ಸಕಲೇಶಪುರ: ಕಾಡಾನೆ ದಾಳಿಗೆ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಸಕಲೇಶಪುರ, ಎ. 03. ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಕುನಿಗನಹಳ್ಳಿ ಸಮೀಪ ಹಳೆಕೆರೆ ಗ್ರಾಮದ ಕಾಲುದಾರಿಯಲ್ಲಿ ನಡೆದಿದೆ.

 

ಮೃತಪಟ್ಟವರನ್ನುಶಿವಣ್ಣ ಗೌಡ (65) ಎಂದು ಗುರುತಿಸಲಾಗಿದೆ. ಅವರು ಶುಕ್ರವಾರದಂದು ರಾತ್ರಿ ಕಾಲು ದಾರಿಯಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Scroll to Top