ಲಾರಿ ಹರಿದು ಬೈಕ್ ಸಹಸವಾರ ಮೃತ್ಯು..!

(ನ್ಯೂಸ್ ಕಡಬ) newskadaba.com ರಾಯಚೂರು, ಡಿ. 24. ಲಾರಿ ಹರಿದು ಬೈಕ್ ನ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಮಸ್ಕಿ ತಾಲ್ಲೂಕಿನ ಬೇಡರ ಕಾರಲಕುಂಟಿ ಗ್ರಾಮದ ಬಳಿ ಸಂಭವಿಸಿದೆ.

ಮೃತರನ್ನು ಲಿಂಗಸುಗೂರು ತಾಲ್ಲೂಕಿನ ಯರಗಂಟಿ ಗ್ರಾಮದ ಶಿವಗ್ಯಾನಪ್ಪ ತಳವಾರ (38) ಎಂದು ಗುರುತಿಸಲಾಗಿದೆ. ಬೈಕ್ ಸವಾರನಿಗೆ ಯಾವುದೇ ಗಾಯಗಳಾಗಿಲ್ಲ. ಮಸ್ಕಿಯಿಂದ ಲಿಂಗಸುಗೂರಿಗೆ ಬೈಕ್ ನಲ್ಲಿ ತೆರಳುವಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top