ಲಾರಿ ಹರಿದು ಬೈಕ್ ಹಿಂಬದಿ ಸವಾರ ಮೃತ್ಯು 

(ನ್ಯೂಸ್ ಕಡಬ) newskadaba.com  ರಾಯಚೂರು, ಡಿ.24  ಬೈಕ್ ಹಿಂಬದಿ ಸವಾರ  ಆಯತಪ್ಪಿ ಬಿದ್ದಾಗ ಲಾರಿ ಹರಿದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೇಡರ ಕಾರಲಕುಂಟೆ ಗ್ರಾಮದ ಬಳಿ ಸಂಭವಿಸಿದೆ ಎನ್ನಲಾಗಿದೆ.

ಮೃತಪಟ್ಟವರನ್ನು ಲಿಂಗಸುಗೂರು ತಾಲ್ಲೂಕಿನ ಯರಗಂಟೆ ಗ್ರಾಮದ ಶಿವಗ್ಯಾನಪ್ಪ ತಳವಾರ (38)  ಎಂದು ಗುರುತಿಸಲಾಗಿದೆ.  ಮಸ್ಕಿಯಿಂದ ಲಿಂಗಸುಗೂರಿಗೆ ತೆರಳುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪೊಲೀಸರು ಲಾರಿ ಶೋಧ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

 

 

Scroll to Top