? ಕಡಬ ತಾಲೂಕಿನಲ್ಲಿ ಮತ್ತೆ 2 ಜೋಡಿ ಚಿರತೆ ಪ್ರತ್ಯಕ್ಷ

(ನ್ಯೂಸ್ ಕಡಬ) newskadaba.com ಕಡಬ, ಏ. 01. ತಾಲೂಕಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಜೋಡಿ ಚಿರತೆಗಳು ಕಾಣಿಯೂರು – ಚಾರ್ವಾಕ- ಕಡಬ ರಸ್ತೆಯ ದೋಳ್ಪಾಡಿ ಮರ್ಲಾಣಿ ಎಂಬಲ್ಲಿ ಕೊಜಂಬೇಡಿ ಸೇತುವೆಯ ಮೇಲ್ಭಾಗದಲ್ಲಿ 2 ಚಿರತೆಗಳು ರಸ್ತೆ ದಾಟಿ ದೋಳ್ಪಾಡಿ ಕಡೆ ಸಾಗುವುದನ್ನು ಕಡಬ ಕಡೆಯಿಂದ ಬರುತ್ತಿದ್ದ ಪ್ರಯಾಣಿಕರಿಗೆ ಕಂಡುಬಂದಿದೆ.

ಇತ್ತೀಚೆಗೆ ಕೆಲವರಿಗೆ ಕಾಡಿನಿಂದ ಚಿರತೆ ಕೂಗುವ ಶಬ್ದ ಕೇಳಿಬಂದಿದೆ ಎನ್ನಲಾಗಿದೆ. ಚಿರತೆ ಪತ್ತೆಯಾಗಿರುವ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ತಿಂಗಳ ಹಿಂದೆಯಷ್ಟೇ ಕಡಬ ತಾಲೂಕಿನಲ್ಲಿ ಚಿರತೆಯೊಂದು ಇಬ್ಬರು ಕೃಷಿಕರಿಗೆ ದಾಳಿ ಮಾಡಿಸ್ದು, ಅದನ್ನು ಅರಣ್ಯ ಇಲಾಖಾ ಸಿಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Scroll to Top