ಕ್ರೈಮ್ ನ್ಯೂಸ್

ಮಂಗಳೂರು: ಜಲೀಲ್ ಕೊಲೆ ಪ್ರಕರಣ ➤ ಮತ್ತೋರ್ವ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಸುರತ್ಕಲ್‌, ಡಿ. 27. ಕಾಟಿಪಳ್ಳ ಜಲೀಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೇ ಆರೋಪಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾಟಿಪಳ್ಳ 4ನೇ ಬ್ಲಾಕ್‌ ನಿವಾಸಿ ಲಕ್ಷ್ಮೀಶ ದೇವಾಡಿಗ (28) ಎಂದು ಗುರುತಿಸಲಾಗಿದೆ. ಕಳೆದ ಶನಿವಾರದಂದು ರಾತ್ರಿ ಜಲೀಲ್‌ ಅವರನ್ನು ಕಾಟಿಪಳ್ಳ 4ನೇ ಬ್ಲಾಕ್‌ ನ ನೈತಂಗಡಿ ಎಂಬಲ್ಲಿರುವ ಅವರ ಫ್ಯಾನ್ಸಿ ಮತ್ತು ಚಪ್ಪಲಿಯ ಅಂಗಡಿಯ ಮುಂಭಾಗ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು.

ಮಂಗಳೂರು: ಜಲೀಲ್ ಕೊಲೆ ಪ್ರಕರಣ ➤ ಮತ್ತೋರ್ವ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಂಗಳೂರು : ಬೈಕ್ ಪಲ್ಟಿ ➤ ಖಾಸಗಿ ಕಂಪನಿ ಉದ್ಯೋಗಿ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಂಗಳೂರು ,  ಡಿ 27 :   ಅತಿವೇಗವಾಗಿ ಹೋಗುತ್ತಿದ್ದ ಬೈಕೊಂದು ಆಯತಪ್ಪಿ ಬಿದ್ದ ಪರಿಣಾಮ ಪೋರ್ಟರ್ ಕಂಪನಿಯ ಪ್ರತಿನಿಧಿಯೊಬ್ಬರು ಮೃತಪಟ್ಟ ದಾರುಣ ಘಟನೆ ಹೆಚ್ ಎಸ್ ಆರ್ ಲೇಔಟ್ ನ ಹೊರವರ್ತುಲ ರಸ್ತೆಯ ಇಬ್ಬಲೂರು ಬ್ರಿಡ್ಜ್ ಡೌನ್ ನಲ್ಲಿ ವರದಿಯಾಗಿದೆ. ಮೃತರನ್ನು ಪೈಲೇಔಟ್ ನ ಸಂತೋಷ್ ಹೊಂಗಲ್ (33) ಎಂದು ಗುರುತಿಸಲಾಗಿದೆ. ಹೆಚ್ ಎಸ್ ಆರ್ ಲೇಔಟ್ ನ ಹೊರವರ್ತುಲ ರಸ್ತೆಯ ಇಬ್ಬಲೂರು ಬ್ರಿಡ್ಜ್ ಡೌನ್ ಬಳಿ ಕೆಲಸ ಮುಗಿಸಿಕೊಂಡು ಇವರು

ಬೆಂಗಳೂರು : ಬೈಕ್ ಪಲ್ಟಿ ➤ ಖಾಸಗಿ ಕಂಪನಿ ಉದ್ಯೋಗಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತ

ನ್ಯೂಸ್ ಕಡಬ) newskadaba.com, ಬೆಂಗಳೂರು,  ಡಿ. 27.  ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರ ಕಾರು ಅಪಘಾತ  ಗೊಂಡಿರುವ ಘಟನೆ ಮೈಸೂರು ತಾಲೂಕಿನ ಕಡಕೊಳ ಬಳಿ ನಡೆದಿದೆ. ಮರ್ಸಿಡಿಸ್ ಬೆಂಜ್ ಕಾರಿನಲ್ಲಿದ್ದ ಪ್ರಹ್ಲಾದ್ ಮೋದಿ ಪುತ್ರ ಹಾಗೂ ಸೊಸೆಗೆ ಗಂಭೀರ ಗಾಯಗಳಾಗಿ ದೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಮೈಸೂರು ಎಸ್​ಪಿ ಸೀಮಾ ಲಾಟ್ಕರ್, ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

➤ ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತ Read More »

ಕ್ರೈಮ್ ನ್ಯೂಸ್

ಪ್ರಧಾನಿ ಮೋದಿ ಸಹೋದರನ ಕಾರು ಮೈಸೂರಿನಲ್ಲಿ ಅಪಘಾತ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮೈಸೂರು, ಡಿ. 27. ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಯಾಣಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಮೈಸೂರಿನ ಕಡಕೊಳ ಬಳಿ ನಡೆದಿದೆ. ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಹ್ಲಾದ್ ಮೋದಿಯವರ ಮಗ ಹಾಗೂ ಸೊಸೆ ಗಾಯಗೊಂಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮೈಸೂರು ಎಸ್ ಪಿ ಸೀಮಾ ಲಾಟ್ಕರ್ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಧಾನಿ ಮೋದಿ ಸಹೋದರನ ಕಾರು ಮೈಸೂರಿನಲ್ಲಿ ಅಪಘಾತ ➤ ಮೂವರಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಮ್ ➤ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು,   ಡಿ. 23.  ದೇಶದಲ್ಲಿ ಸೈಬರ್ ದರೋಡೆಕೋರರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ  ಇದೆ.  ಈ ಹಿಂದೆ ವಿದ್ಯುತ್ ಬಿಲ್, ಓಟಿಪಿ ಮೂಲಕ ಹಣ ದೋಚಿಕೊಳ್ಳುತ್ತಿದ್ದ ಖದೀಮರು ಈಗೀಗ ಫೋನ್‌ಗೆ ಮಿಸ್ಡ್‌ಕಾಲ್‌ ಕೊಡುವ ಮೂಲಕ ಸಿಮ್ ಸ್ವ್ಯಾಪ್ ಮಾಡಿ ಹಣ ಖದಿಯುವ ರಹಸ್ಯ ದಾರಿಯನ್ನೂ ಹುಡುಕಿದ್ದಾರೆ. ಅಚ್ಚರಿ

➤ ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಮ್ ➤ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕ್ಯಾಂಪಸ್ ನಲ್ಲಿ ಚಿರತೆ ದಾಳಿ ➤ ಅರಣ್ಯಾಧಿಕಾರಿಗಳು ಸೇರಿ 15 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಗುವಹಾಟಿ , ಡಿ 27 :  ಚಿರತೆಯೊಂದು ದಾಳಿಮಾಡಿ ಪರಿಣಾಮ ಮೂವರು ಅರಣ್ಯಾಧಿಕಾರಿಗಳು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 15 ಮಂದಿ ಗಾಯಗೊಂಡಿರುವ ಘಟನೆ ಅಸ್ಸಾಂ ರಾಜ್ಯದ ಜೋರ್ಹಟ್‌ ಎಂಬಲ್ಲಿ ವರದಿಯಾಗಿದೆ. ಅರಣ್ಯಾಧಿಕಾರಿಗಳು ಸೆರೆಹಿಡಿದಿರುವ ವೀಡಿಯೋವೊಂದರಲ್ಲಿ ಚಿರತೆ ಕ್ಯಾಂಪಸ್‌ನ ತಡೆಬೇಲಿಯನ್ನು ಹಾರಿ ಒಳಬರುತ್ತಿರುವುದು ಹಾಗೂ ಅಲ್ಲಿ ಸಾಗುತ್ತಿರುವ ಕಾರೊಂದರ ಮೇಲೆ ದಾಳಿ ನಡೆಸಿರುವುದು ಕ್ಯಾಮರದಲ್ಲಿ ಸೆರೆಯಾಗಿದೆ. ಇನ್ನು ರೈನ್‌ಫಾರೆಸ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಜೋರ್ಹಟ್‌ ನಗರದ ಹೊರವಲಯದಲ್ಲಿದ್ದು ಸುತ್ತಲೂ ಅರಣ್ಯ ಪ್ರದೇಶವಿರುವುದರಿಂದ ಚಿರತೆ ಅಲ್ಲಿಂದ

ಕ್ಯಾಂಪಸ್ ನಲ್ಲಿ ಚಿರತೆ ದಾಳಿ ➤ ಅರಣ್ಯಾಧಿಕಾರಿಗಳು ಸೇರಿ 15 ಮಂದಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು…!

(ನ್ಯೂಸ್ ಕಡಬ) newskadaba.com ಬಜ್ಪೆ, ಡಿ. 27. ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿಯೋರ್ವ ಕಾಲುಜಾರಿ ಮೃತಪಟ್ಟ ಘಟನೆ ಬಜ್ಪೆಯಲ್ಲಿ ನಡೆದಿದೆ. ಮೃತರನ್ನು ಕೊಳಂಬೆ ತಲ್ಲದಬೈಲು ನಿವಾಸಿ ಪದ್ಮನಾಭ ಬೆಲ್ಚಡ ಎಂದು ಗುರುತಿಸಲಾಗಿದೆ. ಬಜ್ಪೆಯಲ್ಲಿ ಮದ್ಯದಂಗಡಿ ಹೊಂದಿದ್ದ ಇವರು, ಸೆಕ್ಷನ್ ಜಾರಿಯಲ್ಲಿದ್ದ ಹಿನ್ನೆಲೆ ಮನೆಯಲ್ಲೇ ಇದ್ದು, ಬೆಳಗ್ಗೆ ಏಳು ಗಂಟೆಯ ವೇಳೆಗೆ ಬಾವಿ ಬಳಿ ತೆರಳಿದಾಗ ಆಕಸ್ಮಿಕವಾಗಿ ಬಿದ್ದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕುಂದಾಪುರ : ಬೈಕ್ ಗೆ ಕ್ರೇನ್ ಢಿಕ್ಕಿ ➤ ಸಹಸವಾರ ಸ್ಥಳದಲ್ಲೇ ಮೃತ್ಯು..!

(ನ್ಯೂಸ್ ಕಡಬ) newskadaba.com  ಕುಂದಾಪುರ , ಡಿ 27 :  ಚಲಿಸುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಬಂದ ಕ್ರೇನ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ  ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಪಾದಕದಕಟ್ಟೆ ಎಂಬಲ್ಲಿ ವರದಿಯಾಗಿದೆ. ಮೃತರನ್ನು ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿ ಸಮೀಪದ ಹೊಂಬಾಡಿ ನಿವಾಸಿ ಪ್ರಶಾಂತ್ ಮೊಗವೀರ (31) ಎಂದು ಗುರುತಿಸಲಾಗಿದೆ. ಪ್ರಶಾಂತ್ ಅವರು ದಿನೇಶ್ ಪೂಜಾರಿ ಎಂಬವರ ಬೈಕ್ ನಲ್ಲಿ  ಹಿಂಬದಿ ಕುಳಿತು ಕುಂದಾಪುರ ಕಡೆಯಿಂದ

ಕುಂದಾಪುರ : ಬೈಕ್ ಗೆ ಕ್ರೇನ್ ಢಿಕ್ಕಿ ➤ ಸಹಸವಾರ ಸ್ಥಳದಲ್ಲೇ ಮೃತ್ಯು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ತೆಂಗಿನಕಾಯಿ ಹೆಕ್ಕಲು ಹೋದ ವೃದ್ದೆ ಬಾವಿಗೆ ಬಿದ್ದು ಮೃತ್ಯು…!

(ನ್ಯೂಸ್ ಕಡಬ) newskadaba.com ಕೋಟ, ಡಿ. 27. ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಲೆಂದು ತೆರಳಿದ್ದ ವೃದ್ಧೆ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಹಳ್ಳಾಡಿ-ಹರ್ಕಾಡಿ ಗ್ರಾಮದ ಗಾವಳಿ ಎಂಬಲ್ಲಿ ನಡೆದಿದೆ. ಮೃತರನ್ನು ಗಾವಳಿ ನಿವಾಸಿ ಚಿಕ್ಕು ಎಂದು ಗುರುತಿಸಲಾಗಿದೆ. ಇವರು ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಂಗಿನಕಾಯಿ ಹೆಕ್ಕಲು ಹೋದ ವೃದ್ದೆ ಬಾವಿಗೆ ಬಿದ್ದು ಮೃತ್ಯು…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಧರ್ಮಸ್ಥಳ: ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಡಿ. 27. ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಪ್ರಾಣಪಾಯದಿಂದ ಪಾರಾದ ಘಟನೆ ದೊಂಡೋಲೆ ಕ್ರಾಸ್ ಬಳಿ ಮಂಗಳವಾರದಂದು ಸಂಭವಿಸಿದೆ. ಅಪಘಾತದಿಂದಾಗಿ ಬೈಕ್ ಸಂಪೂರ್ಣ ಜಖಂಗೊಂಡಿದೆ. ಘಟನೆ ನಡೆದ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. .

ಧರ್ಮಸ್ಥಳ: ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top