ಮಂಗಳೂರು: ಮಸೀದಿಗೆ ಕಲ್ಲೆಸೆದು ಹಾನಿಗೈದ ದುಷ್ಕರ್ಮಿಗಳು



(ನ್ಯೂಸ್ ಕಡಬ) newskadaba.com ಮಂಗಳೂರು, ಎ. 05. ಇಲ್ಲಿನ ಕಾಟಿಪಳ್ಳ ಬಳಿಯ ಕಾನ ಜನತಾ ಕಾಲನಿಯಲ್ಲಿ ಮಸೀದಿಗೆ ಕಿಡುಗೇಡಿಗಳು ಕಲ್ಲೆಸೆದು ಹಾನಿಗೈದ ಘಟನೆ ನಡೆದಿದೆ.‌







ಜನತಾ ಕಾಲನಿಯ ಸಾದುಲಿ ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸಕ್ಕೆ ಶನಿವಾರದಂದು ರಾತ್ರಿ ದುಷ್ಕರ್ಮಿಗಳು ಕಲ್ಲೆಸೆದಿದ್ದು, ಈ ಬಗ್ಗೆ ಮಸೀದಿ ಕಮಿಟಿ ಸದಸ್ಯರು ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಸೀದಿಯಲ್ಲಿ ಶನಿವಾರ ರಾತ್ರಿ 1:30ರ ವರೆಗೆ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಬಳಿಕ ಸುಮಾರು 2:30ರ ವೇಳೆಗೆ ದ್ವಿಚಕ್ರ ವಾಹನ ಒಂದರಲ್ಲಿ ಬಂದಿದ್ದ ದುಷ್ಕರ್ಮಿಗಳು ಮಸೀದಿಗೆ ಕಲ್ಲೆಸೆದಿದ್ದಾರೆ. ಇದರಿಂದ ಮಸೀದಿಯ ಕಿಟಕಿಯ ಗಾಜಿಗೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.






error: Content is protected !!
Scroll to Top