ಕ್ರೈಮ್ ನ್ಯೂಸ್

ಮೀನು ವ್ಯಾಪಾರದಲ್ಲಿ ವಿಪರೀತ ನಷ್ಟ ➤ ವಿಷ ಸೇವಿಸಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಬೈಂದೂರು, ಎ. 22. ಇಲಿ ಪಾಷಾಣ ಸೇವಿಸಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ. ಮೃತರನ್ನು ಶಶಿಕಲಾ (49) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಮೀನು ಮಾರಾಟ ಮಾಡಿಕೊಂಡಿದ್ದ ಇವರಿಗೆ ಮೀನು ಮಾರಾಟದಲ್ಲಿ ವಿಪರೀತ ನಷ್ಟಕ್ಕೊಳಗಾಗಿದ್ದರು. ಕೆಲವು ಕಡೆ ಸಾಲ ಪಡೆದುಕೊಂಡಿದ್ದು, ಅದನ್ನು ವಾಪಸ್ಸು ಹಿಂದಿರುಗಿಸಲಾಗದೇ ಇದ್ದುದರಿಂದ ಮನನೊಂದಿದ್ದರು. ಎ.20 ರಂದು ಬೆಳಿಗ್ಗೆ ಅಸ್ವಸ್ಥಗೊಂಡು ಮಲಗಿದಲ್ಲೆ ಒದ್ದಾಡುತ್ತಿದ್ದ ಇವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿಯೇ […]

ಮೀನು ವ್ಯಾಪಾರದಲ್ಲಿ ವಿಪರೀತ ನಷ್ಟ ➤ ವಿಷ ಸೇವಿಸಿದ್ದ ಮಹಿಳೆ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಿರಾಡಿ: ಮರಕ್ಕೆ ಢಿಕ್ಕಿ ಹೊಡೆದ ಕಂಟೇನರ್ ➤ ಚಾಲಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ. 22. ಕಂಟೇನರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಯ ಕೊಡ್ಡೆಕಲ್ ಎಂಬಲ್ಲಿ ನಡೆದಿದೆ. ಮೃತ ಚಾಲಕನನ್ನು ಜಾರ್ಖಂಡ್ ಮೂಲದ ನುಸ್ರಲ್ಲಾಖಾನ್ (31) ಎಂದು ಗುರುತಿಸಲಾಗಿದೆ. ಇದು ಕಾರುಗಳನ್ನು ಸಾಗಿಸುವ ಕಂಟೇನರ್ ಆಗಿದ್ದು, ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು. ಗುರುವಾ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಶಿರಾಡಿ ಘಾಟ್ ನ ಕೊಡ್ಡೆಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ

ಶಿರಾಡಿ: ಮರಕ್ಕೆ ಢಿಕ್ಕಿ ಹೊಡೆದ ಕಂಟೇನರ್ ➤ ಚಾಲಕ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ನಿಲ್ಲಿಸಿದ್ದ ತ್ಯಾಜ್ಯ ವಿಲೇವಾರಿಯ ಲಾರಿ ಹಠಾತ್ ಚಲಿಸಿ ಬೈಕ್, ಕಾರು ಹಾಗೂ ಟೆಂಪೋಗೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 22. ಇಲ್ಲಿನ ಕಂಕನಾಡಿ ಮಾರುಕಟ್ಟೆಯ ಬಳಿ ನಿಂತಿದ್ದ ಲಾರಿಯೊಂದು ಹಠಾತ್ತಾಗಿ ಚಲಿಸಿದ ಪರಿಣಾಮ ಕೋಳಿ ಅಂಗಡಿ ಹಾಗೂ ವಾಹನಗಳಿಗೆ ಹಾನಿಯಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಆ್ಯಂಟನಿ ಕಂಪೆನಿಗೆ ಸೇರಿದ ತ್ಯಾಜ್ಯ ವಿಲೇವಾರಿ ಲಾರಿಯನ್ನು ಚಾಲಕ ನಿಲ್ಲಿಸಿ ಸ್ವಲ್ಪ ದೂರ ಹೋಗಿದ್ದು, ಈ ಸಂದರ್ಭ ಲಾರಿಯು ಏಕಾಏಕಿ ಚಲಿಸಿದ ಪರಿಣಾಮ ಮೂರು ಕಾರು, ಎರಡು ದ್ವಿಚಕ್ರ ವಾಹನ, ಒಂದು ಟೆಂಪೋಗೆ ಢಿಕ್ಕಿ ಹೊಡೆದಿದ್ದಲ್ಲದೇ ಸಮೀಪದಲ್ಲಿದ್ದ ಕೋಳಿ ಅಂಗಡಿಗೂ ಢಿಕ್ಕಿ ಹೊಡೆದಿದೆ‌.

ಮಂಗಳೂರು: ನಿಲ್ಲಿಸಿದ್ದ ತ್ಯಾಜ್ಯ ವಿಲೇವಾರಿಯ ಲಾರಿ ಹಠಾತ್ ಚಲಿಸಿ ಬೈಕ್, ಕಾರು ಹಾಗೂ ಟೆಂಪೋಗೆ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಎಡಪಕ್ಷ ನಾಯಕ ಸೀತಾರಾಂ ಯೆಚೂರಿಯವರ ಪುತ್ರ ಕೊರೋನಾಗೆ ಬಲಿ

(ನ್ಯೂಸ್ ಕಡಬ) newskadaba.com ನವದೆಹಲಿ, ಎ. 22. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಹಿರಿಯ ಮಗ ಆಶಿಶ್ ಎಂಬವರು ಗುರುವಾರದಂದು ನಿಧನರಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಸೀತಾರಾಂ ಯೆಚೂರಿ, ಜೂನ್ 9ರಂದು 35 ನೇ ವರ್ಷಕ್ಕೆ ಕಾಲಿಡಬೇಕಿದ್ದ ಆಶಿಶ್, ಗುರಗಾಂವ್‌ನ ಮೆಡಂತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಎರಡು ವಾರಗಳ ಕೊರೋನಾ ಜೊತೆಗಿನ ಹೋರಾಟದ ಬಳಿಕ ಇಂದು ಮುಂಜಾನೆ 5.30ರ ವೇಳೆಗೆ ಹಠಾತ್ ಮರಣವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಎಡಪಕ್ಷ ನಾಯಕ ಸೀತಾರಾಂ ಯೆಚೂರಿಯವರ ಪುತ್ರ ಕೊರೋನಾಗೆ ಬಲಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಳೆಯಂಗಡಿ: ಸಿಡಿಲು ಬಡಿದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಹಳೆಯಂಗಡಿ, ಎ. 22. ಇಲ್ಲಿನ ಬೊಳ್ಳೂರು ಇಂದಿರಾ ನಗರದಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳಿಬ್ಬರು ಸಿಡಿಲು ಬಡಿದ ಪರಿಣಾಮ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮತ್ತೋರ್ವ ಬಾಲಕ ಮಾರುತೇಶ್ (6 ವ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇಂದಿರಾ ನಗರದ ಬೊಳ್ಳೂರು ಮಸೀದಿ ಹಿಂಭಾಗದ ಖಾಸಗಿ ಜಮೀನಿನಲ್ಲಿ ಮನ್ಸೂರ್ ಎಂಬವರ ನಿಹಾನ್(6) ಹಾಗೂ ಗಂಗಾವತಿ ಮೂಲದ ದುರ್ಗಪ್ಪ ಎಂಬವರ ಮಗ ಮಾರುತೇಶ್(6) ಮಂಗಳವಾರ ಸಂಜೆ ಮನೆಯ ಹತ್ತಿರ ಆಟವಾಡುತ್ತಿದ್ದ

ಹಳೆಯಂಗಡಿ: ಸಿಡಿಲು ಬಡಿದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಬಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ತಂದೆಯ ಮೃತದೇಹ ಸಾಗಿಸಲು 60 ಸಾವಿರ ರೂ ಬೇಡಿಕೆಯಿಟ್ಟ ಅಂಬ್ಯುಲೆನ್ಸ್ ಸಿಬ್ಬಂದಿ…! ➤ ಮಾಂಗಲ್ಯ ಮಾರಲು ಮುಂದಾದ ಮಗಳು

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 22. ಕೊರೋನಾದಿಂದ ಮೃತಪಟ್ಟ ತಂದೆಯ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್‌ ಸಿಬಂದಿಯೋರ್ವ 60 ಸಾವಿರ ರೂ. ಕೇಳಿದ ಹಿನ್ನೆಲೆ ಮಹಿಳೆಯೊಬ್ಬಳು ಮಾಂಗಲ್ಯ ಮಾರಿ ಹಣ ನೀಡಲು ಮುಂದಾದ ಘಟನೆ ನಗರದ ಹೆಬ್ಬಾಳದಲ್ಲಿ ನಡೆದಿದೆ. ಮೃತದೇಹವನ್ನು ನಗರದ ಹೆಬ್ಬಾಳದಿಂದ ಪೀಣ್ಯ ಎಂಬಲ್ಲಿನ ಚಿತಾಗಾರಕ್ಕೆ ಸಾಗಿಸಬೇಕಾಗಿತ್ತು. ಇದಕ್ಕಾಗಿ ನಿಗದಿಪಡಿಸಿದ್ದ ಆ್ಯಂಬುಲೆನ್ಸ್‌ ಸಿಬ್ಬಂದಿ 60 ಸಾ.ರೂ. ನೀಡದಿದ್ದರೆ ಮೃತದೇಹವನ್ನು ಬೀದಿಯಲ್ಲೇ ಬಿಸಾಡುತ್ತೇವೆ ಎಂದು ಹೇಳಿದ್ದಾರೆ. ಈ ವೇಳೆ ಮಾಂಗಲ್ಯವನ್ನು ಮಾರಿ ಹಣ ನೀಡಲು ಮಗಳು ಮುಂದಾಗಿದ್ದಾರೆ.

ತಂದೆಯ ಮೃತದೇಹ ಸಾಗಿಸಲು 60 ಸಾವಿರ ರೂ ಬೇಡಿಕೆಯಿಟ್ಟ ಅಂಬ್ಯುಲೆನ್ಸ್ ಸಿಬ್ಬಂದಿ…! ➤ ಮಾಂಗಲ್ಯ ಮಾರಲು ಮುಂದಾದ ಮಗಳು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾರ್ಕಳ: ಹಟ್ಟಿಯಲ್ಲಿ ಕಟ್ಟಿ ಹಾಕಲಾಗಿದ್ದ ದನ ಕಳ್ಳತ‌ನ

(ನ್ಯೂಸ್ ಕಡಬ) newskadaba.com ಕಾರ್ಕಳ, ಎ. 17. ಹಟ್ಟಿಯಲ್ಲಿ ಕಟ್ಟಿದ್ದ ದನವನ್ನು ಕಳ್ಳತನ ಮಾಡಿರುವ ಘಟನೆ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ನಡೆದಿದೆ. ಸುನೀಲ್ ಕೋಟ್ಯಾನ್ ಎಂಬವರ ಮನೆಯಿಂದ ದನ ಕಳವುಗೈಯ್ಯಲಾಗಿದೆ. ಇವರು ವೃತ್ತಿಯಲ್ಲಿ ಕೃಷಿಕರಾಗಿದ್ದು, ಜೀವನ ನಿರ್ವಹಣೆಗಾಗಿ 6 ದನಗಳನ್ನು ಸಾಕಿಕೊಂಡಿದ್ದರು. ಎ.12 ರಂದು ರಾತ್ರಿ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಇವರು, ಮರುದಿನ ಬೆಳಿಗ್ಗೆ ಹಾಲು ಕರೆಯಲೆಂದು ಹೋದ ಸಂದರ್ಭ ಕಟ್ಟಿ ಹಾಕಿದ್ದ 6ದನಗಳ ಪೈಕಿ ಐದು ದನ ಮಾತ್ರ ಇದ್ದು 1 ದನ ಕಳವಾಗಿರುವುದು

ಕಾರ್ಕಳ: ಹಟ್ಟಿಯಲ್ಲಿ ಕಟ್ಟಿ ಹಾಕಲಾಗಿದ್ದ ದನ ಕಳ್ಳತ‌ನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ಅಟೋ ರಿಕ್ಷಾದಲ್ಲಿ ಅಕ್ರಮ ಗೋಮಾಂಸ ಸಾಗಾಟ ➤ 30 ಕೆಜಿ ಮಾಂಸದ ಸಹಿತ ಅಟೋ ರಿಕ್ಷಾ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಎ. 17. ಆಟೋ ರಿಕ್ಷಾದಲ್ಲಿ ಅಕ್ರಮವಾಗಿ 30ಕೆಜಿ ಗೋಮಾಂಸ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ವ್ಯಕ್ತಿಯನ್ನು ವಶಕ್ಕೆ ಪಡೆದ ಘಟನೆ ವಿಟ್ಲ ಪೊಲೀಸ್ ಠಾಣೆಯ ಸಾರಡ್ಕ ಚೆಕ್ ಪೋಸ್ಟ್‌ ನಲ್ಲಿ ನಡೆದಿದೆ. ಬಂಧಿತನನ್ನು ಬದಿಯಡ್ಕ ಚೆನ್ನರಕಟ್ಟೆ ನಿವಾಸಿ ಲಿಜೋ ಜಾರ್ಜ್ (35) ಎಂದು ಗುರುತಿಸಲಾಗಿದೆ. ಪೊಲೀಸರು ಕೇಪು ಗ್ರಾಮದ ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ತಪಾಸಣಾ ನಿರತರಾಗಿದ್ದ ಸಂದರ್ಭ ಪೆರ್ಲ ಕಡೆಯಿಂದ ಅಡ್ಯನಡ್ಕ ಕಡೆಗೆ ಆಟೋರಿಕ್ಷಾದಲ್ಲಿ ದಾಖಲಾತಿ ಇಲ್ಲದೆ ಅಕ್ರಮವಾಗಿ ದನದ

ವಿಟ್ಲ: ಅಟೋ ರಿಕ್ಷಾದಲ್ಲಿ ಅಕ್ರಮ ಗೋಮಾಂಸ ಸಾಗಾಟ ➤ 30 ಕೆಜಿ ಮಾಂಸದ ಸಹಿತ ಅಟೋ ರಿಕ್ಷಾ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ➤ ಕೊಲೆ ಶಂಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಎ. 17. ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಬದಿಯಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಶುಕ್ರವಾರದಂದು ರಾತ್ರಿ ಪತ್ತೆಯಾಗಿದೆ. ಬಸ್ ನಿಲ್ದಾಣದ ಸಿಬ್ಬಂದಿಯೋರ್ವರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹದ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಮೃತರ ಆಧಾರ್ ಕಾರ್ಡ್ ಸಿಕ್ಕಿದೆ. ಮೃತ ವ್ಯಕ್ತಿ ಮಂಗಳೂರಿನ ಅಚ್ಚುತ ಎನ್ನಲಾಗಿದೆ. ಸದ್ಯ ಮೃತದೇಹವನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ಪೊಲೀಸರು

ಸುಳ್ಯ: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ➤ ಕೊಲೆ ಶಂಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಬೈಕ್ ಹಾಗೂ ಪಿಕಪ್ ನಡುವೆ ಅಪಘಾತ ➤ ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ. 16. ಬೈಕ್ ಮತ್ತು ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮಂದಡ್ಕ ಗ್ರಾಮದ ಸೀಟ್ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತರನ್ನು ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಸುದೀಪ್ ಭಂಡಾರಿ (34) ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿದ್ದ ಸಹ ಸವಾರ ಕೂಡಾ ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಸುದೀಪ್ ಭಂಡಾರಿ ಅವರ ತಲೆಗೆ ಗಂಭೀರ

ಬೆಳ್ತಂಗಡಿ: ಬೈಕ್ ಹಾಗೂ ಪಿಕಪ್ ನಡುವೆ ಅಪಘಾತ ➤ ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top