ಕ್ರೈಮ್ ನ್ಯೂಸ್

ಕೊಯ್ನಾಡಿನಲ್ಲಿ ಆನೆಗಳ ಹಿಂಡು  ➤ ದಿಕ್ಕಾಪಾಲಾಗಿ ಓಡಿದ ಯುವಕರು

(ನ್ಯೂಸ್ ಕಡಬ) newskadaba.com ಕೊಯ್ನಾಡು, ಡಿ. 27. ಕೊಯ್ನಾಡು ಸಮೀಪದ ಮಾಣಿ – ಮೈಸೂರು ಹೆದ್ದಾರಿ ಬಳಿ ಪಯಸ್ವಿನಿ ನದಿಯ ತೀರಕ್ಕೆ ಸ್ನಾನಕ್ಕೆಂದು ಕೆಲವು ಯುವಕರು ಬಂದಿದ್ದ, ಸಂಧರ್ಭ ಉನೈಸ್ ಪೆರಾಜೆ ಎಂಬವರು ನದಿಯ ತಟದಲ್ಲಿ ಯಾತ್ರಿಕರು ಬಂದು ಬಿಸಾಕಿದ್ದ ಕಸದ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಾಡಿನಿಂದ ಏಕಾಏಕಿ ಆನೆಗಳ ಹಿಂಡೊಂದು ಇವರ ಬಳಿ ಬರುತ್ತಿದ್ದುದನ್ನು ಗಮನಿಸಿದರು, ಕೂಡಲೇ ಅವರು ಅಲ್ಲಿಂದ ಓಟಕಿತ್ತರು ಎಂದು ತಿಳಿದುಬಂದಿದೆ. ನಂತರ ದೂರದಲ್ಲಿ ನಿಂತು ಆನೆಗಳ ಹಿಂಡಿನ ವಿಡಿಯೋವನ್ನು […]

ಕೊಯ್ನಾಡಿನಲ್ಲಿ ಆನೆಗಳ ಹಿಂಡು  ➤ ದಿಕ್ಕಾಪಾಲಾಗಿ ಓಡಿದ ಯುವಕರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಸಿಪಿಐಎಂ ಕಾರ್ಯಕರ್ತರಿಂದ ಹಲ್ಲೆ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬದಿಯಡ್ಕ, ಡಿ. 27. ಸಿಪಿಐಎಂ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಪರಿಣಾಮ ಇಬ್ಬರು ಬಿಜೆಪಿ ಕಾರ್ಯಕರ್ತರು ಗಾಯಗೊಂಡ ಘಟನೆ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಮಣಿಯಂಪಾರೆ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಮಣಿಯಂಪಾರೆ ಜಯಂತ ನಾಯ್ಕರ ಮಗ ಸೂರ್ಯೋದಯ ಸಂಟನಡ್ಕ, ಐತಪ್ಪ ನಾಯ್ಕರ ಮಗ ರೂಪೇಶ್ ಎಂದು ಗುರುತಿಸಲಾಗಿದೆ. 6 ಮಂದಿ ಸಿಪಿಐಎಂ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಆಕ್ರಮಿಸಿ ಗಾಯಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಾಳುಗಳನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಸಿಪಿಐಎಂ ಕಾರ್ಯಕರ್ತರಿಂದ ಹಲ್ಲೆ ➤ ಇಬ್ಬರಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಐಸಿಯುನಲ್ಲಿ ಮಗಳ ಮದುವೆ ನೋಡುತ್ತಾ ಪ್ರಾಣಬಿಟ್ಟ ತಾಯಿ..!                                   

(ನ್ಯೂಸ್ ಕಡಬ) newskadaba.com ಬಿಹಾರ, ಡಿ. 27. ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ತಾಯಿಯೊಬ್ಬರ ಕೊನೆಯ ಆಸೆಯಂತೆ ಮಗಳು ವಿವಾಹವಾಗಿರುವ ಅಪರೂಪದ ಘಟನೆ ಸಂಭವಿಸಿದ್ದು, ಪೂನಂ ಕುಮಾರಿ ವರ್ಮಾ ಎಂಬ ಮಹಿಳೆ ತನ್ನ ಮಗಳ ಮದುವೆ ಐಸಿಯು ವಾರ್ಡ್ ನಲ್ಲಿ ನಡೆದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪೂನಂ ಅವರು ತಮ್ಮ ಮಗಳು ಚಾಂದಿನಿ ಕುಮಾರಿಗೆ ಇಂಜಿನಿಯರ್ ಆಗಿರುವ ಸುಮಿತ್ ಗೌರವ್ ಅವರೊಂದಿಗೆ ವಿವಾಹ ನಿಶ್ಚಯ ಮಾಡಿದ್ದು, ಆರೋಗ್ಯ ಹದಗೆಟ್ಟಾಗ, ನಿಶ್ಚಿತಾರ್ಥದ ನಿಗದಿತ ದಿನಾಂಕಕ್ಕಿಂತ ಒಂದು ದಿನ

ಐಸಿಯುನಲ್ಲಿ ಮಗಳ ಮದುವೆ ನೋಡುತ್ತಾ ಪ್ರಾಣಬಿಟ್ಟ ತಾಯಿ..!                                    Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

2022 ರಲ್ಲಿ 185 ಸೈಬರ್ ಕ್ರೈಮ್ ಪ್ರಕರಣ ದಾಖಲು- ಆರೋಪಿಗಳಿಗೆ ಇದುವರೆಗೆ ಶಿಕ್ಷೆಯಾಗಿಲ್ಲ ➤ ಗೃಹಸಚಿವ ಆರಗ ಜ್ಞಾನೇಂದ್ರ

(ನ್ಯೂಸ್ ಕಡಬ) newskadaba.com  ಬೆಳಗಾವಿ, ಡಿ.27. ರಾಜ್ಯದಲ್ಲಿ ಒಟ್ಟಾರೆಯಾಗಿ ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮಧ್ಯವರ್ತಿ ನಿಯಮಗಳು 2011 ಮತ್ತು 2022 ರ ಅಡಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ, ಅಸಭ್ಯ ಮತ್ತು ಸಾಮಾಜಿಕ ವಿರೋಧಿ ವಿಡಿಯೋಗಳು ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳುವವರ ವಿರುದ್ಧ 185 ಪ್ರಕರಣಗಳನ್ನು ದಾಖಲಿಸಲಾಗಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಕಾರಣ, ಸರ್ಕಾರವು ಬೆಂಗಳೂರಿನಲ್ಲಿ ಎಂಟು ಸೈಬರ್  ಕ್ರೈಂ ಪೊಲೀಸ್ ಠಾಣೆಗಳನ್ನು ಮತ್ತು ಪ್ರತಿ ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಘಟಕಗಳನ್ನು ಸ್ಥಾಪಿಸಿದೆ

2022 ರಲ್ಲಿ 185 ಸೈಬರ್ ಕ್ರೈಮ್ ಪ್ರಕರಣ ದಾಖಲು- ಆರೋಪಿಗಳಿಗೆ ಇದುವರೆಗೆ ಶಿಕ್ಷೆಯಾಗಿಲ್ಲ ➤ ಗೃಹಸಚಿವ ಆರಗ ಜ್ಞಾನೇಂದ್ರ Read More »

ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ಊಟ ಮಾಡುವಾಗ ಕುಸಿದು ಬಿದ್ದು ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಮೈಸೂರು, ಡಿ. 27. ಯುವಕಯೋರ್ವ ಊಟ‌ ಮಾಡುವಾಗ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕನಕಪುರದ ಪ್ರೈಡ್ ಹೋಟೆಲ್‌ವೊಂದರಲ್ಲಿ ವರದಿಯಾಗಿದೆ. ಮೃತರನ್ನು ಮೈಸೂರು ಮೂಲದ ಪ್ರೀತಂ (35) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ವಾಪಸ್ ಮೈಸೂರಿಗೆ​ ಬರುವಾಗ ಸ್ನೇಹಿತರ ಜೊತೆ ಊಟಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆನ್ನಲಾಗಿದೆ. ಪ್ರೀತಂ ಕುಸಿದು ಬಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  

ಊಟ ಮಾಡುವಾಗ ಕುಸಿದು ಬಿದ್ದು ಯುವಕ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸೈಕಲ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) bewskadaba.com ಕಾರ್ಕಳ, ಡಿ. 27. ಸೈಕಲ್‌ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕೂಲಿ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಸುಜಿತ್ (23) ಎಂದು ಗುರುತಿಸಲಾಗಿದೆ. ಸಚ್ಚರಿಪೇಟೆಯ ತೋಟವೊಂದರಲ್ಲಿ ಕೂಲಿ ಕಾರ್ಮಿಕರಾಗಿದ್ದ ಇವರು, ಕಳೆದ ಡಿ. 12ರಂದು ಸಚ್ಚರಿಪೇಟೆ ಪೆಟ್ರೋಲ್ ಪಂಪ್ ಬಳಿಯ ಇಳಿಜಾರಿನ ರಸ್ತೆಯಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಸೈಕಲ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ವೆನ್ಲಾಕ್

ಸೈಕಲ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ ➤ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ವಿರಾಜಪೇಟೆ, ಡಿ. 27. ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ವಿರಾಜಪೇಟೆಯಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಸಚಿನ್ ಮುತ್ತಣ್ಣ (26) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆರ್ಮುಗ ಎಂದು ಗುರುತಿಸಲಾಗಿದೆ. ಇವರನ್ನು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಅಪಘಾತ ➤ ಓರ್ವ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಸ್ಕೂಟರ್ ಢಿಕ್ಕಿ ➤ ಅಪರಿಚಿತ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 27. ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಲ್ಲುಗುಂಡಿಯ ಗೂನಡ್ಕ ಕಡೆಪಾಲ ಬಳಿ ವರದಿಯಾಗಿದೆ. ಕಳೆದ 4 ದಿನಗಳಿಂದ ಕಲ್ಲುಗುಂಡಿ ಆರಂತೋಡು ಪರಿಸರದಲ್ಲಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿ ಸ್ಕೂಟಿಗೆ ಬಲಿಯಾಗಿದ್ದಾರೆ. ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಲ್ಲುಗುಂಡಿ ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಸ್ಕೂಟರ್ ಢಿಕ್ಕಿ ➤ ಅಪರಿಚಿತ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಎರಡು ತಲೆ ಹಾವು ಮಾರಾಟಕ್ಕೆ ಯತ್ನ ➤ ಪಿಡಿಒ ಸೇರಿ ಮೂವರ ಬಂಧನ                                 

(ನ್ಯೂಸ್ ಕಡಬ) newskadaba.com ತಿಪಟೂರು, ಡಿ. 27. ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಪಿಡಿಒ ಸೇರಿ ಮೂವರನ್ನು ಪೊಲೀಸ್ ಇಲಾಖೆ ಬಂಧಿಸಿದ ಘಟನೆ ತುಮಕೂರಿನಲ್ಲಿ ವರದಿಯಾಗಿದೆ. ಬಂಧಿತ ಆರೋಪಿಗಳನ್ನು ಶೇಕ್ ಹುಸೇನ್, ಮೊಹಮ್ಮದ್ ಆರೀಫ್ ಎಂದು ಗುರುತಿಸಲಾಗಿದೆ. ಜನರಲ್ಲಿ ಮೂಢನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡ ಆರೋಪಿಗಳು, ಎರಡು ತಲೆ ಹಾವಿನಿಂದ ಐಶ್ವರ್ಯ ವೃದ್ಧಿಸುತ್ತದೆ, ಈ ಹಾವು ಕೋಟ್ಯಂತರ ಬೆಲೆ ಬಾಳುತ್ತದೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು

ಎರಡು ತಲೆ ಹಾವು ಮಾರಾಟಕ್ಕೆ ಯತ್ನ ➤ ಪಿಡಿಒ ಸೇರಿ ಮೂವರ ಬಂಧನ                                  Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನ ಹೊತ್ತೊಯ್ದ ಚಿರತೆ..!

(ನ್ಯೂಸ್ ಕಡಬ) newskadaba.com ಮಂಡ್ಯ, ಡಿ. 27. ಸಕ್ಕರೆ ನಗರಿಯಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನ ಚಿರತೆ ಹೊತ್ತೊಯ್ದ ಘಟನೆ ಜಿಲ್ಲೆಯ ಕೆ.ಆರ್​.ಪೇಟೆ ತಾಲೂಕಿನ ಚಟ್ಟಂಗೆರೆಯಲ್ಲಿ ನಡೆದಿದೆ. ಗ್ರಾಮದ ಸುತ್ತಮುತ್ತ ಹಲವು ಬಾರಿ ಚಿರತೆ ಪ್ರತ್ಯಕ್ಷ ಗೊಂಡಿದ್ದು, ಇದೀಗ ನಾಯಿಯನ್ನು ಹೊತ್ತೊಯ್ದಿದೆ. ಇದು ಸಹಜವಾಗಿ ಚಟ್ಟಂಗೆರೆ ಗ್ರಾಮಸ್ಥರಲ್ಲಿದ್ದ ಆತಂಕವನ್ನು ಹೆಚ್ಚಿಸಿದೆ. ಹೊಲ ಗದ್ದೆಗಳಿಗೆ, ರಸ್ತೆಗೆ ಇಳಿಯಲು ಜನರು ಭಯಪಡುವಂತಾಗಿದೆ. ಚಿರತೆ ಪ್ರತ್ಯಕ್ಷದ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ

ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನ ಹೊತ್ತೊಯ್ದ ಚಿರತೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top