ಕ್ಷುಲ್ಲಕ ಕಾರಣಕ್ಕೆ ಪತ್ನಿಯಿಂದ ಪತಿಯ ಹತ್ಯೆ..!

(ನ್ಯೂಸ್ ಕಡಬ) newskadaba.com ವಿರಾಜಪೇಟೆ, ಡಿ. 24. ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯೇ ಪತಿಯ ಕುತ್ತಿಗೆಗೆ ವಸ್ತ್ರದಿಂದ ಬಿಗಿದು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ಸಮೀಪದ ಬೊಳ್ಳುಮಾಡು ಗ್ರಾಮದಲ್ಲಿ ಸಂಭವಿಸಿದೆ.

ಮೃತರನ್ನು ಸುಂದರ (36) ಎಂದು ಗುರುತಿಸಲಾಗಿದೆ. ಇವರು ಬೊಳ್ಳುಮಾಡು ಗ್ರಾಮದ ತೋಟವೊಂದರ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು ಎನ್ನಲಾಗಿದೆ. ಸುಂದರ್ ಹಾಗೂ ಶೋಭ ಅವರ ನಡುವೆ ಕ್ಷುಲಕ ಕಾರಣಕ್ಕಾಗಿ ಕಲಹ ಉಂಟಾಗಿದೆ. ಇದೇ ಕಲಹ ವಿಕೋಪಕ್ಕೆ ತಿರುಗಿ, ಪತ್ನಿ ಶೋಭ ವೇಲ್ ನಿಂದ ಪತಿಯ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೀಟಿ ನೀಡಿ ಆರೋಪಿ ಶೋಭಾಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

Scroll to Top