ಉಡುಪಿ: ಟ್ರಕ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿ ➤ ಸವಾರ ಮೃತ್ಯು



(ನ್ಯೂಸ್ ಕಡಬ) newskadaba.com ಕುಂದಾಪುರ, ಎ. 01. ಟ್ರಕ್‍ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕುಂದಾಪುರದ ಮಾಸ್ತಿಕಟ್ಟೆಯ ಯಡೂರು ಬಳಿ ನಡೆದಿದೆ.








ಮೃತರನ್ನು ಉಡುಪಿಯ ಪೆರಂಪಳ್ಳಿಯ ಜೋಸೆಫ್ ಗೋಮ್ಸ್ (28) ಎಂದು ಗುರುತಿಸಲಾಗಿದೆ. ಜೋಸೆಫ್ ಗೋಮ್ಸ್ ಹಾಗೂ ಮತ್ತವರ ಸ್ನೇಹಿತರು ಮಾಸ್ತಿಕಟ್ಟೆಯಲ್ಲಿರುವ ಸ್ನೇಹಿತನ ಮನೆಗೆ ತೆರಳುತ್ತಿದ್ದ ವೇಳೆ ಜೋಸೆಫ್ ರವರ ಬೈಕ್ ನಿಯಂತ್ರಣ ಕಳೆದುಕೊಂಡು ಮುಂದಿನಿಂದ ಬರುತ್ತಿದ್ದ ಟ್ರಕ್‍ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.






 

 

error: Content is protected !!
Scroll to Top