ಬೆಳ್ಳಂಬೆಳಗ್ಗೆ ಕಡಬದಲ್ಲಿ ಸರಣಿ ಅಪಘಾತ ➤ ಸ್ವಿಫ್ಟ್ ಡಿಸೈರ್, ಎರ್ಟಿಗಾ, ಗೋಕರ್ಣ ಬಸ್ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ಸೆ.21. ಸ್ವಿಫ್ಟ್ ಡಿಸೈರ್, ಎರ್ಟಿಗಾ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬದ ಹಿಂದುಸ್ತಾನ್ ಪೆಟ್ರೋಲ್ ಬಂಕ್‌ ಮುಂಭಾಗದಲ್ಲಿ ಮಂಗಳವಾರದಂದು ಸಂಭವಿಸಿದೆ.

ಮರ್ಧಾಳದಿಂದ ಕಡಬ ಕಡೆಗೆ ತೆರಳುತ್ತಿದ್ದ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯ ಸ್ವಿಫ್ಟ್ ಡಿಸೈರ್ ಕಾರನ್ನು ಅದರ ಚಾಲಕ ಡೀಸೆಲ್ ತುಂಬಿಸಲೆಂದು ಪೆಟ್ರೋಲ್ ಬಂಕ್ ಗೆ ಏಕಾಏಕಿ ತಿರುಗಿಸಿದ ವೇಳೆ ಹಿಂದಿನಿಂದ ಬರುತ್ತಿದ್ದ ಎರ್ಟಿಗಾ ನಡುವೆ ಢಿಕ್ಕಿ ಸಂಭವಿಸಿದೆ. ಈ ಸಂದರ್ಭದಲ್ಲಿ ಗೋಕರ್ಣಕ್ಕೆ ತೆರಳುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಎರ್ಟಿಗಾ ಕಾರಿಗೆ ಹಿಂಬದಿಯಿಂದ ಢಿಕ್ಕಿಯಾಗಿದೆ. ಘಟನೆಯಲ್ಲಿ ಎಲ್ಲಾ ವಾಹನದವರು ಸಣ್ಣಪುಟ್ಟ ತರಚಿದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

.

 

 

 

 

 

Scroll to Top