ಕರಾವಳಿ

ಕಡಬ ತಾಲೂಕಿನಲ್ಲಿ ಏರಿಕೆ ಕಂಡ ಕೊರೋನಾ ಸೋಂಕು ➤ 18 ಮಂದಿಗೆ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿದ್ದ ಕೊರೋನಾ ಸೋಂಕು ಇದೀಗ ಮತ್ತೆ ಏರಿಕೆ ಕಂಡಿದ್ದು, ಇಂದು 18 ಮಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಆರೋಗ್ಯ ಇಲಾಖೆಯ ವರದಿಯಂತೆ ಕಡಬ ತಾಲೂಕಿನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 18 ಕೋವಿಡ್ ಪ್ರಕರಣ ದಾಖಲಾಗಿದ್ದು, ಪುತ್ತೂರು ತಾಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.      

ಕಡಬ ತಾಲೂಕಿನಲ್ಲಿ ಏರಿಕೆ ಕಂಡ ಕೊರೋನಾ ಸೋಂಕು ➤ 18 ಮಂದಿಗೆ ಪಾಸಿಟಿವ್ Read More »

ಕರಾವಳಿ

ನೆಲ್ಯಾಡಿ: ಗಣಪತಿ ಕಟ್ಟೆಯನ್ನು ಹಾನಿಗೊಳಿಸಿದ ಕಿಡಿಗೇಡಿಗಳು ➤ ಸ್ಥಳದಲ್ಲಿ ಜಮಾಯಿಸಿದ ಭಕ್ತರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.11. ಇಲ್ಲಿಗೆ ಸಮೀಪದ ಉದನೆ ಎಂಬಲ್ಲಿರುವ ಗಣಪತಿ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಕಲ್ಲು ಎತ್ತಿ ಹಾಕಿ ಹಾನಿಗೊಳಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಉದನೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶುಕ್ರವಾರದಂದು ಉದನೆ ಗಣಪತಿ ಕಟ್ಟೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಬಾಳೆಗಿಡಗಳನ್ನು ಕಿತ್ತೆಸೆದು ಕಲ್ಲು ಎತ್ತಿಹಾಕಿ ಮೆಟ್ಟಿಲನ್ನು ಹಾನಿಗೊಳಿಸಿರುವುದು ಕಂಡುಬಂದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ

ನೆಲ್ಯಾಡಿ: ಗಣಪತಿ ಕಟ್ಟೆಯನ್ನು ಹಾನಿಗೊಳಿಸಿದ ಕಿಡಿಗೇಡಿಗಳು ➤ ಸ್ಥಳದಲ್ಲಿ ಜಮಾಯಿಸಿದ ಭಕ್ತರು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

2 ತಿಂಗಳ ಕಾಲ ಕೇರಳಕ್ಕೆ ಹೋಗುವುದು, ಬರುವುದಕ್ಕೆ ಸಂಪೂರ್ಣ ನಿಷೇಧ ➤ ದ.ಕ. ಜಿಲ್ಲಾಧಿಕಾರಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.09. ನೆರೆ ರಾಜ್ಯ ಕೇರಳದಲ್ಲಿ ಕೊರೋನಾ ಮತ್ತು ನಿಫಾ ವೈರಸ್ ಹರಡುತ್ತಿರುವುದರಿಂದ ಕೇರಳ ಕಡೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವವರನ್ನು ಮತ್ತು ಅಲ್ಲಿಗೆ ತೆರಳುವವರನ್ನು ಮುಂದಿನ ಎರಡು ತಿಂಗಳ ಕಾಲ ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಪ್ಯಾರಾ ಮೆಡಿಕಲ್, ನರ್ಸಿಂಗ್ ಇನ್ನಿತರ ಉದ್ದೇಶಕ್ಕಾಗಿ ಕೇರಳದಿಂದ ಜಿಲ್ಲೆಗೆ ಬರುವ ವಿದ್ಯಾರ್ಥಿಗಳು ಅಕ್ಟೋಬರ್ ಅಂತ್ಯದ ವರೆಗೆ ಮಂಗಳೂರಿಗೆ ಬಾರದಂತೆ ಆಯಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಅಲ್ಲದೆ,

2 ತಿಂಗಳ ಕಾಲ ಕೇರಳಕ್ಕೆ ಹೋಗುವುದು, ಬರುವುದಕ್ಕೆ ಸಂಪೂರ್ಣ ನಿಷೇಧ ➤ ದ.ಕ. ಜಿಲ್ಲಾಧಿಕಾರಿ ಆದೇಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಅಡಿಕೆ ಸುಳಿಕೊಳೆ ರೋಗ ಪತ್ತೆ ➤ ಸಿಪಿಸಿಆರ್ ಐ ವಿಜ್ಞಾನಿಗಳ ತಂಡ ಭೇಟಿ

(ನ್ಯೂಸ್ ಕಡಬ) Newskadaba.com ಕಡಬ, ಸೆ. 08. ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಎಂಬವರ ತೋಟದಲ್ಲಿ ಮಹಾಳಿ (ಕಾಯಿ ಕೊಳೆರೋಗ), ಚೆಂಡೆ ಕೊಳೆರೋಗ ಮತ್ತು ಸುಳಿ ಕೊಳೆರೋಗ ಪತ್ತೆಯಾಗಿದ್ದು, ಸಿಪಿಸಿಆರ್.ಐ ವಿಟ್ಲದ ವಿಜ್ಞಾನಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸಿದರು. ಕಳೆದ ಕೆಲವು ಸಮಯಗಳಿಂದ ಸುರೇಶ್ ಎಂಬವರ ತೋಟದಲ್ಲಿ ಅಡಿಕೆ ಮರಗಳು ಸಿರಿ ಕೊಳೆತು ಸಾಯುತ್ತಿದ್ದವು. ಅಡಿಕೆ ಮರ ಹಳದಿ ಬಣ್ಣಕ್ಕೆ ತಿರುಗಿ ಬಳಿಕ ಮರದ ಕೊಂಬೆ

ಕಡಬ: ಅಡಿಕೆ ಸುಳಿಕೊಳೆ ರೋಗ ಪತ್ತೆ ➤ ಸಿಪಿಸಿಆರ್ ಐ ವಿಜ್ಞಾನಿಗಳ ತಂಡ ಭೇಟಿ Read More »

ಕರಾವಳಿ, ಕರ್ನಾಟಕ

ಕೈಕಂಬ: ಹೆದ್ದಾರಿಗೆ ಉರುಳಿ ಬಿದ್ದ ಮರ ಪಿಡಬ್ಲ್ಯೂಡಿಯಿಂದ ತೆರವು ➤ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು

(ನ್ಯೂಸ್ ಕಡಬ) newskadaba.com ಕಡಬ, ಸೆ.07. ರಾಜ್ಯ ಹೆದ್ದಾರಿ 114 ರ ಗುಂಡ್ಯ ಸುಬ್ರಹ್ಮಣ್ಯ ರಸ್ತೆಯ ಚೇರು ಸಮೀಪ ಹೆದ್ದಾರಿಗೆ ಅಡ್ಡವಾಗಿ ಬಿದ್ದಿದ್ದ ಬೃಹತ್ ಮರವನ್ನು ಲೋಕೋಪಯೋಗಿ ಇಲಾಖೆಯಿಂದ ತೆರವುಗೊಳಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ರಸ್ತೆಗಡ್ಡವಾಗಿ ಉರುಳಿ ಬಿದ್ದಿತ್ತು. ಪರಿಣಾಮ ರಸ್ತೆಯ ಇಕ್ಕೆಲಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಚಾರ ತಿಳಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.      

ಕೈಕಂಬ: ಹೆದ್ದಾರಿಗೆ ಉರುಳಿ ಬಿದ್ದ ಮರ ಪಿಡಬ್ಲ್ಯೂಡಿಯಿಂದ ತೆರವು ➤ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು Read More »

ಕರಾವಳಿ

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ.07. ಇಲ್ಲಿನ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೋಮವಾರದಂದು ವಿಧ್ಯುಕ್ತವಾಗಿ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕರಾದ ರೆ. ಫಾದರ್ ಅರುಣ್ ವಿಲ್ಸನ್ ಲೋಬೊರವರು “ಡಾ. ಎಸ್. ರಾಧಾಕೃಷ್ಣನ್ ರವರ ಆದರ್ಶವು ಎಳೆಯ ಮನಸ್ಸುಗಳಲ್ಲಿ ನೆಲೆ ನಿಲ್ಲಲು ಹಾಗೂ ನಮ್ಮ ಗುರುಪರಂಪರೆಯ ಬಗ್ಗೆ ಗೌರವ ಹೊಂದಿ ವಿದ್ಯಾರ್ಥಿಗಳು ಉತ್ತಮ ಮನಸ್ಸಿನ ಹೃದಯವಂತ ವ್ಯಕ್ತಿಗಳಾಗಿ ಬೆಳೆಯಲು ಇಂತಹ ಕಾರ್ಯಕ್ರಮ ಪೂರಕವಾಗಿದೆ. ಶಿಕ್ಷಕರನ್ನು ಗೌರವಿಸುವ ಜೊತೆಗೆ ಅವರ ಮಾರ್ಗದರ್ಶನದಂತೆ

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ Read More »

ಕರಾವಳಿ

ಚೇರು: ರಸ್ತೆಗಡ್ಡವಾಗಿ ಉರುಳಿ ಬಿದ್ದ ಬೃಹತ್ ಗಾತ್ರದ ಮರ ➤ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಸೆ.07. ರಾಜ್ಯ ಹೆದ್ದಾರಿ 114 ರ ಗುಂಡ್ಯ ಸುಬ್ರಹ್ಮಣ್ಯ ರಸ್ತೆಯ ಚೇರು ಸಮೀಪ ಬೃಹತ್ ಗಾತ್ರದ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಮಂಗಳವಾರ ಬೆಳಿಗ್ಗೆ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ರಸ್ತೆಗಡ್ಡವಾಗಿ ಉರುಳಿ ಬಿದ್ದಿದೆ. ಪರಿಣಾಮ ರಸ್ತೆಯ ಇಕ್ಕೆಲಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿವೆ.    

ಚೇರು: ರಸ್ತೆಗಡ್ಡವಾಗಿ ಉರುಳಿ ಬಿದ್ದ ಬೃಹತ್ ಗಾತ್ರದ ಮರ ➤ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿ ಬಂದ್ Read More »

ಕರಾವಳಿ

ಕಡಬ: ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರು

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಡಿಸೈರ್ ಕಾರೊಂದು ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದ ಘಟನೆ ಸೋಮವಾರ ರಾತ್ರಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಎಂಬಲ್ಲಿ ಸಂಭವಿಸಿದೆ. ಉಪ್ಪಿನಂಗಡಿಯಿಂದ ಕಡಬ ಕಡೆಗೆ ಬರುತ್ತಿದ್ದ ಕಾರು ಬಲ್ಯ ಸಮೀಪದ ಪಡ್ನೂರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರು ಸಣ್ಣಪುಟ್ಟ ತರಚಿದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.        

ಕಡಬ: ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಆತೂರು:‌ ಜೀಪ್ – ಬೈಕ್ ನಡುವೆ ಢಿಕ್ಕಿ➤ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಜೀಪ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಜೀಪ್ ಪಲ್ಟಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆತೂರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಆತೂರು ನಿವಾಸಿ ಇಸ್ಮಾಯಿಲ್ ಎಂಬವರು ಸಾಮಾನು ಖರೀದಿಸಲೆಂದು ಅಂಗಡಿಗೆ ತೆರಳುತ್ತಿದ್ದ ವೇಳೆ ಉಪ್ಪಿನಂಗಡಿಯಿಂದ ಆತೂರು ಕಡೆಗೆ ಬರುತ್ತಿದ್ದ ಜೀಪ್ ಆಯಿಶಾ ಶಾಲೆಯ ಬಳಿ ಢಿಕ್ಕಿ ಹೊಡೆದು ಪಲ್ಟಿಯಾಗಿದೆ‌. ಘಟನೆಯಲ್ಲಿ ರಸ್ತೆಗೆಸೆಯಲ್ಪಟ್ಟ ಇಸ್ಮಾಯಿಲ್ ಹಾಗೂ ಜೀಪ್ ನಲ್ಲಿದ್ದ

ಆತೂರು:‌ ಜೀಪ್ – ಬೈಕ್ ನಡುವೆ ಢಿಕ್ಕಿ➤ ಸವಾರ ಗಂಭೀರ Read More »

ಕರಾವಳಿ

ಕಡಬ: ಅಪರಿಚಿತ ಮೃತದೇಹದ ಗುರುತು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಇಲ್ಲಿಗೆ ಸಮೀಪದ ನೆಟ್ಟಣ ರೈಲ್ವೇ ನಿಲ್ದಾಣದ ಪಕ್ಕದ ಗುಡ್ಡದಲ್ಲಿ ವ್ಯಕ್ತಿಯೋರ್ವರ ಮೃತದೇಹವೊಂದು ಸೋಮವಾರದಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಪತಂಜಲಿ ನಗರ ನಿವಾಸಿ ದಿ| ಶಿವಲಿಂಗಯ್ಯ ಎಂಬವರ ಪುತ್ರ ರಾಜಶೇಖರ್ ಎಂದು ಗುರುತಿಸಲಾಗಿದೆ. ರೈಲು ನಿಲ್ದಾಣದ ಪಕ್ಕದ ಗುಡ್ಡದಲ್ಲಿ ಮಲಗಿರುವ ಸ್ಥಿತಿಯಲ್ಲಿ ರಾಜಶೇಖರ್ ಅವರ ಮೃತದೇಹವು ಪತ್ತೆಯಾಗಿದೆ. ಬಾಯಿಯಲ್ಲಿ ರಕ್ತದ ಕಲೆ ಕಂಡುಬಂದಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವುದು ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ. ಸ್ಥಳೀಯರು

ಕಡಬ: ಅಪರಿಚಿತ ಮೃತದೇಹದ ಗುರುತು ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top