5 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪುತ್ತೂರು ಶಾಸಕ  ಸಂಜೀವ ಮಠಂದೂರು, ಇವರ 2018-19ನೇ ಸಾಲಿನ ಅನುದಾನದಲ್ಲಿ ಪುತ್ತೂರು ತಾಲೂಕು ಕಬಕ ಗ್ರಾಮದ ಪೋಳ್ಯ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ರೂ. 3 ಲಕ್ಷ, ಪುತ್ತೂರು ತಾಲೂಕು 34 ನೆಕ್ಕಿಲಾಡಿ ಗ್ರಾಮದ ಬೊಳಂತಿಲ ಹೊಸ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 3.09. ಲಕ್ಷ, ಪುತ್ತೂರು ನಗರಸಭಾ ವ್ಯಾಪ್ತಿಯ 7ನೇ ವಾರ್ಡ್

ಶಾಸಕರ ಅನುದಾನ ಬಿಡುಗಡೆ Read More »

ಕರಾವಳಿ

ಕರಾವಳಿ ಉತ್ಸವ –ವಸ್ತುಪ್ರದರ್ಶನ ಫೆ. 23ರವರೆಗೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ. 5 ಕರಾವಳಿ ಉತ್ಸವದ ಅಂಗವಾಗಿ ನಡೆಯುತ್ತಿರುವ ವಸ್ತು ಪ್ರದರ್ಶನ ಫೆಬ್ರವರಿ 23ರವರೆಗೆ ನಡೆಯಲಿದೆ. ಮಂಗಳೂರಿನ ಮಂಗಳಾ ಸ್ಟೇಡಿಯಂ ಪಕ್ಕದ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ನಡೆಯುತ್ತಿದ್ದು, ವಿವಿಧ ರೀತಿಯ ವಸ್ತುಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಆಹಾರ ಉತ್ಪನ್ನಗಳು, ಗೃಹ ಬಳಕೆ ಸಾಮಾಗ್ರಿಗಳು, ಮಕ್ಕಳ ಆಟಿಕೆ ಸಾಮಾಗ್ರಿಗಳ ಮಾರಾಟ ಪ್ರದರ್ಶನ ನಡೆಯುತ್ತಿದೆ. ಮನೋರಂಜನೆಗೆ ವಿವಿಧ ರೀತಿಯ ಅಮ್ಯೂಸ್ಮೆಂಟ್ಗಳು, ಮಕ್ಕಳ ಮನರಂಜನೆಯ ತಾಣಗಳು ಕರಾವಳಿ ಉತ್ಸವದಲ್ಲಿ ಆಕರ್ಷಿಸುತ್ತಿವೆ. ಈ ವರ್ಷ ಕರಾವಳಿ ಉತ್ಸವ

ಕರಾವಳಿ ಉತ್ಸವ –ವಸ್ತುಪ್ರದರ್ಶನ ಫೆ. 23ರವರೆಗೆ Read More »

ಕರಾವಳಿ, ಕರ್ನಾಟಕ

ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ. 5. ಪುತ್ತೂರು ತಾಲೂಕು, ನರಿಮೊಗರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಖಾಲಿ ಇರುವ ಒಂದು ಮೇಲ್ವಿಚಾರಕರ ಸ್ಥಾನವನ್ನು ಗೌರವ ಸಂಭಾವನೆ ರೂ  7 ಸಾವಿರ ಆಧಾರದ ಮೇಲೆ ಎಸ್.ಎಸ್.ಎಲ್.ಸಿ ಪಾಸಾದ ಹಾಗೂ ಅದೇ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮೇಲ್ವಿಚಾರಕರ ಸ್ಥಾನಕ್ಕೆ ಪ್ರವರ್ಗ3 (ಎ) ಮೀಸಲಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಯ ಜೊತೆಗೆ ಅಗತ್ಯ ದಾಖಲಾತಿಯೊಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆ ದಿನ.

ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದದ ಇದರ ವಾರ್ಷಿಕ ಮಹಾಸಭೆ ➤ ಅಧ್ಯಕ್ಷರಾಗಿ ಗಣರಾಜ್ (ಮುನ್ನಾ), ಕಾರ್ಯದರ್ಶಿಯಾಗಿ ರಮೇಶ್ ಕೇಪುಳು ಆಯ್ಕೆ

(ನ್ಯೂಸ್ ಕಡಬ) newskadaba.com ಆಲಂಕಾರು, ಫೆ.04. ಕೋಟಿ ಚೆನ್ನಯ ಮಿತ್ರವೃಂದ ಆಲಂಕಾರು ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಮಿತ್ರವೃಂದ ಅಧ್ಯಕ್ಷ ರವಿ ಮಾಯಿಲ್ಗರವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಗಣರಾಜ್ (ಮುನ್ನಾ), ಕಾರ್ಯದರ್ಶಿಯಾಗಿ ರಮೇಶ್ ಕೇಪುಳು, ಜೊತೆ ಕಾರ್ಯದರ್ಶಿಯಾಗಿ ಹರ್ಷಿತ್ ಮಾಯಿಲ್ಗ, ಕೊಶಾಧಿಕಾರಿಯಾಗಿ ಚಂದ್ರಶೇಖರ ಪಟ್ಟೆಮಜಲು, ಉಪಾಧ್ಯಕ್ಷರಾಗಿ ಯೋಗೀಶ್ ನಡ್ಡೋಟ್ಟು, ರಮೇಶ್ ಕೊಂಡಾಡಿ, ವಿಠಲ ಪೂಜಾರಿ ಸಾಂತ್ಯ, ಪುರಂದರ ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ಪ್ರವೀಣ್ ಕುಮಾರ್ ಕೆಡೆಂಜಿ, ಮುತ್ತಪ್ಪ ಪೂಜಾರಿ

ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದದ ಇದರ ವಾರ್ಷಿಕ ಮಹಾಸಭೆ ➤ ಅಧ್ಯಕ್ಷರಾಗಿ ಗಣರಾಜ್ (ಮುನ್ನಾ), ಕಾರ್ಯದರ್ಶಿಯಾಗಿ ರಮೇಶ್ ಕೇಪುಳು ಆಯ್ಕೆ Read More »

ಕರಾವಳಿ

ಕಡಬದ ಸರಸ್ವತೀ ವಿದ್ಯಾಲಯದಲ್ಲಿ ರಥಸಪ್ತಮಿ ಕಾರ್ಯಕ್ರಮ ➤ ಸೂರ್ಯನ ಆರಾಧನೆ ಮಾಡುವುದರಿಂದ ಆರೋಗ್ಯ ಸುಧಾರಣೆ: ಕರುಣಾಕರ ಗೋಗಟೆ

(ನ್ಯೂಸ್ ಕಡಬ) newskadaba.com ಕಡಬ, ಫೆ.04. ಶಕ್ತಿ ,ಚೈತನ್ಯ, ಚಟುವಟಿಕೆಯ ಮೂಲ ಶಕ್ತಿಯಾದ ಸೂರ್ಯನ ಆರಾಧನೆ ಮಾಡುವುದರಿಂದ ಆರೋಗ್ಯ ಸುಧಾರಣೆಯಾಗಿ, ಆಯಸ್ಸು ವೃದ್ಧಿಯಾಗುತ್ತದೆ, ಅರುಣೋದಯ ಕಾಲ ಎಂದರೆ ನಾವು ಶಕ್ತಿ ಸಂಚಯನ ಮಾಡಿಕೊಳ್ಳುವ ಸಮಯ ಎಂದು ಕರುಣಾಕರ ಗೋಗಟೆ ನಾಡೋಳಿ ತಿಳಿಸಿದರು. ಅವರು ಸರಸ್ವತೀ ಸಮೂಹ ಸಂಸ್ಥೆಗಳು ಕಡಬ, ಇಲ್ಲಿ ರಥ ಸಪ್ತಮಿಯ ಪ್ರಯುಕ್ತ ನಡೆದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಸೂರ್ಯನ ಆರಾಧನೆಯಿಂದ ನಮ್ಮ ಮನಸ್ಸನ್ನು ನಿಗ್ರಹಿಸಿಕೊಂಡು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು

ಕಡಬದ ಸರಸ್ವತೀ ವಿದ್ಯಾಲಯದಲ್ಲಿ ರಥಸಪ್ತಮಿ ಕಾರ್ಯಕ್ರಮ ➤ ಸೂರ್ಯನ ಆರಾಧನೆ ಮಾಡುವುದರಿಂದ ಆರೋಗ್ಯ ಸುಧಾರಣೆ: ಕರುಣಾಕರ ಗೋಗಟೆ Read More »

ಕರಾವಳಿ

ಕಡಬ ಶ್ರೀಕಂಠಸ್ವಾಮಿ, ಮಹಾಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾ ಜಾತ್ರೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಫೆ.04. ಕಡಬ ಶ್ರೀ ಶ್ರೀಕಂಠಸ್ವಾಮಿ ಮತ್ತು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ 14ನೇ ವರ್ಷದ ಪ್ರತಿಷ್ಠಾ ಜಾತ್ರೋತ್ಸವವು ಫೆ.3ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಫೆ.3ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶಪೂಜೆ ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ನಾಗದೇವರಿಗೆ ಮತ್ತು ದೈವಗಳಿಗೆ ತಂಬಿಲ ಸೇವೆ ನಡೆದು ಶ್ರೀದೇವರಿಗೆ ಮಹಾಪೂಜೆ, ನಡೆಯಿತು ಬಳಿಕ ಪ್ರಸಾದ ವಿತರಿಸಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ

ಕಡಬ ಶ್ರೀಕಂಠಸ್ವಾಮಿ, ಮಹಾಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾ ಜಾತ್ರೋತ್ಸವ Read More »

ಕರಾವಳಿ

ಕುಟ್ರುಪಾಡಿ: ಆಶಾ ಕಾರ್ಯಕರ್ತೆಯ ವಿರುದ್ದ ಕರ್ತವ್ಯ ಲೋಪದ ಆರೋಪ ➤ ಗ್ರಾ.ಪಂ. ನಿರ್ಣಯ ರದ್ದುಗೊಳಿಸದಿದ್ದರೆ ಉಗ್ರ ಪ್ರತಿಭಟನೆ – ದಲಿತ್ ಸೇವಾ ಸಮಿತಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ.04. ಕುಟ್ರುಪಾಡಿ ಗ್ರಾಮದ 4ನೇ ವಾರ್ಡಿನ ಆಶಾ ಕಾರ್ಯಕರ್ತೆ ಜಯಶ್ರೀ ಅವರು ಕರ್ತವ್ಯ ಲೋಪ ಮಾಡುತ್ತಿದ್ದು ಇವರನ್ನು ಆಶಾ ಕಾರ್ಯಕರ್ತೆ ಸೇವೆಯಿಂದ ವಜಾಗೋಳಿಸಬೇಕೆಂಬ ಆ ಭಾಗದ ಗ್ರಾಮಸ್ಥರ ದೂರಿನ ಹಿನ್ನಲೆಯಲ್ಲಿ ಗ್ರಾ.ಪಂ. ಆಡಳಿತ ಮಂಡಳಿ ಜಯಶ್ರೀ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಕಳೆದ ಮಹಿಳಾ ಗ್ರಾಮ ಸಭೆಯಲ್ಲಿ ನಿರ್ಣಯಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಜಯಶ್ರೀ ವಿರುದ್ದ ಪಂಚಾಯತ್ ನಿರ್ಣಯವನ್ನು

ಕುಟ್ರುಪಾಡಿ: ಆಶಾ ಕಾರ್ಯಕರ್ತೆಯ ವಿರುದ್ದ ಕರ್ತವ್ಯ ಲೋಪದ ಆರೋಪ ➤ ಗ್ರಾ.ಪಂ. ನಿರ್ಣಯ ರದ್ದುಗೊಳಿಸದಿದ್ದರೆ ಉಗ್ರ ಪ್ರತಿಭಟನೆ – ದಲಿತ್ ಸೇವಾ ಸಮಿತಿ ಎಚ್ಚರಿಕೆ Read More »

ಕರಾವಳಿ

ಇಂದು ಮತ್ತು ನಾಳೆ ಕಡಬದಲ್ಲಿ ಬೈಕ್, ಕಾರುಗಳ ಎಕ್ಸ್‌ಚೇಂಜ್, ಮಾರಾಟ ಮೇಳ ➤ ಅಡಿಗ ಮೋಟಾರ್ಸ್, ಮಾಂಡವಿ ಮೋಟಾರ್ಸ್ ಸಹಯೋಗದಲ್ಲಿ ಶ್ರೀ ಸರಸ್ವತೀ ಸೊಸೈಟಿಯ ವತಿಯಿಂದ ಸ್ಥಳದಲ್ಲೇ ಸಾಲ ಸೌಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಫೆ.04. ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಮಾಂಡವಿ ಮೋಟಾರ್ಸ್ ಹಾಗೂ ಅಡಿಗ ಮೋಟಾರ್ಸ್ ಗಳ ಸಹಯೋಗದಲ್ಲಿ ವಾಹನಗಳ ಎಕ್ಸ್‌ಚೇಂಜ್ ಹಾಗೂ ಮಾರಾಟ ಮೇಳವು ಫೆಬ್ರವರಿ 04 ಮತ್ತು 05 ರಂದು ಕಡಬದಲ್ಲಿ ನಡೆಯಲಿದೆ. ಕಡಬದ ಸಿ.ಎ. ಬ್ಯಾಂಕ್ ಯೋಗಕ್ಷೇಮ ಸಂಕೀರ್ಣದ ಮುಂಭಾಗದಲ್ಲಿ ನಡೆಯಲಿರುವ ಈ ಎಕ್ಸ್‌ಚೇಂಜ್ ಹಾಗೂ ಸಾಲ ಮೇಳದಲ್ಲಿ ತಮ್ಮ ಯಾವುದೇ ಕಂಪನಿಯ ಹಳೆಯ ವಾಹನಗಳನ್ನು ಉತ್ತಮ ಮಾರುಕಟ್ಟೆ ಬೆಲೆಯಲ್ಲಿ ಎಕ್ಸ್ಚೇಂಜ್ ಮಾಡಿ ಟಿವಿಎಸ್ ಹಾಗೂ ಮಾರುತಿ

ಇಂದು ಮತ್ತು ನಾಳೆ ಕಡಬದಲ್ಲಿ ಬೈಕ್, ಕಾರುಗಳ ಎಕ್ಸ್‌ಚೇಂಜ್, ಮಾರಾಟ ಮೇಳ ➤ ಅಡಿಗ ಮೋಟಾರ್ಸ್, ಮಾಂಡವಿ ಮೋಟಾರ್ಸ್ ಸಹಯೋಗದಲ್ಲಿ ಶ್ರೀ ಸರಸ್ವತೀ ಸೊಸೈಟಿಯ ವತಿಯಿಂದ ಸ್ಥಳದಲ್ಲೇ ಸಾಲ ಸೌಲಭ್ಯ Read More »

ಕರಾವಳಿ, ತಂತ್ರಜ್ಞಾನ, ಲೈಫ್‍ಸ್ಟೈಲ್
Scroll to Top