ಕ್ರೈಮ್ ನ್ಯೂಸ್

ನೀರಿನಲ್ಲಿ ಮುಳುಗಿ ಮೂವರು ಮಕ್ಕಳು ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ಎ. 08. ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ದಾರಣವಾಗಿ ಮೃತಪಟ್ಟ ಘಟನೆ ಪಾಂಡವಪುರ ತಾಲೂಕಿನ ಬಳ್ಳೇಅತ್ತಿಗುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಮಹದೇವಪ್ಪ ಎಂಬವರ ಮಕ್ಕಳಾದ ಚಂದನ್, ಕಾರ್ತಿಕ್ ಹಾಗೂ ಮಲ್ಲಿಕಾರ್ಜುನ ಎಂಬವರ ಪುತ್ರ ರಿತೇಶ್ ಎಂದು ಗುರುತಿಸಲಾಗಿದೆ. ಈ ಮೂವರು ಯಾರು ಇಲ್ಲದ ಸಮಯದಲ್ಲಿ ಸ್ನೇಹಿತರೊಂದಿಗೆ ಈಜಲೆಂದು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತೋಟದ ಬಳಿ ಹೋದ ಮಹದೇವಪ್ಪ ಕೃಷಿ ಹೊಂಡದಲ್ಲಿ ತೇಲುತ್ತಿದ್ದ ಮಕ್ಕಳ ಮೃತದೇಹವು ಕಂಡು ಗಾಬರಿಯಿಂದ […]

ನೀರಿನಲ್ಲಿ ಮುಳುಗಿ ಮೂವರು ಮಕ್ಕಳು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೂಟೂರು ಆತ್ಮಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 08. ಬಿಗ್ ಬಾಸ್ ಸೀಸನ್ 7ರ ಖ್ಯಾತಿಯ ಚೈತ್ರಾ ಕೂಟೂರು ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕೋಲಾರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುರುವಾರ ಬೆಳಗ್ಗೆ 5 ಗಂಟೆಗೆ ವಿಷ ಸೇವಿಸಿದ್ದು, ವಿಷಯ ತಿಳಿದ ಮನೆಯವರು ಚೈತ್ರಾ ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚೈತ್ರಾ ಅವರು ಪ್ರಾಣಾಪಾಯದಿಂದ ಪಾರಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮದುವೆ ವಿಚಾರದಲ್ಲಿ ತೀವ್ರ ನೊಂದಿದ್ದ ಇವರು, ಮನೆಯಲ್ಲಿಯೇ ಫಿನಾಯಿಲ್ ಸೇವಿಸಿ ಸಾಯಲು

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೂಟೂರು ಆತ್ಮಹತ್ಯೆಗೆ ಯತ್ನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಶೌಚಾಲಯದೊಳಗೆ ಕುಸಿದು ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಎ. 08. ಇಲ್ಲಿನ ಖಾಸಗಿ ಕಾಲೇಜೊಂದರ ಶೌಚಾಲಯದ ಸ್ವಚ್ಛತೆಗೆಂದು ತೆರಳಿದ್ದ ವ್ಯಕ್ತಿಯೋರ್ವ ಕುಸಿದುಬಿದ್ದು ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತರನ್ನು ಐವರ್ನಾಡು ಗ್ರಾಮದ ಕೊಳ್ಳಂಪಾಡಿ ನಿವಾಸಿ ಸುಂದರ ಎಂದು ಗುರುತಿಸಲಾಗಿದೆ. ವಿಪರೀತ ಕುಡಿತದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಸುಳ್ಯ: ಶೌಚಾಲಯದೊಳಗೆ ಕುಸಿದು ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಮದುವೆಯಾಗಲು ಮನೆ ಬಿಟ್ಟು ಬರಲು ಒಪ್ಪದ ಯುವತಿ ➤ ಮನೆಗೆ ನುಗ್ಗಿ ಪ್ರೇಯಸಿಗೆ ಚೂರಿಯಿಂದ ಯುವಕ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ. 08. ಮದುವೆಗೆ ಮನೆ ಬಿಟ್ಟು ಬರಲು ಒಪ್ಪದ ಮನೆಗೆ ಪ್ರೇಯಸಿಯ ಮನೆಗೆ ನುಗ್ಗಿದ ಪ್ರಿಯತಮ ಸಿಟ್ಟಿಗೆದ್ದು ಆಕೆಗೆ ಚೂರಿಯಿಂದ ಇರಿದ ಘಟನೆ ಇಲ್ಲಿನ ಲಾಯಿಲ ಎಂಬಲ್ಲಿ ಮಂಗಳವಾರದಂದು ರಾತ್ರಿ ನಡೆದಿದೆ. ಬಂಧಿತ ಆರೋಪಿಯನ್ನು ಪೂಂಜಾಲಕಟ್ಟೆ ನಿವಾಸಿ ಶಮೀರ್ (22) ಎಂದು ಗುರುತಿಸಲಾಗಿದೆ. ಈತನು ತನ್ನದೇ ಸಮುದಾಯದ ಲಾಯಿಲ ಗ್ರಾಮದ ನಿವಾಸಿ 21 ವರ್ಷದ ಯುವತಿಯನ್ನು 5 ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗಲು ಮನೆಬಿಟ್ಟು ಬರಲು ಒತ್ತಾಯಿಸುತ್ತಿದ್ದ. ಆದರೆ ಯುವತಿಯು ಮನೆ ಬಿಟ್ಟು

ಬೆಳ್ತಂಗಡಿ: ಮದುವೆಯಾಗಲು ಮನೆ ಬಿಟ್ಟು ಬರಲು ಒಪ್ಪದ ಯುವತಿ ➤ ಮನೆಗೆ ನುಗ್ಗಿ ಪ್ರೇಯಸಿಗೆ ಚೂರಿಯಿಂದ ಯುವಕ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಖಾಸಗಿ ಬಸ್ – ಇನ್ನೋವಾ ಕಾರು ನಡುವೆ ಢಿಕ್ಕಿ ➤ ಕಾರು ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.08. ತಮಿಳುನಾಡು ಮೂಲದ ಖಾಸಗಿ ಬಸ್ ಹಾಗೂ ಇನ್ನೋವಾ ಕಾರು ನಡುವೆ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸಮೀಪದ ಕಡಂಬು ಎಂಬಲ್ಲಿ ಗುರುವಾರದಂದು ನಡೆದಿದೆ. ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ತಮಿಳುನಾಡು ನೋಂದಣಿಯ ಖಾಸಗಿ ಬಸ್ ಮಾಣಿ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇನ್ನೋವಾ ಕಾರಿನ ಮುಂಭಾಗ

ಉಪ್ಪಿನಂಗಡಿ: ಖಾಸಗಿ ಬಸ್ – ಇನ್ನೋವಾ ಕಾರು ನಡುವೆ ಢಿಕ್ಕಿ ➤ ಕಾರು ಚಾಲಕನಿಗೆ ಗಾಯ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಟ್ಲ: ಕಾರು, ಜೀಪು, ಬೈಕ್ ಹಾಗೂ ಆಕ್ಟಿವಾ ನಡುವೆ ಸರಣಿ ಅಪಘಾತ ➤ ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಎ. 08. ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ನಡೆದಿದೆ. ಪುತ್ತೂರಿನಿಂದ ಮಾಣಿ ಕಡೆಗೆ ತೆರಳುತ್ತಿದ್ದ ಜೀಪು ಹಾಗೂ ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಆಲ್ಟೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇದರ ತೀವ್ರತೆಗೆ ಜೀಪಿನ ಹಿಂದಿನಿಂದ ಬರುತ್ತಿದ್ದ ಬೈಕೊಂದು ನಿಯಂತ್ರಣ ತಪ್ಪಿ ಜೀಪಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಗಾಯಗೊಂಡಿದ್ದಾನೆ. ಕಾರಿನ ಹಿಂದಿನಿಂದ

ವಿಟ್ಲ: ಕಾರು, ಜೀಪು, ಬೈಕ್ ಹಾಗೂ ಆಕ್ಟಿವಾ ನಡುವೆ ಸರಣಿ ಅಪಘಾತ ➤ ಬೈಕ್ ಸವಾರನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾಸರಗೋಡು: ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷನ ಕೊಲೆಗೆ ಯತ್ನ ➤ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಕಾಸರಗೋಡು, ಎ. 08. ಕಾಸರಗೋಡು ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಶ್ರೀಜಿತ್ ಎಂಬವರ ಮೇಲೆ ದುಷ್ಕರ್ಮಿಗಳ ತಂಡವೊಂದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡ ಶ್ರೀಜಿತ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹತ್ಯೆ ಯತ್ನದ ಹಿಂದೆ ಸಿಪಿಐಎಂ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ದೂರಿದೆ. ಮಂಗಳವಾರವಷ್ಟೇ ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದ ಬೆನ್ನಲ್ಲೇ ಕಣ್ಣೂರಿನಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತನ ಹತ್ಯೆ ನಡೆದಿತ್ತು. ಇದೀಗ ಕಾಸರಗೋಡಿನಲ್ಲಿ ಬಿಜೆಪಿ ಮುಖಂಡನ ಹತ್ಯಾಯತ್ನ

ಕಾಸರಗೋಡು: ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷನ ಕೊಲೆಗೆ ಯತ್ನ ➤ ವ್ಯಕ್ತಿ ಗಂಭೀರ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ: ಆನೆ ದಾಳಿಗೆ ಓರ್ವ ಬಲಿಯಾದ ಬೆನ್ನಲ್ಲೇ ಆನೆಗಳ ಹಿಂಡು ಪ್ರತ್ಯಕ್ಷ ➤ ಆತಂಕದಲ್ಲಿ ಸಾರ್ವಜನಿಕರು…!

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಎ. 07. ಸುಬ್ರಹ್ಮಣ್ಯದಿಂದ ಐನಕಿದು ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಹಾಗೂ ಬಾಳುಗೋಡು ಭಾಗವನ್ನು ಸಂಪರ್ಕಿಸುವ ಮಲೆಯಾಳ ಐನೆಕಿದು ರಸ್ತೆಯ ಕೆದಿಲ ಎಂಬಲ್ಲಿ 8 ಕಾಡಾನೆಗಳ ಹಿಂಡೊಂದು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ಬುಧವಾರ ಸಂಜೆಯ ವೇಳೆಗೆ 8 ಆನೆಗಳಿರುವ ಹಿಂಡು ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿವೆ. ಈ ಮಾರ್ಗವು ಕಾಡಿನೊಳಗೆ ಹಾದು ಹೋಗಿದ್ದು ದಾರಿ ಮಧ್ಯೆ ಯಾವುದೇ ಮನೆಗಳಿಲ್ಲ. ಇದೀಗ ಆನೆಗಳ ಉಪಟಳವು ಮಿತಿಮೀರಿದ್ದು, ಇಂದು ಕಲ್ಮಕಾರು ಕಾಡಿನ ದಾರಿಯಲ್ಲಿ ತೆರಳಿದ್ದ ವ್ಯಕ್ತಿಯೋರ್ವನ

ಸುಬ್ರಹ್ಮಣ್ಯ: ಆನೆ ದಾಳಿಗೆ ಓರ್ವ ಬಲಿಯಾದ ಬೆನ್ನಲ್ಲೇ ಆನೆಗಳ ಹಿಂಡು ಪ್ರತ್ಯಕ್ಷ ➤ ಆತಂಕದಲ್ಲಿ ಸಾರ್ವಜನಿಕರು…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಚಿಕನ್ ಸೆಂಟರ್‌ನಲ್ಲಿ ಅಕ್ರಮ ಬೀಫ್ ಮಾರಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 07. ಇಲ್ಲಿನ ಕೋಳಿ ಅಂಗಡಿಯೊಂದರಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ದಾಳಿ ನಡೆಸಿದ ಬಜ್ಪೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹಮ್ಮದ್ ಸಮೀರ್ ಹಾಗೂ ಮಹಮ್ಮದ್ ಸಫೀಕ್ ಎಂದು ಗುರುತಿಸಲಾಗಿದೆ. ಇವರು ಮೂಡುಪೆರಾರ ಗ್ರಾಮದ ಸೂರಲ್ಪಾಡಿಯ ಸಲ್ವಾ ಚಿಕನ್ ಸೆಂಟರ್ ನಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದು, ಈ ಕುರಿತ ಖಚಿತ ಮಾಹಿತಿಯನ್ನಾಧರಿಸಿ ಬಜಪೆ ಪೊಲೀಸರು ಚಿಕನ್ ಸೆಂಟರ್ ಗೆ ಢಿಡೀರ್ ದಾಳಿ ನಡೆಸಿದಾಗ ಪ್ರಕರಣ

ಮಂಗಳೂರು: ಚಿಕನ್ ಸೆಂಟರ್‌ನಲ್ಲಿ ಅಕ್ರಮ ಬೀಫ್ ಮಾರಾಟ ➤ ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹುಲಿ ಚರ್ಮ ಹಾಗೂ ಉಗುರು ಸಾಗಿಸುತ್ತಿದ್ದ ಐವರ ಬಂಧನ

(ನ್ಯೂಸ್ ಕಡಬ) newskadaba.com ಹೆಬ್ರಿ, ಎ. 07. ಹುಲಿಯ ಚರ್ಮ ಹಾಗೂ ಉಗುರು ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಸೋಮೇಶ್ವರ ಚೆಕ್ ಪೋಸ್ಟ್‌ ಬಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹುಬ್ಬಳ್ಳಿಯಿಂದ ಮಂಗಳೂರಿನ ಕಡೆ ಬೈಕ್‍ ಗಳಲ್ಲಿ ಹುಲಿಯ ಎರಡು ಚರ್ಮ ಮತ್ತು ಉಗುರುಗಳನ್ನು ಸಾಗಿಸುತ್ತಿದ್ದ ವೇಳೆ ಚೆಕ್‍ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಹುಲಿಯ ಉಗುರು, ಚರ್ಮ ಅಲ್ಲದೇ ಬೈಕ್ ಮತ್ತು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಚರ್ಮ ಮತ್ತು ಉಗುರುಗಳನ್ನು ಪರೀಕ್ಷೆಗಾಗಿ ಫೋರೆನ್ಸಿಕ್ ಪ್ರಯೋಗಾಯಲಕ್ಕೆ ಕಳುಹಿಸಲಾಗಿದೆ. ಆರೋಪಿಗಳ ವಿಚಾರಣೆ

ಹುಲಿ ಚರ್ಮ ಹಾಗೂ ಉಗುರು ಸಾಗಿಸುತ್ತಿದ್ದ ಐವರ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top