ಬ್ರೇಕಿಂಗ್ ನ್ಯೂಸ್

ಕೊಡಗು: ಮಲ್ಲಳ್ಳಿ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ಆಂಧ್ರದ ಇಬ್ಬರು ವಿದ್ಯಾರ್ಥಿಗಳ ಸಾಹಸಮಯ ರಕ್ಷಣೆ!

(ನ್ಯೂಸ್‌ ಕಡಬ) newskadaba.com,  ಜು.07 ಕೊಡಗು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಹದ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದ ಆಂಧ್ರಪ್ರದೇಶದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಗಣೇಶ್ ನಾಯಕ್ (21) ಮತ್ತು ಸಂತೋಷ್ ಕುಮಾರ್ (23).ಜಲಪಾತದಲ್ಲಿ ನೀರು ಕಡಿಮೆ ಇದೆ ಎಂದು ಭಾವಿಸಿ, ಇಬ್ಬರು ವಿದ್ಯಾರ್ಥಿಗಳು ಸುರಕ್ಷತಾ ಬೇಲಿಯನ್ನು ದಾಟಿ ನೀರಿಗೆ ಇಳಿದಿದ್ದರು. ಇದೇ ವೇಳೆ ಜಲಪಾತದ ಮೇಲ್ಭಾಗದ ವಿದ್ಯುತ್ ಉತ್ಪಾದನಾ ಘಟಕದಿಂದ ಏಕಾಏಕಿ […]

ಕೊಡಗು: ಮಲ್ಲಳ್ಳಿ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ಆಂಧ್ರದ ಇಬ್ಬರು ವಿದ್ಯಾರ್ಥಿಗಳ ಸಾಹಸಮಯ ರಕ್ಷಣೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಯನಾಡು ಭೂಕುಸಿತ- ಹಲವರು ಸಿಲುಕಿರುವ ಆತಂಕ, ರಕ್ಷಣಾ ಕಾರ್ಯಾಚರಣೆ ಚುರುಕು

(ನ್ಯೂಸ್ ಕಡಬ) newskadaba.com ಜು. 07. ಕೇರಳದ ವಯನಾಡು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಮಂಗಳವಾರ ಭಾರೀ ಭೂಕುಸಿತ ಸಂಭವಿಸಿದೆ. ಇದರ ಪರಿಣಾಮ ಮೇಪ್ಪಾಡಿಯಲ್ಲಿರುವ ನಿರ್ಮಾಣ ಹಂತದ ಸುರಂಗ ರಸ್ತೆ ಯೋಜನೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಹಲವರು ಸಿಲುಕಿರುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ. ​ ನಿರಂತರ ಮಳೆಯ ಪರಿಣಾಮ ಮೀನಾಕ್ಷಿ ಸೇತುವೆ ಸಮೀಪದ ಬೆಟ್ಟ ಕುಸಿದಿದ್ದು, ನಿರ್ಮಾಣ ಹಂತದ ಸುರಂಗ ರಸ್ತೆ ಯೋಜನೆ ನಡೆಯುತ್ತಿದ್ದ ಸ್ಥಳದಲ್ಲಿ ಅವಘಡ ಸಂಭವಿಸಿದೆ. ​ ಭೂಕುಸಿತದ ಹೊಡೆತಕ್ಕೆ ರಸ್ತೆ ಮತ್ತು ಸಮೀಪದ

ವಯನಾಡು ಭೂಕುಸಿತ- ಹಲವರು ಸಿಲುಕಿರುವ ಆತಂಕ, ರಕ್ಷಣಾ ಕಾರ್ಯಾಚರಣೆ ಚುರುಕು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕ್ಷಣಿಕ ಸೆಲ್ಫಿ ವ್ಯಾಮೋಹ ಮಲ್ಲಳ್ಳಿ ಜಲಪಾತದಲ್ಲಿ ಜವರಾಯನಿಂದ ಜಸ್ಟ್ ಮಿಸ್!

(ನ್ಯೂಸ್ ಕಡಬ) newskadaba.com ಜು. 07.ಕೊಡಗಿನ ಮಲ್ಲಳ್ಳಿ ಜಲಪಾತದಲ್ಲಿ ಒಂದು ಕ್ಷಣದ ಹುಚ್ಚಾಟ, ಇಡೀ ಜೀವವನ್ನೇ ಪಣಕ್ಕಿಟ್ಟ ಘಟನೆ ನಡೆದಿದೆ. ಕೇವಲ ಫೋಟೋ ಮತ್ತು ಸೆಲ್ಫಿಗಾಗಿ ಜಲಪಾತದ ರೌದ್ರ ರೂಪದ ನಡುವೆಯೇ ನುಗ್ಗಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು, ಸಾವಿನ ದವಡೆಗೆ ಸಿಲುಕಿ ಕೊನೆಗೂ ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ. ಮೂಲತಃ ಆಂಧ್ರಪ್ರದೇಶದವರಾದ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂತೋಷ್ ಕುಮಾರ್ ಮತ್ತು ಗಣೇಶ್ ನಾಯಕ್ ಎಂಬ ಇಬ್ಬರು ವಿದ್ಯಾರ್ಥಿಗಳು ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ಬಂದು, ಮಳೆಗಾಲದ ರಭಸದ ನಡುವೆಯೂ

ಕ್ಷಣಿಕ ಸೆಲ್ಫಿ ವ್ಯಾಮೋಹ ಮಲ್ಲಳ್ಳಿ ಜಲಪಾತದಲ್ಲಿ ಜವರಾಯನಿಂದ ಜಸ್ಟ್ ಮಿಸ್! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ವೀಡಿಯೋ

ಪ್ರಧಾನಿ ನರೇಂದ್ರ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ‘ಬಿಂಟಾಂಗ್ ಆದಿಪೂರ್ಣ’ ಪ್ರಶಸ್ತಿ ಗೌರವ

(ನ್ಯೂಸ್‌ ಕಡಬ) newskadaba.com,  ಜು.07 : ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಬಿಂಟಾಂಗ್ ಆದಿಪೂರ್ಣ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಜಕಾರ್ತಾದ ಇಸ್ತಾನಾ ಮೆರ್ಡೆಕಾ ಅಧ್ಯಕ್ಷೀಯ ಭವನದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 1959ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯು ಇಂಡೋನೇಷ್ಯಾದ ಅತ್ಯುನ್ನತ ಗೌರವವಾಗಿದ್ದು, ರಾಷ್ಟ್ರದ ಏಕತೆ, ಸ್ಥಿರತೆ ಮತ್ತು ಸಮೃದ್ಧಿಗೆ ಅಸಾಧಾರಣ ಕೊಡುಗೆ

ಪ್ರಧಾನಿ ನರೇಂದ್ರ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ‘ಬಿಂಟಾಂಗ್ ಆದಿಪೂರ್ಣ’ ಪ್ರಶಸ್ತಿ ಗೌರವ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿಯ 60 ವರ್ಷ ಹಳೆಯ ನೇತ್ರಾವತಿ ಸೇತುವೆಯಲ್ಲಿ ಬಿರುಕು

(ನ್ಯೂಸ್‌ ಕಡಬ) newskadaba.com,  ಜು.07 ಉಪ್ಪಿನಂಗಡಿ: ಪುತ್ತೂರು-ಬೆಳ್ತಂಗಡಿ ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ, 60 ವರ್ಷ ಹಳೆಯ ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಳೆದೊಂದು ವರ್ಷದಿಂದ ಮೂಡುಬಿದಿರೆ ಕಡೆಯಿಂದ ಮೈಸೂರಿಗೆ ನೂರಾರು ಘನ ವಾಹನಗಳಲ್ಲಿ ಮಿತಿಮೀರಿ ಮಣ್ಣು ಸಾಗಿಸುತ್ತಿರುವುದು ಬಿರುಕಿಗೆ ಕಾರಣ ಎನ್ನಲಾಗಿದೆ.ಸೇತುವೆಯ ಪಿಲ್ಲರ್‌ಗಳ ಕಾಂಕ್ರೀಟ್ ಕಿತ್ತುಹೋಗಿ ಒಳಗಿನ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಜೊತೆಗೆ, ಸ್ಲ್ಯಾಬ್‌ಗಳಲ್ಲಿ ಅಶ್ವತ್ಥ ಗಿಡಗಳು ಬೆಳೆದು ಬೇರು ಬಿಡುತ್ತಿವೆ. ಸೇತುವೆಯ ಮೇಲಿನ ಮಣ್ಣು-ಕಸವನ್ನು ಇಲಾಖೆ ಸ್ವಚ್ಛಗೊಳಿಸುತ್ತಿಲ್ಲ. ಪ್ರಸ್ತುತ

ಉಪ್ಪಿನಂಗಡಿಯ 60 ವರ್ಷ ಹಳೆಯ ನೇತ್ರಾವತಿ ಸೇತುವೆಯಲ್ಲಿ ಬಿರುಕು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತೆಂಗು ಬೆಳೆಗಾರರಿಗೆ ಶಾಕ್: ₹25 ಕ್ಕೆ ಕುಸಿದ ತೆಂಗಿನಕಾಯಿ ಬೆಲೆ; ಎಳನೀರು, ಕೊಬ್ಬರಿ ದರ ಮಾತ್ರ ಗಗನಕ್ಕೆ!

(ನ್ಯೂಸ್‌ ಕಡಬ) newskadaba.com,  ಜು.07 :ಕಳೆದ ಎರಡು ವರ್ಷಗಳಿಂದ ಏರುತ್ತಿದ್ದ ತೆಂಗಿನಕಾಯಿ ಬೆಲೆ ಈಗ ಇಳಿಕೆಯಾಗಿದ್ದು, ಪ್ರತಿ ಕಾಯಿಗೆ ₹50–₹60 ಇದ್ದ ದರ ಪ್ರಸ್ತುತ ₹25 ರಿಂದ ₹30 ಕ್ಕೆ ತಲುಪಿದೆ. ಗೌರಿ-ಗಣೇಶ ಹಬ್ಬದವರೆಗೆ ಇದೇ ಬೆಲೆ ಮುಂದುವರಿಯುವ ಸಾಧ್ಯತೆಯಿದೆ. ರಾಜ್ಯದಲ್ಲಿ ಉತ್ತಮ ತೆಂಗಿನ ಇಳುವರಿ, ತಮಿಳುನಾಡಿನಿಂದ ಬರುತ್ತಿರುವ ಅಪಾರ ಪ್ರಮಾಣದ ಆವಕ, ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ತೆಂಗಿನಕಾಯಿ ಪೌಡರ್ ಉತ್ಪಾದನಾ ಕೇಂದ್ರಗಳು ಖರೀದಿ ಮಿತಿಗೊಳಿಸಿರುವುದು. ತೆಂಗಿನಕಾಯಿ ಬೆಲೆ ಇಳಿದಿದ್ದರೂ ಎಳನೀರು ಮತ್ತು

ತೆಂಗು ಬೆಳೆಗಾರರಿಗೆ ಶಾಕ್: ₹25 ಕ್ಕೆ ಕುಸಿದ ತೆಂಗಿನಕಾಯಿ ಬೆಲೆ; ಎಳನೀರು, ಕೊಬ್ಬರಿ ದರ ಮಾತ್ರ ಗಗನಕ್ಕೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಅಗತ್ಯವಿಲ್ಲ: ಶಿಕ್ಷಕಿಗೆ ಕರ್ನಾಟಕ ಹೈಕೋರ್ಟ್ ತಪರಾಕಿ

(ನ್ಯೂಸ್‌ ಕಡಬ) newskadaba.com,  ಜು.07 : ಯುಕೆಜಿ ವಿದ್ಯಾರ್ಥಿನಿಗೆ ಕೋಲಿನಿಂದ ಹೊಡೆದ ಆರೋಪ ಎದುರಿಸುತ್ತಿರುವ ಶಿಕ್ಷಕಿಯ ವಿರುದ್ಧದ ಕಾನೂನು ವಿಚಾರಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.”ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಅಗತ್ಯವಿಲ್ಲ, ಇಂತಹ ನಡವಳಿಕೆಯನ್ನು ನ್ಯಾಯಾಲಯ ಎಂದಿಗೂ ಸಹಿಸುವುದಿಲ್ಲ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಂಗಳೂರಿನ ಸುರತ್ಕಲ್‌ನ ಹೋಲಿ ಫ್ಯಾಮಿಲಿ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿಯ ತಾಯಿ ಶ್ರಫೀನಾ ಎಂಬುವರು, ಶಿಕ್ಷಕಿ ಆಶಾ ಕ್ರಾಸ್ತಾ ಅವರು ತಮ್ಮ 6

ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಅಗತ್ಯವಿಲ್ಲ: ಶಿಕ್ಷಕಿಗೆ ಕರ್ನಾಟಕ ಹೈಕೋರ್ಟ್ ತಪರಾಕಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮತ್ತಷ್ಟು ಕುಸಿದ ಚಿನ್ನದ ಬೆಲೆ; ಇಂದಿನ ದರ ಇಲ್ಲಿದೆ

(ನ್ಯೂಸ್‌ ಕಡಬ) newskadaba.com,  ಜು.07 : 24 ಕ್ಯಾರೆಟ್ (ಶುದ್ಧ ಚಿನ್ನ): 1 ಗ್ರಾಂಗೆ ₹14,526 (₹136 ಇಳಿಕೆ) | 10 ಗ್ರಾಂಗೆ ₹1,45,260 (₹1,360 ಇಳಿಕೆ).22 ಕ್ಯಾರೆಟ್ (ಆಭರಣ ಚಿನ್ನ): 1 ಗ್ರಾಂಗೆ ₹13,315 (₹125 ಇಳಿಕೆ) | 10 ಗ್ರಾಂಗೆ ₹1,33,150.18 ಕ್ಯಾರೆಟ್ ಚಿನ್ನ: 1 ಗ್ರಾಂಗೆ ₹10,894 | 10 ಗ್ರಾಂಗೆ ₹1,08,940. ಬೆಳ್ಳಿ ದರ ಸ್ಥಿರ: ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ತಟಸ್ಥವಾಗಿದೆ. ಬೆಳ್ಳಿ ಬೆಲೆ: 1 ಗ್ರಾಂಗೆ ₹245

ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮತ್ತಷ್ಟು ಕುಸಿದ ಚಿನ್ನದ ಬೆಲೆ; ಇಂದಿನ ದರ ಇಲ್ಲಿದೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಗುಂಡಿಗೆ ಬಲಿಯಾದ ಮಂಗಳೂರಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ

(ನ್ಯೂಸ್‌ ಕಡಬ) newskadaba.com,  ಜು.07 ಬೆಳ್ತಂಗಡಿ: ಇಲ್ಲಿನ ಲಾಯಿಲ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮಂಗಳೂರಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಧೀರಜ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರ ಗಾಯಗೊಂಡಿದ್ದಾರೆ. ಮಂಗಳೂರಿನ ಕಾಲೇಜೊಂದರ ನಾಲ್ಕು ಮಂದಿ ವಿದ್ಯಾರ್ಥಿಗಳು ಕೊಟ್ಟಿಗೆಹಾರ ಸಮೀಪದ ದೇವರಮನೆಗೆ ಪ್ರವಾಸ ಮುಗಿಸಿ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹೆದ್ದಾರಿಯಲ್ಲಿದ್ದ ಗುಂಡಿಯೊಂದಕ್ಕೆ ಬೈಕ್ ಬಿದ್ದು ಸ್ಕಿಡ್ ಆದ ಪರಿಣಾಮ, ಹಿಂಬದಿ ಸವಾರ ಧೀರಜ್ ಕೆಳಗೆ ಬಿದ್ದಿದ್ದಾರೆ. ಈ

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಗುಂಡಿಗೆ ಬಲಿಯಾದ ಮಂಗಳೂರಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಸ್ತೆ ಗುಂಡಿ ತಪ್ಪಿಸಲು ಹೋಗಿ ದುರಂತ: ನಿಟ್ಟಡೆಯಲ್ಲಿ ಭೀಕರ ಅಪಘಾತಕ್ಕೆ ಮೇಸ್ತ್ರಿ ಕೆಲಸ ಮುಗಿಸಿ ಮರಳುತ್ತಿದ್ದ ವ್ಯಕ್ತಿ ಬಲಿ

(ನ್ಯೂಸ್ ಕಡಬ) newskadaba.com, ಜು.07: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟಡೆ ಎಂಬಲ್ಲಿ ಜುಲೈ 5ರ ರಾತ್ರಿ ಗೂಡ್ಸ್ ಆಟೋರಿಕ್ಷಾ ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ರವೀಂದ್ರ ಮೂಲ್ಯ (47).ಮೃತರ ಸಹೋದರ ಜಗದೀಶ್ ಮೂಲ್ಯ (ಇವರಿಗೆ ತೀವ್ರ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ).ಮೇಸ್ತ್ರಿ ಕೆಲಸ ಮುಗಿಸಿ ಸಹೋದರರಿಬ್ಬರು ಗುರುವಾಯನಕೆರೆಯಿಂದ ವೇಣೂರಿಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ, ನಿಟ್ಟಡೆಯ ಕುಂಭಶ್ರೀ ಶಾಲೆಯ

ರಸ್ತೆ ಗುಂಡಿ ತಪ್ಪಿಸಲು ಹೋಗಿ ದುರಂತ: ನಿಟ್ಟಡೆಯಲ್ಲಿ ಭೀಕರ ಅಪಘಾತಕ್ಕೆ ಮೇಸ್ತ್ರಿ ಕೆಲಸ ಮುಗಿಸಿ ಮರಳುತ್ತಿದ್ದ ವ್ಯಕ್ತಿ ಬಲಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top