ಕರಾವಳಿ

ಗತಿ ಇಲ್ಲದವರು ನನ್ನನ್ನು ಸಾಕಬೇಡಿ ➤ ಹೀಗೆಂದು ಕಡಬದಲ್ಲಿ ಆಡಿನ ಮೇಲೆ ಬರೆದ ಪೋಸ್ಟರ್ ವೈರಲ್

(ನ್ಯೂಸ್ ಕಡಬ) newskadaba.com ಕಡಬ, ಸೆ.14. ಸಾಕು ಪ್ರಾಣಿಗಳನ್ನು ಬೀದಿಗೆ ಬಿಡುವವರ ವಿರುದ್ಧ ಕಡಬ ಪಟ್ಟಣ ಪಂಚಾಯತ್ ದಂಡ ವಿಧಿಸುತ್ತಿರುವುದರ ಮಧ್ಯೆಯೇ ಸಾಕು ಪ್ರಾಣಿಗಳ ಉಪಟಳದಿಂದ ಬೇಸತ್ತಿರುವ ಸಾರ್ವಜನಿಕರು ಬೀದಿಯಲ್ಲಿರುವ ಆಡಿನ ಕತ್ತಿಗೆ ಪ್ಲೇಕಾರ್ಡ್ ಕಟ್ಟಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳು ರಸ್ತೆಯಲ್ಲೇ ಅಡ್ಡಾಡುವುದರಿಂದಾಗಿ ಅದೆಷ್ಟೋ ಅಪಘಾತಗಳು ಸಂಭವಿಸಿ, ಹಲವಾರು ಮಂದಿ ಗಾಯಗೊಂಡಿದ್ದಾರೆ. ಆದರೆ ಇದೀಗ ಆಡುಗಳನ್ನು ರಸ್ತೆಗೆ ಬಿಡುವವರಿಗೆ ಸಾರ್ವಜನಿಕರೇ ಎಚ್ಚರಿಕೆ ನೀಡಲಾರಂಭಿಸಿದ್ದು, ಗತಿ‌ ಇಲ್ಲದವರು ನನ್ನನ್ನು ಸಾಕಬೇಡಿ, ದಯಮಾಡಿ […]

ಗತಿ ಇಲ್ಲದವರು ನನ್ನನ್ನು ಸಾಕಬೇಡಿ ➤ ಹೀಗೆಂದು ಕಡಬದಲ್ಲಿ ಆಡಿನ ಮೇಲೆ ಬರೆದ ಪೋಸ್ಟರ್ ವೈರಲ್ Read More »

ಕರಾವಳಿ

ಬಲೆನೋ ಕಾರು – ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.14. ಆಟೋ ರಿಕ್ಷಾ ಹಾಗೂ ಬಲೆನೋ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಮಂಗಳವಾರದಂದು ಪುತ್ತೂರಿನ ಬೊಳ್ವಾರಿನಲ್ಲಿ ನಡೆದಿದೆ. ಬೊಳ್ವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದಲ್ಲಿ ಅಪಘಾತ ಸಂಭವಿಸಿದ್ದು, ರಿಕ್ಷಾ ಚಾಲಕ ಕಂಬಳಬೆಟ್ಟು ನಿವಾಸಿ ಫಕೀರ್ ಸಾಹೇಬ್ ಹಾಗೂ ಇನ್ನಿಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಾರಿನ ಒಂದು ಪಾರ್ಶ್ವ ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಬಲೆನೋ ಕಾರು – ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಮೂವರಿಗೆ ಗಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ➤ ಮೂವರು ಮಹಿಳೆಯರ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.14. ಗ್ರಾಹಕರ ಸೋಗಿನಲ್ಲಿ ಪುತ್ತೂರಿನ ಜೋಸ್ ಆಲುಕ್ಕಾಸ್ ಮಳಿಗೆಗೆ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ನಿವಾಸಿಗಳಾದ ಬೀಬಿಜಾನ್, ಹುಸೇನ್ ಬಿ ಹಾಗೂ ಜೈತುಂಬಿ ಎಂದು ಗುರುತಿಸಲಾಗಿದೆ. ಆರೋಪಿಗಳು ಸೆ.1ರಂದು ಜೋಸ್ ಆಲುಕ್ಕಾಸ್‌ಗೆ ಬಂದು ಚಿನ್ನವನ್ನು ಖರೀದಿಸಿದ್ದರು. ಇದೇ ಸಂದರ್ಭದಲ್ಲಿ 2,60,400 ರೂ. ಮೌಲ್ಯದ ಕಿವಿಯ ಚಿನ್ನಾಭರಣವನ್ನು ವಂಚಿಸಿ ಕಳವು ಮಾಡಿಕೊಂಡು

ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ➤ ಮೂವರು ಮಹಿಳೆಯರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ‌.13. ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ತಲೆಯ ಒಳಭಾಗಕ್ಕೆ ಏಟು ಬಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಆಸ್ಕರ್ ಅವರನ್ನು ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸೋಮವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ‌.      

ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಇನ್ನಿಲ್ಲ Read More »

ಕರಾವಳಿ

ಕಡಬ: ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಕಾಣಿಸಿಕೊಂಡ ಬೆಂಕಿ ➤ ಸಾರ್ವಜನಿಕರು ನಂದಿಸಿದ್ದರಿಂದ ತಪ್ಪಿತು ಹೆಚ್ಚಿನ ಅಪಾಯ

(ನ್ಯೂಸ್ ಕಡಬ) newskadaba.com ಕಡಬ, ಸೆ.13. ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಹಠಾತ್‌ ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರದಂದು ಕಡಬ ಪೇಟೆಯಲ್ಲಿ ನಡೆದಿದೆ. ಕಡಬದ ಮಹಾಗಣಪತಿ ದೇವಸ್ಥಾನದ ರಸ್ತೆಯ ದ್ವಾರದ ಸಮೀಪ ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸಾರ್ವಜನಿಕರು ಸೇರಿ ಬೆಂಕಿಯನ್ನು ನಂದಿಸಿದ್ದು, ಹೆಚ್ಚಿನ ಅಪಾಯ ತಪ್ಪಿದಂತಾಗಿದೆ.      

ಕಡಬ: ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಕಾಣಿಸಿಕೊಂಡ ಬೆಂಕಿ ➤ ಸಾರ್ವಜನಿಕರು ನಂದಿಸಿದ್ದರಿಂದ ತಪ್ಪಿತು ಹೆಚ್ಚಿನ ಅಪಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‍ನಲ್ಲಿ ಕಡಬದ ಪ್ರಪ್ರಥಮ ಎಕ್ಸ್‍ರೇ ವಿಭಾಗ ಶುಭಾರಂಭ ➤ ತಜ್ಞ ವೈದ್ಯರ ಭೇಟಿಯ ಜೊತೆಗೆ ಎಕ್ಸ್‍ರೇ ಸೇವೆ ಶ್ಲಾಘನೀಯ: ಸಚಿವ ಎಸ್.ಅಂಗಾರ

ಕಡಬ, ಸೆ.12. ಇಲ್ಲಿನ ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ನಲ್ಲಿ ಸಾರ್ವಜನಿಕರಿಗೆ ಸಿಗುವ ಸೇವೆಯು ಕಡಬ ತಾಲೂಕಿಗೆ ಒಂದು ಉತ್ತಮ ಬೆಳವಣಿಗೆ ಆಗಿದೆ ಎಂದು ಬಂದರು ಮತ್ತು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್, ಅಂಗಾರ ಹೇಳಿದರು. ಅವರು ಭಾನುವಾರದಂದು ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‍ನಲ್ಲಿ ಕಡಬದಲ್ಲಿ ಪ್ರಪ್ರಥಮ ಬಾರಿಗೆ ಆರಂಭಗೊಂಡ ಎಕ್ಸ್‍ರೇ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಕಡಬ ತಾಲೂಕು ಆಗಿದೆಯಾದರೂ ಕಡಬದಲ್ಲಿ ಇರುವುದು ಸಮುದಾಯ ಆಸ್ಪತ್ರೆಯಾಗಿರುವುದರಿಂದ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ, ಆದುದರಿಂದ ಇಲ್ಲಿ ತಾಲೂಕು

ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‍ನಲ್ಲಿ ಕಡಬದ ಪ್ರಪ್ರಥಮ ಎಕ್ಸ್‍ರೇ ವಿಭಾಗ ಶುಭಾರಂಭ ➤ ತಜ್ಞ ವೈದ್ಯರ ಭೇಟಿಯ ಜೊತೆಗೆ ಎಕ್ಸ್‍ರೇ ಸೇವೆ ಶ್ಲಾಘನೀಯ: ಸಚಿವ ಎಸ್.ಅಂಗಾರ Read More »

ಕರಾವಳಿ, ತಂತ್ರಜ್ಞಾನ, ಲೈಫ್‍ಸ್ಟೈಲ್

ನೆಲ್ಯಾಡಿ: ಉದನೆ ಗಣಪತಿ ಕಟ್ಟೆ ಧ್ವಂಸ ಪ್ರಕರಣ ➤ 24 ಗಂಟೆಗಳ ಒಳಗೆ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.12. ಇಲ್ಲಿಗೆ ಸಮೀಪದ ಉದನೆ ಎಂಬಲ್ಲಿರುವ ಗಣಪತಿ ಕಟ್ಟೆಯನ್ನು ಕಲ್ಲು ಎತ್ತಿ ಹಾಕಿ ಹಾನಿಗೊಳಿಸಿರುವ ಪ್ರಕರಣದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರದ ಬಾಗಲ್ ಪುರ ಜಿಲ್ಲೆಯ ಗೋಪಾಲ್ ಪುರ್ ತಾಲೂಕಿನ ಗರ್ನಿಯಾ ನಿವಾಸಿ ಸುಬೀಂದರ್ ಎಂಬವರ ಪುತ್ರ ರವೀಂದ್ರ ಕುಮಾರ್ (25) ಎಂದು ಗುರುತಿಸಲಾಗಿದೆ. ಉದನೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶುಕ್ರವಾರದಂದು ಉದನೆ ಗಣಪತಿ ಕಟ್ಟೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಗಣಪತಿ ಕಟ್ಟೆಯ ಮೆಟ್ಟಿಲನ್ನು

ನೆಲ್ಯಾಡಿ: ಉದನೆ ಗಣಪತಿ ಕಟ್ಟೆ ಧ್ವಂಸ ಪ್ರಕರಣ ➤ 24 ಗಂಟೆಗಳ ಒಳಗೆ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಕಿಡ್ಸ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಕರ್ನಾಟಕ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ (ಕಿಡ್ಸ್) ಪುತ್ತೂರು ಧರ್ಮಪ್ರಾಂತ್ಯ, ಕಾರೀತಾಸ್ ಇಂಡಿಯಾ ಸಹಯೋಗದಲ್ಲಿ ಪಟ್ಟಣ ಪಂಚಾಯತ್ ಕಡಬ ಮತ್ತು ಸಮುದಾಯ ಅರೋಗ್ಯ ಕೇಂದ್ರ ಕಡಬದ ಸಹಕಾರದಲ್ಲಿ ಕಡಬ ಸಮುದಾಯ ಅರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಕೊರೋನಾ ವಾರಿಯರ್ಸ್‌ ಗಳಾದ 25 ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್ ಗಳನ್ನು ಸಂಸ್ಥೆಯ ವತಿಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯಾಧಿಕಾರಿ ಶ್ರೀಮತಿ ಸುಚಿತ್ರ ರಾವ್, ಕಡಬ ಪಟ್ಟಣ ಪಂಚಾಯತ್

ಕಡಬ: ಕಿಡ್ಸ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ Read More »

ಕರಾವಳಿ

ವಿದ್ಯೆ, ಸಂಸ್ಕೃತಿಯ ಪ್ರೋತ್ಸಾಹವೇ ನಿಜವಾದ ಗಣಪನ ಆರಾಧನೆ-ನಳಿನ್ ಕುಮಾರ್ ಕಟೀಲ್ ➤ ಪಾಲ್ತಾಡಿ : ಶ್ರೀಗಣೇಶೋತ್ಸವ, ಸಾಧಕರಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ನಮ್ಮ ಪ್ರತಿಯೊಂದು ಆಚರಣೆಯ ಹಿಂದೆಯೂ ತನ್ನದೇ ಆದ ಮಹತ್ವವಿದೆ. ಗಣೇಶನ ರೂಪವೇ ಜೀವನ ಪಾಠ ಕಲಿಸುತ್ತದೆ. ವಿದ್ಯೆ, ಸಾಂಸ್ಕೃತಿಕ ಕ್ಷೇತ್ರ ಪ್ರೋತ್ಸಾಹವೇ ನಿಜವಾದ ಗಣಪನ ಆರಾಧನೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ತಮ್ಮ ಹುಟ್ಟೂರು ಪಾಲ್ತಾಡಿ ಗ್ರಾಮದ ಮಂಜುನಾಥ ನಗರದಲ್ಲಿ ಶ್ರೀ ಗಣೇಶೋತ್ಸವದ ಅಂಗವಾಗಿ ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಹಾಗೂ ಶ್ರೀಸಿದ್ದಿ ವಿನಾಯಕ ಸೇವಾ ಸಂಘದ ವತಿಯಿಂದ ನಡೆದ ಶೈಕ್ಷಣಿಕ ಸಾಧನೆಗೈದ

ವಿದ್ಯೆ, ಸಂಸ್ಕೃತಿಯ ಪ್ರೋತ್ಸಾಹವೇ ನಿಜವಾದ ಗಣಪನ ಆರಾಧನೆ-ನಳಿನ್ ಕುಮಾರ್ ಕಟೀಲ್ ➤ ಪಾಲ್ತಾಡಿ : ಶ್ರೀಗಣೇಶೋತ್ಸವ, ಸಾಧಕರಿಗೆ ಅಭಿನಂದನೆ Read More »

ಕರಾವಳಿ

ಕಡಬ: ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಮನೆ ಪಕ್ಕದ ಗುಡ್ಡದ ಕಡೆಗೆ ತೆರಳಿದ ಮಹಿಳೆಯೋರ್ವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಕಡಬ ತಾಲೂಕಿನ ಹಳೆನೇರಂಕಿ ಗ್ರಾಮದ ಮಡೆಂಜಿಮಾರು ನಿವಾಸಿ ಹೊನ್ನಮ್ಮ(58) ಎಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಇವರು ಸೆಪ್ಟೆಂಬರ್ 05 ರಂದು ತನ್ನ ಮನೆಯ ಪಕ್ಕದ ಗುಡ್ಡದ ಕಡೆಗೆ ತೆರಳಿದ್ದು, ಆ ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ಆಕೆಯ

ಕಡಬ: ಮಹಿಳೆ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top