ಕಡಬ: ತಾಮ್ರದ ಪಾತ್ರೆ ಹೊಳಪು ಮಾಡುವ ನೆಪದಲ್ಲಿ ವಂಚನೆ ➤ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲು ಕಡಬ ಎಸ್ಐ ಸೂಚನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ತಾಮ್ರದ ಪಾತ್ರೆಯನ್ನು ಹೊಳಪು ಮಾಡಿ ಕೊಡುತ್ತೇನೆಂದು ಸಾರ್ವಜನಿಕರನ್ನು ವಂಚಿಸುತ್ತಿರುವ ಘಟನೆ ಕಡಬದಿಂದ ವರದಿಯಾಗಿದೆ.

ಅಪರಿಚಿತ ವ್ಯಕ್ತಿಯೋರ್ವ ಕೋಡಿಂಬಾಳ ಪರಿಸರದಲ್ಲಿ ತಾಮ್ರದ ಪಾತ್ರೆಗಳನ್ನು ಹೊಳಪು ಮಾಡಿಕೊಡುತ್ತೇನೆಂದು ಮನೆಮನೆಗೆ ತೆರಳುತ್ತಿರುವ ಮಾಹಿತಿ ಬಂದಿದ್ದು, ಸದ್ರಿ ವ್ಯಕ್ತಿ ಕಾಣ ಸಿಕ್ಕಿದಲ್ಲಿ ಕೂಡಲೇ ಕಡಬ ಠಾಣೆಗೆ ಮಾಹಿತಿ ನೀಡುವಂತೆ ಎಸ್ಐ ರುಕ್ಮನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Scroll to Top