ತಲಪಾಡಿ: ಎಂಡಿಎಂಎ ಡ್ರಗ್ ಪೌಡರ್ ಮಾರಾಟಕ್ಕೆ ಯತ್ನ ➤ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ತಲಪಾಡಿ, ಎ. 02. ಇಲ್ಲಿನ ಬಾರೊಂದರ ಬಳಿ ನಿಷೇಧಿತ ಎಂಡಿಎಂಎ ಡ್ರಗ್ ಪೌಡರ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಪೋಲಿಸರು ಬಂಧಿಸಿದ್ದಾರೆ.


ಬಂಧಿತರನ್ನು ಉಪ್ಪಳ ಪಚ್ಚಿಲಮಾರ್ ನಿವಾಸಿ ಫಜಲ್ ಪಿ.ಎಂ.(27) ಮತ್ತು ಉಪ್ಪಳ ಮಜಲ್ ನಿವಾಸಿ ಮೊಹಮ್ಮದ್ ನೌಫಾಲ್ ಎಂದು ಗುರುತಿಸಲಾಗಿದೆ. ಇವರಿಬ್ಬರು ತಲಪಾಡಿ ತಚ್ಛಣಿ ಬಾರ್ ಬಳಿ ನಿಷೇಧಿತ ಡ್ರಗ್ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಇವರಿಂದ ಡ್ರಗ್ ಪೌಡರ್ ಸಹಿತ ಬೈಕ್ ಮತ್ತು ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Scroll to Top