ಕ್ರೈಮ್ ನ್ಯೂಸ್

ಗಾಢ ನಿದ್ರೆಯಲ್ಲಿದ್ದ ವೇಳೆ ಮನೆಯಲ್ಲಿ ಬೆಂಕಿ ಅವಘಡ ➤ ಒಂದೇ ಕುಟುಂಬದ ನಾಲ್ವರು ಸಜೀವ ದಹನ

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಎ. 16. ಮನೆಯೊಂದರಲ್ಲಿ ನಡೆದ ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆದಿದೆ. ಮೃತಪಟ್ಟವರನ್ನು ವಿಶಾಖಪಟ್ಟಣಂನ ಮಿಥಿಲಾಪುರಿ ಉಡಾ ನಗರದ ನಿವಾಸಿ ಬಂಗಾರು ನಾಯ್ಡು (50), ಪತ್ನಿ ಡಾ.ನಿರ್ಮಲಾ (45) ಮಕ್ಕಳಾದ ದೀಪಕ್ (22) ಹಾಗೂ ಕಶ್ಯಪ್ (19) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ನೆಲೆಸಿದ್ದ ಈ ಕುಟುಂಬ ಕಳೆದ 8 ತಿಂಗಳಿನಿಂದ ವಿಶಾಖಪಟ್ಟಣಂ ನ ಆದಿತ್ಯ ಟವರ್ಸ್ ನಲ್ಲಿ ವಾಸಿಸುತ್ತಿತ್ತು. ಆದರೆ […]

ಗಾಢ ನಿದ್ರೆಯಲ್ಲಿದ್ದ ವೇಳೆ ಮನೆಯಲ್ಲಿ ಬೆಂಕಿ ಅವಘಡ ➤ ಒಂದೇ ಕುಟುಂಬದ ನಾಲ್ವರು ಸಜೀವ ದಹನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪ್ರೇಮ ಪ್ರಕರಣ ➤ 17 ವರ್ಷದ ಬಾಲಕನ ಹತ್ಯೆಗೈದ ಬಾಲಕಿಯ ತಂದೆ

(ನ್ಯೂಸ್ ಕಡಬ) newskadaba.com ಮಂಡ್ಯ, ಎ. 16. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಬಾಲಕನೋರ್ವನನ್ನು ಭೀಕರ ಹತ್ಯೆ ಮಾಡಿರುವ ಘಟನೆ ನಗರದ ಕಲ್ಲಹಳ್ಳಿ ಬಡಾವಣೆಯಲ್ಲಿ ನಡೆದಿದೆ. ಕಲ್ಲಹಳ್ಳಿಯ 17 ವರ್ಷದ ಬಾಲಕನೋರ್ವ ಅದೇ ಬಡಾವಣೆಯ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಈ ವಿಚಾರ ತಿಳಿದ ಬಾಲಕಿಯ ಮನೆಯವರು ಬುಧವಾರದಂದು ರಾತ್ರಿ ಬಾಲಕನನ್ನು ಮನೆಗೆ ಕರೆದು ಆತನಿಗೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿದ್ದ ಬಾಲಕನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಯುವತಿಯ

ಪ್ರೇಮ ಪ್ರಕರಣ ➤ 17 ವರ್ಷದ ಬಾಲಕನ ಹತ್ಯೆಗೈದ ಬಾಲಕಿಯ ತಂದೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಖಾಲಿ ಸಿಲಿಂಡರ್ ಗೆ ಅಡುಗೆ ಅನಿಲ ತುಂಬಿಸಿ ಮಾರಾಟ ➤ ಓರ್ವನ ಬಂಧನ, ಮತ್ತೋರ್ವ ಪರಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ. 16. ಗ್ಯಾಸ್ ಏಜೆನ್ಸಿಯ ಡೆಲಿವರಿ ಸಿಬಂದಿಯೋರ್ವ ಡೆಲಿವೆರಿ ಮಾಡಬೇಕಾಗಿದ್ದ ಗ್ಯಾಸ್ ಸಿಲಿಂಡರ್ ನಿಂದ ಅನಿಲವನ್ನು ಖಾಲಿ ಸಿಲಿಂಡರಿಗೆ ತುಂಬಿಸಿ ಮಾರಾಟ ಮಾಡುತ್ತಿದ್ದುದ್ದನ್ನು ಗ್ರಾಮಸ್ಥರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಾವಳಪಡೂರು ಗ್ರಾಮದ ಅಲಂಪುರಿ ಎಂಬಲ್ಲಿ ನಡೆದಿದೆ. ಬಂಧಿತನನ್ನು ಉತ್ತರ ಭಾರತ ಮೂಲದ ಕಾರ್ಮಿಕ ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ಖಾಲಿ ಸಿಲಿಂಡರಿಗೆ ಗ್ಯಾಸ್ ತುಂಬಿಸಿ ಮಾರಾಟ ಮಾಡುವ ಕುರಿತು ಅನುಮಾನಗೊಂಡ ಗ್ರಾಮಸ್ಥರು

ಬಂಟ್ವಾಳ: ಖಾಲಿ ಸಿಲಿಂಡರ್ ಗೆ ಅಡುಗೆ ಅನಿಲ ತುಂಬಿಸಿ ಮಾರಾಟ ➤ ಓರ್ವನ ಬಂಧನ, ಮತ್ತೋರ್ವ ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಐಟಿ ಕಛೇರಿಯಲ್ಲಿ ಬೆಂಕಿ ಅವಘಡ ➤ ಅಮೂಲ್ಯ ದಾಖಲೆ ಪತ್ರಗಳು ಸುಟ್ಟು ಭಸ್ಮ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 16. ನಗರದ ಅತ್ತಾವರದಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಐಟಿ ಕಟ್ಟಡದ ಮೂರನೇ ಮಹಡಿಯಲ್ಲಿನ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇದರಿಂದ ಕಛೇರಿಯ ಅಮೂಲ್ಯ ದಾಖಲೆ ಪತ್ರಗಳು ಸುಟ್ಟು ಭಸ್ಮವಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲೇ ಐಟಿ ಕಚೇರಿಯ ದಾಖಲೆಪತ್ರಗಳು, ಮೇಜು, ಕುರ್ಚಿ ಹಾಗೂ ಫ್ಯಾನ್ ಗಳು ಬೆಂಕಿಗಾಹುತಿಯಾಗಿವೆ.

ಮಂಗಳೂರು: ಐಟಿ ಕಛೇರಿಯಲ್ಲಿ ಬೆಂಕಿ ಅವಘಡ ➤ ಅಮೂಲ್ಯ ದಾಖಲೆ ಪತ್ರಗಳು ಸುಟ್ಟು ಭಸ್ಮ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಮನೆಮಂದಿ ನಾಟಕ ವೀಕ್ಷಣೆಗೆ ತೆರಳಿದ್ದ ವೇಳೆ 4 ಮನೆಗಳಿಗೆ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ. 16. ಮನೆಮಂದಿ ನಾಟಕ ನೋಡಲು ಹೋಗಿದ್ದ ಸಂದರ್ಭ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ನಗದು ಕದ್ದೊಯ್ದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆಯಲ್ಲಿ ನಡೆದಿದೆ. ತಾಲೂಕಿನ ತುಂಬೆ ಗ್ರಾಮದ ಮಜಿ ಎಂಬಲ್ಲಿನ ನಾಲ್ಕು ಮನೆಗಳಿಗೆ ನುಗ್ಗಿದ್ದಾರೆ. ಮಜಿ ನಿವಾಸಿ ಮನೋಜ್ ಕೊಟ್ಟಾರಿ ಎಂಬವರ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಎಂಟು ಸಾವಿರ ರೂ ನಗದನ್ನು ಕಳವುಗೈದಿದ್ದಾರೆ. ಉಳಿದ ಮೂರು ಮನೆಗಳಿಗೆ ನುಗ್ಗಿದ ಕಳ್ಳರು

ಬಂಟ್ವಾಳ: ಮನೆಮಂದಿ ನಾಟಕ ವೀಕ್ಷಣೆಗೆ ತೆರಳಿದ್ದ ವೇಳೆ 4 ಮನೆಗಳಿಗೆ ನುಗ್ಗಿದ ಕಳ್ಳರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಮುಂದಾದ ಯುವಕ ➤ ವಿದ್ಯುತ್ ಶಾಕ್ ತಗುಲಿ ಶೇಕಡಾ 50ರಷ್ಟು ಸುಟ್ಟು ಹೋದ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 15. ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋದ ಯುವಕನೋರ್ವ ಕರೆಂಟ್ ಶಾಕ್ ಗೆ ಒಳಗಾಗಿ 50℅ ರಷ್ಟು ಸುಟ್ಟು ಹೋದ ಘಟನೆ ಮಂಗಳೂರು ಹೊರವಲಯದ ಜೋಕಟ್ಟೆ ಎಂಬಲ್ಲಿ ನಡೆದಿದೆ. ವಿದ್ಯುತ್ ಶಾಕ್ ಗೆ ಒಳಗಾದವನನ್ನು ಜೋಕಟ್ಟೆ ನಿವಾಸಿ ಮೊಹಮ್ಮದ್ ದಿಶಾನ್(16) ಎಂದು ಗುರುತಿಸಲಾಗಿದೆ. ಎಲ್ ಪಿಜಿ ಗ್ಯಾಸ್ ಟ್ಯಾಂಕರ್ ಗೂಡ್ಸ್ ರೈಲು ಎಂಆರ್.ಪಿಎಲ್ ಒಳಗೆ ಹೋಗಲು ಕ್ಲಿಯರೆನ್ಸ್ ಸಿಗುವುದಕ್ಕಾಗಿ ಎರಡು ದಿನಗಳಿಂದ ಜೋಕಟ್ಟೆ ರೈಲ್ವೇ ನಿಲ್ದಾಣದಲ್ಲಿ

ಮಂಗಳೂರು: ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಮುಂದಾದ ಯುವಕ ➤ ವಿದ್ಯುತ್ ಶಾಕ್ ತಗುಲಿ ಶೇಕಡಾ 50ರಷ್ಟು ಸುಟ್ಟು ಹೋದ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ಅಕ್ರಮ ಮದ್ಯ ಸರಬರಾಜು- ಪೊಲೀಸ್ ದಾಳಿ ➤ ಓರ್ವ ಅರೆಸ್ಟ್, 1365ರೂ ಮೌಲ್ಯದ ಮದ್ಯ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಎ. 15. ವಿಟ್ಲ ಎಸ್ಐ ವಿನೋದ್ ರೆಡ್ಡಿ ನೇತೃತ್ವದ ತಂಡವು ಗಸ್ತುನಿರತ ಸಂದರ್ಭ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ವರ್ತಿಸಿದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಅಕ್ರಮವಾಗಿ ಮಧ್ಯ ಸಾಗಾಟ ಮಾಡುತ್ತಿರುವುದು ಬೋಳಂತೂರು ಎಂಬಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ಬೋಳಂತೂರು ಕೊಕ್ಕಪುಣಿ ನಿವಾಸಿ ಭಾಸ್ಕರ್ (42) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 90ಎಂಎಲ್ ನ ಮೈಸೂಲ್ ಲ್ಯಾನ್ಸರ್ ವಿಕ್ಸಿ 33 ಟೆಟ್ರಾ ಪ್ಯಾಕೆಟ್, 90 ಎಂಎಲ್ ನ ಪಿನ್ಸರ್ ಲ್ಯಾನ್ಸರ್ ವಿಕ್ಸಿ ಹಾಗೂ 6

ವಿಟ್ಲ: ಅಕ್ರಮ ಮದ್ಯ ಸರಬರಾಜು- ಪೊಲೀಸ್ ದಾಳಿ ➤ ಓರ್ವ ಅರೆಸ್ಟ್, 1365ರೂ ಮೌಲ್ಯದ ಮದ್ಯ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸವಣೂರು: ರೈಲ್ವೇ ಹಳಿಯಲ್ಲಿ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಸವಣೂರು, ಎ. 15. ಪುತ್ತೂರು -ಕಾಣಿಯೂರು ಮಾರ್ಗದ ನಡುವಿನ ಸವಣೂರು ಗೇಟ್ ಬಳಿ ರೈಲ್ವೇ ಹಳಿಯಲ್ಲಿ ಯುವಕನೋರ್ವನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ದಂಬೆ ನಿವಾಸಿ ದಿ.ಬಾಲಕೃಷ್ಣ ರೈ ಕೇನ್ಯ ಎಂಬವರ ಪುತ್ರ ಮಹೇಶ್ ಯಾನೆ ಸನ್ನು (34 ವ) ಎಂದು ಗುರುತಿಸಲಾಗಿದೆ. ಇವರ ಮೃತದೇಹವು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಯಿಂದಾಗಿ ರುಂಡವು ಬೇರ್ಪಟ್ಟಿತ್ತು. ಗುರುವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.

ಸವಣೂರು: ರೈಲ್ವೇ ಹಳಿಯಲ್ಲಿ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾರು ಢಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರ ➤ ಬಸ್ಸಿನಡಿಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಎ.14. ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರನ ಮೇಲೆ ಬಸ್ಸು ಹರಿದು ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರು ಬಳಿ ಬುಧವಾರದಂದು ಸಂಭವಿಸಿದೆ. ಮೃತ ಸವಾರನನ್ನು ಅತ್ತಾವರ ನಿವಾಸಿ ಧೀಮಂತ್(30) ಎಂದು ಗುರುತಿಸಲಾಗಿದೆ. ಇವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಧೀಮಂತ್ ಅವರು ಹಿಂದಿನಿಂದ ಬರುತ್ತಿದ್ದ ಬಸ್ಸಿನಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದರೆನ್ನಲಾಗಿದೆ. ತಕ್ಷಣವೇ

ಕಾರು ಢಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರ ➤ ಬಸ್ಸಿನಡಿಗೆ ಬಿದ್ದು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ: ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ವಿದ್ಯುತ್ ತಂತಿಯನ್ನು ಎಳೆದೊಯ್ದ ಬಸ್ ➤ ಕರ್ತವ್ಯ ನಿರತ ಲೈನ್ ಮ್ಯಾನ್ ಪವಾಸದೃಶ ಪಾರು

(ನ್ಯೂಸ್ ಕಡಬ) newskadaba.com ವಿಟ್ಲ, ಎ. 14. ರಸ್ತೆಗೆ ಅಡ್ಡಲಾಗಿದ್ದ ಕೇಬಲ್ ಚಲಿಸುತ್ತಿದ್ದ ಬಸ್ಸಿಗೆ ಸಿಲುಕಿ ಎಳೆದೊಯ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಮುರಿದು ಒಂದು ಟ್ರಾನ್ಸ್ ಫರ್ಮರ್ ನೆಲಕ್ಕುರುಳಿ ಬಿದ್ದರೂ, ವಿದ್ಯುತ್ ಕಂಬದಲ್ಲಿದ್ದ ಲೈನ್ ಮ್ಯಾನ್ ಪವಾಡಸದೃಶ ಪಾರಾದ ಘಟನೆ ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ನಡೆದಿದೆ. ಘಟನೆಯಿಂದ ಸಾಲೆತ್ತೂರು ಮೆಸ್ಕಾಂ ಉಪವಲಯದ ಲೈನ್ ಮ್ಯಾನ್ ರಾಜ್ ಅಹಮ್ಮದ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ವಿಟ್ಲ: ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ವಿದ್ಯುತ್ ತಂತಿಯನ್ನು ಎಳೆದೊಯ್ದ ಬಸ್ ➤ ಕರ್ತವ್ಯ ನಿರತ ಲೈನ್ ಮ್ಯಾನ್ ಪವಾಸದೃಶ ಪಾರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top