ಚಿರತೆ ದಾಳಿ ➤ 10 ಕುರಿಗಳು ಮೃತ್ಯು.!

 (ನ್ಯೂಸ್ ಕಡಬ) newskadaba.com ಗುಬ್ಬಿ, ಡಿ. 24. ಚಿರತೆಯೊಂದು ದಾಳಿ ನಡೆಸಿ, 10 ಕುರಿಗಳನ್ನು ಕೊಂದುಹಾಕಿರುವ ಘಟನೆ ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದನಹಳ್ಳಿಯಲ್ಲಿ ವರದಿಯಾಗಿದೆ.

ರೈತರಾದ ಲಕ್ಷ್ಮಮ್ಮ ಹಾಗೂ ಗಂಗಣ್ಣ ಎಂಬವರಿಗೆ ಸೇರಿದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿವೆ ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳ ಬಳಿ ಚಿರತೆಯನ್ನು ಶೀಘ್ರವಾಗಿ ಹಿಡಿಯುವಂತೆ ಮುದ್ದನಹಳ್ಳಿಯ ಗ್ರಾಮಸ್ಥರು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.

Scroll to Top