ಕ್ರೈಮ್ ನ್ಯೂಸ್

ಮಾಜಿ ಸಚಿವ ಯು.ಟಿ ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ ➤ ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ದಾವಣಗೆರೆ, ಎ. 14. ಮಾಜಿ ಸಚಿವ ಯು.ಟಿ. ಖಾದರ್ ರವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಇಲ್ಲಿನ ಆನಗೋಡು ಬಸ್ ನಿಲ್ದಾಣದ ಸರ್ವಿಸ್ ರಸ್ತೆ ಸಮೀಪ ಇಂದು ಬೆಳಗ್ಗೆ ನಡೆದಿದೆ. ಯು.ಟಿ ಖಾದರ್ ಅವರು ಬೆಳಗಾವಿ ಉಪಚುನಾವಣೆಯ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಆನಗೋಡು ಹಂಪ್ಸ್ ಸಮೀಪ ಕಂಟೈನರ್‌ಗೆ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಎಸ್.ಪಿ. ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾಜಿ ಸಚಿವ ಯು.ಟಿ ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ ➤ ಪ್ರಾಣಾಪಾಯದಿಂದ ಪಾರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾಸರಗೋಡು: ಆಂಬ್ಯುಲೆನ್ಸ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಕಾಸರಗೋಡು, ಎ. 14. ಆಂಬ್ಯುಲೆನ್ಸ್‌ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್‌ ಸಹಸವಾರ ಬಾಲಕ ಮೃತಪಟ್ಟು, ಸ್ಕೂಟರ್‌ ಸವಾರ ಗಾಯಗೊಂಡ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಮೃತ ಬಾಲಕನನ್ನು ಬದಿಯಡ್ಕ ಪೆರಡಾಲದ ಅಬ್ದುಲ್ ಶಾಹಿಲ್ (16) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮೂಕಂಪಾರೆಯ ಅಬ್ದುಲ್ ಸಮದ್ (19) ಎನ್ನಲಾಗಿದೆ. ಉಕ್ಕಿನಡ್ಕ ವೈದ್ಯಕೀಯ ಕಾಲೇಜಿಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡ ಇಬ್ಬರನ್ನು ಕುಂಬಳೆ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ

ಕಾಸರಗೋಡು: ಆಂಬ್ಯುಲೆನ್ಸ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪತಿಯ ಕುತ್ತಿಗೆಯಲ್ಲಿ ಕಾಲಿಟ್ಟು ಹತ್ಯೆಗೈದ ಪತ್ನಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 13. ಪತ್ನಿಯೇ ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಲೆಗೈದಿರುವ ಘಟನೆ ಜೆ.ಜೆ. ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಗೈಯಲ್ಪಟ್ಟವರನ್ನು ಓಬಳೇಶ್‌ ಕಾಲೋನಿ ನಿವಾಸಿ ಮೋಹನ್‌ (41) ಎಂದು ಗುರುತಿಸಲಾಗಿದೆ. ಕೊಲೆಗೆ ಸಂಬಂಧಿಸಿ ಪತ್ನಿ ಪದ್ಮಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ್‌ ಮತ್ತು ಪದ್ಮಾ ಬಿಬಿಎಂಪಿ ಕಾರ್ಮಿಕರಾಗಿದ್ದರು. ಮೋಹನ್‌ ಗೆ ಕುಡಿತದ ಚಟವಿದ್ದು, ಜತೆಗೆ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಇವರನ್ನು ಕುಡಿತದ ಚಟ ಬಿಡಿಸುವ ಪುರ್ನವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದ

ಪತಿಯ ಕುತ್ತಿಗೆಯಲ್ಲಿ ಕಾಲಿಟ್ಟು ಹತ್ಯೆಗೈದ ಪತ್ನಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಮಸೀದಿಗೆ ಕಲ್ಲೆಸೆತ ➤ ಇಬ್ಬರು ಬಾಲಕರ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 13. ಇಲ್ಲಿನ ಜನತಾ ಕಾಲೋನಿಯ ಜುಮ್ಮಾ ಮಸೀದಿಯೊಂದಕ್ಕೆ ಕಲ್ಲು ಬಿಸಾಕಿ ಕಿಟಕಿಯ ಗಾಜು ಒಡೆದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಬಾಲಕರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏ.4 ರಂದು ಮಧ್ಯರಾತ್ರಿ ವೇಳೆಗೆ ಇಡ್ಯಾ ಗ್ರಾಮದ ಜನತಾ ಕಾಲೋನಿಯಲ್ಲಿರುವ ಜುಮ್ಮಾ ಮಸೀದಿಗೆ ಕಲ್ಲು ಬಿಸಾಕಿ ಪರಾರಿಯಾಗಿದ್ದರು. ಈ ಕುರಿತು ಆಡಳಿತ ಮಂಡಳಿ ದೂರು ದಾಖಲಿಸಿತ್ತು. ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಲು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಸುರತ್ಕಲ್ ನಿರೀಕ್ಷಕ ಮತ್ತು ಉಪನಿರೀಕ್ಷಕರ

ಮಂಗಳೂರು: ಮಸೀದಿಗೆ ಕಲ್ಲೆಸೆತ ➤ ಇಬ್ಬರು ಬಾಲಕರ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ➤ ಓರ್ವ ಮೃತ್ಯು, ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಳ್ಳಾಲ, ಎ. 09. ತ್ರಿಬಲ್ ರೈಡ್ ನಲ್ಲಿದ್ದ ಯುವಕರ ಬೈಕೊಂದು ಓವರ್ ಟೇಕ್ ಮಾಡುವ ರಭಸದಲ್ಲಿ ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕುತ್ತಾರು ಪದವಿನ ಕೊರಗಜ್ಜನ ಕಟ್ಟೆ ಬಳಿ ನಡೆದಿದೆ.   ಮೃತರನ್ನು ಪೊಳಲಿ ಕೊಳತ್ತಮಜಲು ನಿವಾಸಿ ಮಹಮ್ಮದ್ ಶಾಫಿ (20)ಎಂದು ಗುರುತಿಸಲಾಗಿದೆ. ಕುತ್ತಾರು ಆದಿ ಸ್ಥಳ ಕೊರಗಜ್ಜನ ಕಟ್ಟೆಯ ಬಳಿ ಕುತ್ತಾರಿನಿಂದ ಎಲಿಯಾರ್ ಪದವಿಗೆ ಮೂವರನ್ನು

ಮಂಗಳೂರು: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ➤ ಓರ್ವ ಮೃತ್ಯು, ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ದುಬೈಯಿಂದ ಅಕ್ರಮವಾಗಿ‌ ಚಿನ್ನ ಸಾಗಾಟ- ಆರೋಪಿ ಅರೆಸ್ಟ್ ➤ 30.73ಲಕ್ಷ ರೂ ಮೌಲ್ಯದ ಚಿನ್ನ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 09. ದುಬೈಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕನೋರ್ವ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 30.73 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಧಿತನನ್ನು ಕೇರಳದ ಕಾಸರಗೋಡಿನ ಆಲಂಪಾಡಿ ನಿವಾಸಿ ಇಬ್ರಾಹಿಂ ಪನಾಲಂ ಅಬ್ದುಲ್ಲ ಎಂದು ಗುರುತಿಸಲಾಗಿದೆ. ಈತ ದುಬೈಯಿಂದ ಬರುವಾಗ ಅಕ್ರಮವಾಗಿ ಆತನ ಒಳಚಡ್ಡಿಯಲ್ಲಿ 647 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ದುಬೈಯಿಂದ ವಿಮಾನದ ಮೂಲಕ ಮಂಗಳೂರು

ಮಂಗಳೂರು: ದುಬೈಯಿಂದ ಅಕ್ರಮವಾಗಿ‌ ಚಿನ್ನ ಸಾಗಾಟ- ಆರೋಪಿ ಅರೆಸ್ಟ್ ➤ 30.73ಲಕ್ಷ ರೂ ಮೌಲ್ಯದ ಚಿನ್ನ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೋಟಿ ಗೆದ್ದಿರುವುದಾಗಿ ಸುಳ್ಳು ಹಬ್ಬಿಸಿದ್ದ ಸೆಕ್ಯುರಿಟಿ ಗಾರ್ಡ್ ನಾಪತ್ತೆ ➤ ಕೋಟಿ ಗೆದ್ದಿರುವ ಲಾಟರಿ ಟಿಕೆಟ್ ಸೈಬರ್ ನಲ್ಲಿ ಎಡಿಟ್ ಮಾಡಿ ಯಾಮಾರಿಸಿದ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 09. ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಸ್ಮಾರ್ಟ್ ಪ್ಲಾನೆಟ್ ವಸತಿ ಸಂಕೀರ್ಣದಲ್ಲಿ ಮೂರು ವರ್ಷಗಳಿಂದ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ಕ್ಯಾಲಿಕಟ್ ಮೂಲದ ಮೊಯ್ದಿನ್ ಕುಟ್ಟಿ ಕೇರಳ ರಾಜ್ಯ ಭಾಗ್ಯಮಿತ್ರ ಲಾಟರಿಯಲ್ಲಿ ಒಂದು ಕೋಟಿ ಬಹುಮಾನ ಗೆದ್ದಿರುವುದು ಸುದ್ದಿ ಸುಳ್ಳು ಎನ್ನುವುದು ತಿಳಿದುಬಂದಿದೆ. ಈತ ಮಾಧ್ಯಮಗಳ ಮೂಲಕ ಮಿಂಚಲು ಹಾಗೂ ಸಾಲಗಾರರಿಂದ ತಪ್ಪಿಸಿಕೊಳ್ಳಲು ಈ ರೀತಿಯ ನಾಟಕವಾಡಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ. ಈತ ಒಂದು ಕೋಟಿಯ ಲಾಟರಿ ಬಂದಿರುವುದಾಗಿ ನಂಬಿಸಲು

ಕೋಟಿ ಗೆದ್ದಿರುವುದಾಗಿ ಸುಳ್ಳು ಹಬ್ಬಿಸಿದ್ದ ಸೆಕ್ಯುರಿಟಿ ಗಾರ್ಡ್ ನಾಪತ್ತೆ ➤ ಕೋಟಿ ಗೆದ್ದಿರುವ ಲಾಟರಿ ಟಿಕೆಟ್ ಸೈಬರ್ ನಲ್ಲಿ ಎಡಿಟ್ ಮಾಡಿ ಯಾಮಾರಿಸಿದ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ಳಾರೆ: ಶ್ರೀ ಮೊಬೈಲ್ ಸರ್ವಿಸಸ್ ಅಂಗಡಿಯಿಂದ ಮೊಬೈಲ್ ಕಳ್ಳತನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ. 09. ಇಲ್ಲಿನ ಮೇಲಿನ ಪೇಟೆಯಲ್ಲಿನ ಸಿಂಡಿಕೇಟ್ ಬ್ಯಾಂಕ್ ಬಳಿ ಕಾರ್ಯಾಚರಿಸುತ್ತಿರುವ ಶ್ರೀ ಮೊಬೈಲ್ ಸರ್ವೀಸಸ್ ಅಂಗಡಿಯಿಂದ ಮೊಬೈಲ್ ಕಳವುಗೈದ ಘಟನೆ ಗುರುವಾರದಂದು ನಡೆದಿದೆ. ಎ. 08ರಂದು ರಾತ್ರಿ ವೇಳೆ ಬೀಗ ಒಡೆದು ಒಳನುಗ್ಗಿದ ಕಳ್ಳರು ನಗದು ಹಾಗೂ ಸರ್ವೀಸ್ ಗೆಂದು ಇಡಲಾದ ಹಲವು ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಮಾಲಕ ಗುಣ ಎಂಬವರು ಬೆಳ್ಳಾರೆ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಯ, ಬೆಳ್ಳಾರೆ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ

ಬೆಳ್ಳಾರೆ: ಶ್ರೀ ಮೊಬೈಲ್ ಸರ್ವಿಸಸ್ ಅಂಗಡಿಯಿಂದ ಮೊಬೈಲ್ ಕಳ್ಳತನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಾರಿಗೆ ಸಚಿವರ ತವರುನಾಡಿನಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಾರಿಗೆ ನೌಕರ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳಗಾವಿ, ಎ. 09. ಅಧಿಕಾರಿಗಳ ಕಿರುಕುಳ ತಳಲಾರದೇ ಸಾರಿಗೆ ನೌಕರರೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರ ತವರು ಜಿಲ್ಲೆಯಲ್ಲೇ ನಡೆದಿದೆ. ಆತ್ಮಹತ್ಯೆಗೆ ಶರಣಾದವರನ್ನು ಶಿವಕುಮಾರ್ ನೀಲಗಾರ (40) ಎಂದು ಗುರುತಿಸಲಾಗಿದೆ. ಇವರು ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಘಟಕದ ಬಸ್ ಚಾಲಕ ಕಂ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಇವರು ಸವದತ್ತಿಯಲ್ಲಿರುವ ತಮ್ಮ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾರಿಗೆ ಸಚಿವರ ತವರುನಾಡಿನಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಾರಿಗೆ ನೌಕರ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಮೊದಲು ಮೊಬೈಲ್ ಸುಟ್ಟು, ಬಳಿಕ ಆತ್ಮಹತ್ಯೆಗೆ ಶರಣಾದ ಅಟೋ ಚಾಲಕ…!

(ನ್ಯೂಸ್ ಕಡಬ) newskadaba.com ಪುತ್ತೂರು, ಎ. 09. ಆಟೋ ಚಾಲಕರೋರ್ವರು ಮೊದಲು ತನ್ನ ಮೊಬೈಲ್ ನ್ನು ಸುಟ್ಟು ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಆತ್ಮಹತ್ಯೆಗೈದವರನ್ನು ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ಶಿವಪ್ರಸಾದ್ (28 ವ) ಎಂದು ಗುರುತಿಸಲಾಗಿದೆ. ಇವರು ಮೊದಲು ತನ್ನ ಮೊಬೈಲ್ ನ್ನು ಸುಟ್ಟು ಬಳಿಕ ಮನೆಯ ಕೋಣೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ . ಸ್ಥಳಕ್ಕೆ ಸಂಪ್ಯ ಪೊಲೀಸರು ಆಗಮಿಸಿ ಪರಿಶೀಲನೆ

ಪುತ್ತೂರು: ಮೊದಲು ಮೊಬೈಲ್ ಸುಟ್ಟು, ಬಳಿಕ ಆತ್ಮಹತ್ಯೆಗೆ ಶರಣಾದ ಅಟೋ ಚಾಲಕ…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top