ಮದ್ಯ ಸಾಗಾಟದ ಲಾರಿ ಪಲ್ಟಿ- ರಸ್ತೆ ಮೇಲೆ ಬಿದ್ದಿದ್ದ ಮದ್ಯಕ್ಕಾಗಿ ಮುಗಿಬಿದ್ದ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಕಾರವಾರ, ಎ. 04. ಅಕ್ರಮವಾಗಿ ಗೋವಾದಿಂದ ಹುಬ್ಬಳ್ಳಿಗೆ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದಲ್ಲಿ ನಡೆದಿದೆ.


ಲಾರಿಯ ತುಂಬ ಮದ್ಯವನ್ನ ತುಂಬಿಸಿಡಲಾಗಿದ್ದು ಲಾರಿಯು ಪಲ್ಟಿಯಾದ ವಿಷಯ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಓಡೋಡಿ ಬಂದು ರಸ್ತೆ ಮೇಲೆ ಬಿದ್ದಿದ್ದ ಮದ್ಯದ ಬಾಟಲಿಯನ್ನ ಎತ್ತಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top