ಕಡಬ: ರಿಕ್ಷಾ ಸ್ಕಿಡ್- ಚಾಲಕನಿಗೆ ಗಾಯ



(ನ್ಯೂಸ್ ಕಡಬ) newskadaba.com ಕಡಬ, ಎ. 04. ಉಪ್ಪಿನಂಗಡಿ- ಕಡಬ ರಸ್ತೆಯ ಆಲಂಕಾರು ಪೇಟೆ ಸಮೀಪ ರಿಕ್ಷಾವೊಂದು ಸ್ಕಿಡ್ ಆಗಿ ರಸ್ತೆ ಪಕ್ಕದಲ್ಲಿದ್ದ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡ ಘಟನೆ ಆಲಂಕಾರು ಪೇಟೆಯ ನೂಜಿಬೈಲು ಎಂಬಲ್ಲಿ ನಡೆದಿದೆ.







ರಿಕ್ಷಾ ರಾಮಕುಂಜದಿಂದ ಆಲಂಕಾರು ಪೇಟೆಗೆ ಬಂದು ಹಿಂದಿರುಗಿ ಹೋಗುವಾಗ ಈ ಅಪಘಾತ ಸಂಭವಿಸಿದ್ದು ಚಾಲಕನಿಗೆ ಗಾಯವಾಗಿದೆ ಎನ್ನಲಾಗಿದೆ.






 

error: Content is protected !!
Scroll to Top