ಬುರ್ಖಾ ಧರಿಸಿ ಗೆಳೆಯನನ್ನೇ ಕೊಂದ ಪಾಪಿ: ಚಿನ್ನದ ಸರಕ್ಕಾಗಿ 18 ವರ್ಷದ ಸ್ನೇಹ ಕೊಲೆಯಲ್ಲಿ ಅಂತ್ಯ



(ನ್ಯೂಸ್‌ ಕಡಬ) newskadaba.com,  ಜೂ.06 ದೆಹಲಿ: ₹5 ಲಕ್ಷದ ಚಿನ್ನದ ಸರಕ್ಕಾಗಿ 18 ವರ್ಷದ ಸ್ನೇಹಿತನ ಕೊಲೆ!







ಉತ್ತರ ಪ್ರದೇಶದಲ್ಲಿ ಕೇವಲ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರಕ್ಕಾಗಿ ಮೋಹಿತ್ ದ್ವಿವೇದಿ ಎಂಬಾತ ತನ್ನ 18 ವರ್ಷದ ಹಳೆಯ ಸ್ನೇಹಿತ, ಕೋಚಿಂಗ್ ಸಂಸ್ಥೆ ಮಾಲೀಕ ಪ್ರಕಾಶ್ ಚಂದ್ರ ಗುಪ್ತ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.






ಮೇ 31ರ ಐಪಿಎಲ್ ಫೈನಲ್ ರಾತ್ರಿ, ಯುಟ್ಯೂಬ್ ನೋಡಿ ಸ್ಕೆಚ್ ಹಾಕಿದ್ದ ಆರೋಪಿ ಬುರ್ಖಾ ಧರಿಸಿ ಬಂದು ಈ ಕೃತ್ಯ ಎಸಗಿದ್ದ. ಕೊಲೆ ನಡೆಸಿ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ ಮೋಹಿತ್‌ನನ್ನು, ಸಿಸಿಟಿವಿಯಲ್ಲಿ ಸೆರೆಯಾದ ಅವನ ಅಸಹಜ ನಡಿಗೆಯ ಶೈಲಿ ಹಾಗೂ ಕಾರಿನಲ್ಲಿ ವೇಷ ಬದಲಾಯಿಸುತ್ತಿದ್ದ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.

error: Content is protected !!
Scroll to Top