ಕರಾವಳಿ

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ಮೆಕ್ಯಾನಿಕ್ ಗೆ ಉಗ್ರ ಪಟ್ಟ ➤ ಉಗ್ರರ ಜೊತೆ ಬಂಧನ ಸುದ್ದಿ ಸುಳ್ಳು: ದ.ಕ. ಎಸ್ಪಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.23. ಉತ್ತರ ಭಾರತದಲ್ಲಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಮೆಕ್ಯಾನಿಕ್ ಓರ್ವರನ್ನು ಬಂಧಿಸಲಾಗಿದೆ ಎಂದು ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಯು ಸುಳ್ಳು ಸುದ್ದಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಉಪ್ಪಿನಂಗಡಿಯ ನೆಕ್ಕಿಲಾಡಿಯ ಮೆಕ್ಯಾನಿಕ್ ಮೊಹಮ್ಮದ್ ರಫೀಕ್ ಖಾನ್ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಪತ್ನಿ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಮಹಮ್ಮದ್ ರಫೀಕ್ ಖಾನ್ […]

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ಮೆಕ್ಯಾನಿಕ್ ಗೆ ಉಗ್ರ ಪಟ್ಟ ➤ ಉಗ್ರರ ಜೊತೆ ಬಂಧನ ಸುದ್ದಿ ಸುಳ್ಳು: ದ.ಕ. ಎಸ್ಪಿ ಸ್ಪಷ್ಟನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕುಮಾರಧಾರ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ➤ ಸ್ನಾನಕ್ಕೆಂದು ತೆರಳಿದ್ದ ವೇಳೆ ನಡೆದಿದ್ದ ಘಟನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.23. ಸ್ನಾನಕ್ಕೆಂದು ನದಿ ತೀರಕ್ಕೆ ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ಗುರುವಾರದಂದು ಪತ್ತೆಯಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಡಬ ತಾಲೂಕು ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ‌ ಚಂದಪ್ಪ ಗೌಡ(67) ಎಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ಮನೆ ಸಮೀಪ ಹರಿಯುತ್ತಿರುವ ಕುಮಾರಧಾರ ನದಿಗೆ ಸ್ನಾನಕ್ಕೆಂದು ಹೋದವರು ಕಾಣೆಯಾಗಿದ್ದರು. ಈ ಬಗ್ಗೆ ಮೃತರ ಪುತ್ರಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಮೃತದೇಹವು ಪರಂಗಾಜೆ ಸಮೀಪ ದೊರೆತಿದೆ.      

ಕುಮಾರಧಾರ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ➤ ಸ್ನಾನಕ್ಕೆಂದು ತೆರಳಿದ್ದ ವೇಳೆ ನಡೆದಿದ್ದ ಘಟನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಸ್ನಾನಕ್ಕೆಂದು ತೆರಳಿದ ವ್ಯಕ್ತಿ ನಾಪತ್ತೆ ➤ ನದಿಯಲ್ಲಿ ಮುಳುಗಿರುವ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.22. ಸ್ನಾನಕ್ಕೆಂದು ನದಿ ತೀರಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಮಂಗಳವಾರದಂದು ಕೊಯಿಲದಲ್ಲಿ ನಡೆದಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಡಬ ತಾಲೂಕು ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ‌ ಚಂದಪ್ಪ ಗೌಡ(67) ಎಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ಮನೆ ಸಮೀಪದ ಹೊಳೆ ಬದಿ‌ ಸ್ನಾನಕ್ಕೆಂದು ಹೋದವರು ಕಾಣೆಯಾಗಿರುವುದಾಗಿ ಕಡಬ ಠಾಣೆಗೆ ದೂರು ನೀಡಲಾಗಿದೆ.      

ಕಡಬ: ಸ್ನಾನಕ್ಕೆಂದು ತೆರಳಿದ ವ್ಯಕ್ತಿ ನಾಪತ್ತೆ ➤ ನದಿಯಲ್ಲಿ ಮುಳುಗಿರುವ ಶಂಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಲೇಜು ವಿದ್ಯಾರ್ಥಿ ನಾಪತ್ತೆ ಪ್ರಕರಣ ➤ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಸೆ.22. ಇಲ್ಲಿನ ರಾಮಕುಂಜೇಶ್ವರ ವಸತಿ ನಿಲಯದಿಂದ ಕಾಲೇಜಿಗೂ ಹೋಗದೆ, ಮನೆಗೂ ತೆರಳದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯೋರ್ವ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ. ಚಿಕ್ಕಮಗಳೂರು ನಿವಾಸಿ, ರಾಮಕುಂಜೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಸಿ.ಎಂ. ಎಂಬಾತ ಮಂಗಳವಾರದಂದು ಕಾಲೇಜಿಗೆ ತೆರಳದೆ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಮನೆಯಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಲಾಗಿ ಪತ್ತೆಯಾಗದ ಹಿನ್ನೆಲೆಯಲ್ಲಿ ಅಂಜನ್ ನನ್ನು ಅಪಹರಿಸಿರಬಹುದು ಎಂಬ ಸಂಶಯ ವ್ಯಕ್ತಪಡಿಸಿ ಹಾಸ್ಟೆಲ್ ಮ್ಯಾನೇಜರ್ ಕಡಬ ಠಾಣೆಗೆ

ಕಾಲೇಜು ವಿದ್ಯಾರ್ಥಿ ನಾಪತ್ತೆ ಪ್ರಕರಣ ➤ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ

ಬೆಳ್ಳಂಬೆಳಗ್ಗೆ ಕಡಬದಲ್ಲಿ ಸರಣಿ ಅಪಘಾತ ➤ ಸ್ವಿಫ್ಟ್ ಡಿಸೈರ್, ಎರ್ಟಿಗಾ, ಗೋಕರ್ಣ ಬಸ್ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ಸೆ.21. ಸ್ವಿಫ್ಟ್ ಡಿಸೈರ್, ಎರ್ಟಿಗಾ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬದ ಹಿಂದುಸ್ತಾನ್ ಪೆಟ್ರೋಲ್ ಬಂಕ್‌ ಮುಂಭಾಗದಲ್ಲಿ ಮಂಗಳವಾರದಂದು ಸಂಭವಿಸಿದೆ. ಮರ್ಧಾಳದಿಂದ ಕಡಬ ಕಡೆಗೆ ತೆರಳುತ್ತಿದ್ದ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯ ಸ್ವಿಫ್ಟ್ ಡಿಸೈರ್ ಕಾರನ್ನು ಅದರ ಚಾಲಕ ಡೀಸೆಲ್ ತುಂಬಿಸಲೆಂದು ಪೆಟ್ರೋಲ್ ಬಂಕ್ ಗೆ ಏಕಾಏಕಿ ತಿರುಗಿಸಿದ ವೇಳೆ ಹಿಂದಿನಿಂದ ಬರುತ್ತಿದ್ದ ಎರ್ಟಿಗಾ ನಡುವೆ

ಬೆಳ್ಳಂಬೆಳಗ್ಗೆ ಕಡಬದಲ್ಲಿ ಸರಣಿ ಅಪಘಾತ ➤ ಸ್ವಿಫ್ಟ್ ಡಿಸೈರ್, ಎರ್ಟಿಗಾ, ಗೋಕರ್ಣ ಬಸ್ ನಡುವೆ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಡಿಸೈನ್ ಡೆಕೊರ್ ಇಂಟೀರಿಯರ್ ಡಿಸೈನ್ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ಕಡಬದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಡಿಸೈನ್ ಡೆಕೋರ್ ಇಂಟೀರಿಯರ್ಸ್ ಕಛೇರಿಯು ಭಾನುವಾರದಂದು ಶುಭಾರಂಭಗೊಂಡಿತು. ತಾ.ಪಂ ಮಾಜಿ ಅಧ್ಯಕ್ಷರಾದ ಶೀನಪ್ಪ ಗೌಡ ಬೈತಡ್ಕ ಅವರು ರಿಬ್ಬನ್ ಕಟ್ ಮಾಡುವ ಮೂಲಕ ನೂತನ ಕಛೇರಿಯನ್ನು ಉದ್ಘಾಟಿಸಿದರು. ಬಳ್ಳೇರಿ ಬಿಲ್ಡರ್ಸ್ ನ ಬಾಲಕೃಷ್ಣ ಬಳ್ಳೇರಿಯವರು ದೀಪ ಬೆಳಗಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಡಬ ಅನ್ನಪೂರ್ಣ ಹೋಟೆಲ್ ನ ಮಾಲಕರಾದ ಮುತ್ತಕುಮಾರ್, ಬಾಗ್ಯಲಕ್ಷ್ಮೀ ಎಂಟರ್‌ಪ್ರೈಸಸ್ ನ ಮಾಲಕರಾದ ರಾಧಾಕೃಷ್ಣ ಕೊಲ್ಪೆ, ಶ್ರೀಮತಿ ವೇದಾವತಿ ಶೀನಪ್ಪ ಗೌಡ

ಕಡಬ: ಡಿಸೈನ್ ಡೆಕೊರ್ ಇಂಟೀರಿಯರ್ ಡಿಸೈನ್ ಕಛೇರಿ ಶುಭಾರಂಭ Read More »

ಕರಾವಳಿ, ತಂತ್ರಜ್ಞಾನ, ಲೈಫ್‍ಸ್ಟೈಲ್

ಕಡಬ: ತಾಮ್ರದ ಪಾತ್ರೆ ಹೊಳಪು ಮಾಡುವ ನೆಪದಲ್ಲಿ ವಂಚನೆ ➤ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲು ಕಡಬ ಎಸ್ಐ ಸೂಚನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ತಾಮ್ರದ ಪಾತ್ರೆಯನ್ನು ಹೊಳಪು ಮಾಡಿ ಕೊಡುತ್ತೇನೆಂದು ಸಾರ್ವಜನಿಕರನ್ನು ವಂಚಿಸುತ್ತಿರುವ ಘಟನೆ ಕಡಬದಿಂದ ವರದಿಯಾಗಿದೆ. ಅಪರಿಚಿತ ವ್ಯಕ್ತಿಯೋರ್ವ ಕೋಡಿಂಬಾಳ ಪರಿಸರದಲ್ಲಿ ತಾಮ್ರದ ಪಾತ್ರೆಗಳನ್ನು ಹೊಳಪು ಮಾಡಿಕೊಡುತ್ತೇನೆಂದು ಮನೆಮನೆಗೆ ತೆರಳುತ್ತಿರುವ ಮಾಹಿತಿ ಬಂದಿದ್ದು, ಸದ್ರಿ ವ್ಯಕ್ತಿ ಕಾಣ ಸಿಕ್ಕಿದಲ್ಲಿ ಕೂಡಲೇ ಕಡಬ ಠಾಣೆಗೆ ಮಾಹಿತಿ ನೀಡುವಂತೆ ಎಸ್ಐ ರುಕ್ಮನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      

ಕಡಬ: ತಾಮ್ರದ ಪಾತ್ರೆ ಹೊಳಪು ಮಾಡುವ ನೆಪದಲ್ಲಿ ವಂಚನೆ ➤ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲು ಕಡಬ ಎಸ್ಐ ಸೂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಡಬ ತಾಲೂಕು ಘಟಕ ಉದ್ಘಾಟನೆ ➤ ಮನೆಗೆ ದಾರಿ ಇಲ್ಲದೆ ಕಷ್ಟಪಡುತ್ತಿರುವ ಮರ್ಧಾಳದ ಸೈನಿಕ

(ನ್ಯೂಸ್ ಕಡಬ) newskadaba.com ಕಡಬ, ಸೆ.19. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಡಬ ತಾಲೂಕು ಘಟಕದ ಉದ್ಘಾಟನಾ ಸಮಾರಂಭವು ಮರ್ಧಾಳ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ. ಶಿವಣ್ಣ ಎನ್.ಕೆ. ಉದ್ಘಾಟಿಸಿ ಮಾತನಾಡಿ, ದೇಶ ಕಾಯುವ ಕಾಯಕವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿ ನಿವೃತ್ತ ಜೀವನ ನಡೆಸುತ್ತಿರುವ ಮಾಜಿ ಸೈನಿಕರಿಗೆ ಸೂಕ್ತ ಸ್ಥಾನಮಾನ ಸಿಗಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಬೇಕು. ಸರಕಾರದಿಂದ ನಮಗೆ ಸಿಗಬೇಕಾದ ಸವಲತ್ತುಗಳಿಗಾಗಿ ನಾವು ಸಂಘಟಿತರಾಗಿ ಹೋರಾಟ ಬೇಕಾಗಿದೆ. ಮರ್ಧಾಳದ ಸೈನಿಕ

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಡಬ ತಾಲೂಕು ಘಟಕ ಉದ್ಘಾಟನೆ ➤ ಮನೆಗೆ ದಾರಿ ಇಲ್ಲದೆ ಕಷ್ಟಪಡುತ್ತಿರುವ ಮರ್ಧಾಳದ ಸೈನಿಕ Read More »

ಕರಾವಳಿ

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ‌ ಲಾರಿ ➤ ನೆಲ್ಯಾಡಿ – ಕಡಬ ರಸ್ತೆ ಸಂಚಾರ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಸೆ.15. ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗಡ್ಡವಾಗಿ ನಿಂತ ಪರಿಣಾಮ ನೆಲ್ಯಾಡಿ – ಕಡಬ ರಸ್ತೆ ಬಂದ್ ಆಗಿದೆ. ನೆಲ್ಯಾಡಿ ಹೊಸಮಜಲು ಸಮೀಪದ ದೋಂತಿಲ‌ ಎಂಬಲ್ಲಿ ಬೃಹತ್ ಲಾರಿಯೊಂದು ತಿರಗಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಇದರಿಂದಾಗಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.      

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ‌ ಲಾರಿ ➤ ನೆಲ್ಯಾಡಿ – ಕಡಬ ರಸ್ತೆ ಸಂಚಾರ ಬಂದ್ Read More »

ಕರಾವಳಿ

ಕಡಬ: ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಚೆನ್ನಪ್ಪ ಗೌಡ ಎನ್ಕಾಜೆ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಸೆ.14. ನಿವೃತ್ತ ಪೋಲಿಸ್ ಹೆಡ್ ಕಾನ್ಸ್ ಸ್ಟೇಬಲ್, ರೆಂಜಿಲಾಡಿ ಗ್ರಾಮದ ಎನ್ಕಾಜೆ ನಿವಾಸಿ ಚೆನ್ನಪ್ಪ ಗೌಡ (73ವ) ಅವರು ಅಸೌಖ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಸೋಮವಾರದಂದು ನಿಧನರಾಗಿದ್ದಾರೆ. ಇವರು ಬೆಳ್ಳಾರೆ, ಸುಬ್ರಹ್ಮಣ್ಯ, ಸುಳ್ಯ, ಪುತ್ತೂರು, ಬಿಸಿರೋಡು, ಕುಂದಾಪುರ ಸೇರಿದಂತೆ ಜಿಲ್ಲೆಯ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮೃತರು ಪತ್ನಿ ಚಂದ್ರಾವತಿ, ಪುತ್ರ ಹರಿಪ್ರಸಾದ್ ಅವರನ್ನು ಅಗಲಿದ್ದಾರೆ.      

ಕಡಬ: ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಚೆನ್ನಪ್ಪ ಗೌಡ ಎನ್ಕಾಜೆ ನಿಧನ Read More »

ಕರಾವಳಿ
Scroll to Top