ಕಡಬ: ಸ್ನಾನಕ್ಕೆಂದು ತೆರಳಿದ ವ್ಯಕ್ತಿ ನಾಪತ್ತೆ ➤ ನದಿಯಲ್ಲಿ ಮುಳುಗಿರುವ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.22. ಸ್ನಾನಕ್ಕೆಂದು ನದಿ ತೀರಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಮಂಗಳವಾರದಂದು ಕೊಯಿಲದಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಕಡಬ ತಾಲೂಕು ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ‌ ಚಂದಪ್ಪ ಗೌಡ(67) ಎಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ಮನೆ ಸಮೀಪದ ಹೊಳೆ ಬದಿ‌ ಸ್ನಾನಕ್ಕೆಂದು ಹೋದವರು ಕಾಣೆಯಾಗಿರುವುದಾಗಿ ಕಡಬ ಠಾಣೆಗೆ ದೂರು ನೀಡಲಾಗಿದೆ.

 

 

 

Scroll to Top