ಬ್ರೇಕಿಂಗ್ ನ್ಯೂಸ್

ಕಲಬುರಗಿ: ಪೊಲೀಸ್ ವಾಹನದಲ್ಲೇ ಸೇವಾ ರೈಫಲ್‌ನಿಂದ ಶೂಟ್ ಮಾಡಿಕೊಂಡು CAR ಕಾನ್‌ಸ್ಟೇಬಲ್ ಆತ್ಮಹತ್ಯೆ

(ನ್ಯೂಸ್‌ ಕಡಬ) newskadaba.com,  ಜು.08 : ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಸಶಸ್ತ್ರ ಮೀಸಲು ಪಡೆಯ (CAR) ಪೊಲೀಸ್ ಕಾನ್ಸ್‌ಟೇಬಲ್ ಶಿವಕುಮಾರ ನರಿಬೋಳ (32) ಅವರು ಮಂಗಳವಾರ ರಾತ್ರಿ ಪೊಲೀಸ್ ವಾಹನದಲ್ಲಿ ಕುಳಿತಿದ್ದಾಗ ತಮ್ಮ ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೇವರ್ಗಿ ತಾಲೂಕಿನ ಮಾವನೂರ ಗ್ರಾಮದವರಾದ ಇವರು 2016 ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಬೆಂಗಳೂರು ಗ್ರಾಮಾಂತರದಲ್ಲಿದ್ದ ಇವರು, ಇತ್ತೀಚೆಗಷ್ಟೇ (ಫೆಬ್ರವರಿ 2026) ಕಲಬುರಗಿಗೆ ವರ್ಗಾವಣೆಯಾಗಿದ್ದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. […]

ಕಲಬುರಗಿ: ಪೊಲೀಸ್ ವಾಹನದಲ್ಲೇ ಸೇವಾ ರೈಫಲ್‌ನಿಂದ ಶೂಟ್ ಮಾಡಿಕೊಂಡು CAR ಕಾನ್‌ಸ್ಟೇಬಲ್ ಆತ್ಮಹತ್ಯೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಬ್ರಿಡ್ಜ್ ಮ್ಯಾನ್’ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಮನ

(ನ್ಯೂಸ್‌ ಕಡಬ) newskadaba.com,  ಜು.08 : “ಬ್ರಿಡ್ಜ್ ಮ್ಯಾನ್” ಎಂದೇ ಖ್ಯಾತಿ ಪಡೆದ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ಅಂತ್ಯಸಂಸ್ಕಾರ ಅರಂಬೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಜಿಲ್ಲಾಡಳಿತದ ವತಿಯಿಂದ ಗೌರವ ನಮನ ಸಲ್ಲಿಸಲಾಯಿತು. ಸಾವಿರಾರು ಅಭಿಮಾನಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಅಂತಿಮ ದರ್ಶನ ಪಡೆದರು. ಅಂತ್ಯಕ್ರಿಯೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಎಸ್‌ಪಿ ಡಾ. ಆರ್. ಅರುಣ್ ಕುಮಾರ್, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು

‘ಬ್ರಿಡ್ಜ್ ಮ್ಯಾನ್’ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಮನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಯುಎಇಯಿಂದ ಕರಾಚಿಗೆ ಹೊರಟಿದ್ದ ಸರಕು ಸಾಗಣೆ ವಿಮಾನ ಅರಬ್ಬಿ ಸಮುದ್ರದಲ್ಲಿ ನಾಪತ್ತೆ: ಐವರ ಸ್ಥಿತಿ ಅಜ್ಞಾತ

(ನ್ಯೂಸ್‌ ಕಡಬ) newskadaba.com,  ಜು.08 : ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಶಾರ್ಜಾದಿಂದ ಪಾಕಿಸ್ತಾನದ ಕರಾಚಿಗೆ ಹೊರಟಿದ್ದ ಸರಕು ಸಾಗಣೆ (ಕಾರ್ಗೋ) ವಿಮಾನವೊಂದು ಮಂಗಳವಾರ ರಾತ್ರಿ ಅರಬ್ಬಿ ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದಾಗ ದಿಢೀರ್ ನಾಪತ್ತೆಯಾಗಿದೆ. ವಿಮಾನದಲ್ಲಿ ಐವರು ಸಿಬ್ಬಂದಿ ಇದ್ದರು. ಮಾರ್ಗಮಧ್ಯೆ ವಿಮಾನದ ನ್ಯಾವಿಗೇಷನ್ ಸಿಸ್ಟಮ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರ ಬಗ್ಗೆ ಪೈಲಟ್ ಕರಾಚಿ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ (ATC) ಮಾಹಿತಿ ನೀಡಿದ್ದರು.ರಾತ್ರಿ 9:18ಕ್ಕೆ ಕೊನೆಯ ಸಂಪರ್ಕ ಸಿಕ್ಕಿದ್ದು, ಅದಾದ ಕೇವಲ 4 ನಿಮಿಷಗಳಲ್ಲಿ (ರಾತ್ರಿ

ಯುಎಇಯಿಂದ ಕರಾಚಿಗೆ ಹೊರಟಿದ್ದ ಸರಕು ಸಾಗಣೆ ವಿಮಾನ ಅರಬ್ಬಿ ಸಮುದ್ರದಲ್ಲಿ ನಾಪತ್ತೆ: ಐವರ ಸ್ಥಿತಿ ಅಜ್ಞಾತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಅಗತ್ಯವಿಲ್ಲ: ಶಿಕ್ಷಕಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಕಟು ಕರಾರು

(ನ್ಯೂಸ್‌ ಕಡಬ) newskadaba.com,  ಜು.08 : ಯುಕೆಜಿ ವಿದ್ಯಾರ್ಥಿನಿಗೆ ಬೆತ್ತದಿಂದ ಹೊಡೆದ ಆರೋಪ ಎದುರಿಸುತ್ತಿರುವ ಶಿಕ್ಷಕಿಯೊಬ್ಬರ ವಿರುದ್ಧದ ಕಾನೂನು ವಿಚಾರಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ, “ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಅಗತ್ಯವಿಲ್ಲ ಮತ್ತು ಇಂತಹ ನಡವಳಿಕೆಯನ್ನು ನ್ಯಾಯಾಲಯ ಸಹಿಸುವುದಿಲ್ಲ” ಎಂದು ಕಟುವಾಗಿ ಹೇಳಿದೆ. ಮಂಗಳೂರಿನ ಸುರತ್ಕಲ್‌ನ ಹೋಲಿ ಫ್ಯಾಮಿಲಿ ಶಾಲೆಯ ಶಿಕ್ಷಕಿ ಆಶಾ ಕ್ರಾಸ್ತಾ ಅವರು 6 ವರ್ಷದ ಮಗುವಿಗೆ ಬೆತ್ತದಿಂದ ಹಲ್ಲೆ ನಡೆಸಿದ್ದಾರೆ ಎಂದು ಮಗುವಿನ ತಾಯಿ ಪೊಲೀಸರಿಗೆ ದೂರು

ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಅಗತ್ಯವಿಲ್ಲ: ಶಿಕ್ಷಕಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಕಟು ಕರಾರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಾಣಿ-ಮೈಸೂರು ರಸ್ತೆಗೆ ಉರುಳಿದ ಬೃಹತ್ ಮರ: ಸಂಚಾರ ಸಂಪೂರ್ಣ ಬಂದ್

(ನ್ಯೂಸ್‌ ಕಡಬ) newskadaba.com,  ಜು.07 ಮಂಗಳವಾರ ಬೆಳಿಗ್ಗೆ ಸುರಿದ ಭಾರೀ ಗಾಳಿ–ಮಳೆಗೆ ಬಂಟ್ವಾಳ ತಾಲೂಕಿನ ಮಾಣಿ ಸಮೀಪ ಮಾಣಿ–ಮೈಸೂರು ರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಕೆಲಕಾಲ ಸಂಪೂರ್ಣ ಅಸ್ತವ್ಯಸ್ತಗೊಂಡಿತು.ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಮಾಣಿ ಪಟ್ಲ ಕೋಡಿ ಎಂಬಲ್ಲಿ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಇದರಿಂದ ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹಾಗೂ ವಿವಿಧ ಕೆಲಸಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಸಾಕಷ್ಟು ತೊಂದರೆ

ಮಾಣಿ-ಮೈಸೂರು ರಸ್ತೆಗೆ ಉರುಳಿದ ಬೃಹತ್ ಮರ: ಸಂಚಾರ ಸಂಪೂರ್ಣ ಬಂದ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

NEET, UPSC ಅಭ್ಯರ್ಥಿಗಳೇ ಎಚ್ಚರ! ನಕಲಿ ಪ್ರಶ್ನೆಪತ್ರಿಕೆ ನೀಡಿ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದ ಜಾಲ ಪದಾಂಗಣಕ್ಕೆ

(ನ್ಯೂಸ್‌ ಕಡಬ) newskadaba.com,  ಜು.07: ನವದೆಹಲಿ: ದೇಶದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್ (NEET), ಯುಪಿಎಸ್‌ಸಿ (UPSC) ಸಿವಿಲ್ ಸರ್ವೀಸ್, ಎಸ್‌ಎಸ್‌ಸಿ ಸಿಜಿಎಲ್ (SSC CGL), ಎನ್‌ಡಿಎ (NDA) ಹಾಗೂ ಐಬಿಪಿಎಸ್ (IBPS) ಸೇರಿದಂತೆ ವಿವಿಧ ರಾಜ್ಯಗಳ ಬೋರ್ಡ್ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹೆಸರಿನಲ್ಲಿ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಜಾಲವೊಂದು ಪತ್ತೆಯಾಗಿದೆ. ಪರೀಕ್ಷೆಗೆ ಕೇವಲ ಕೆಲವೇ ಗಂಟೆಗಳ ಮುನ್ನ, “ನಮ್ಮ ಬಳಿ ಅಸಲಿ ಪ್ರಶ್ನೆಪತ್ರಿಕೆ ಇದೆ” ಎಂದು ನಂಬಿಸಿ ಪ್ರತಿ ಅಭ್ಯರ್ಥಿಯಿಂದ ₹50,000

NEET, UPSC ಅಭ್ಯರ್ಥಿಗಳೇ ಎಚ್ಚರ! ನಕಲಿ ಪ್ರಶ್ನೆಪತ್ರಿಕೆ ನೀಡಿ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದ ಜಾಲ ಪದಾಂಗಣಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಾಟ್ಸಪ್ ಯೂಸರ್ ನೇಮ್ ವೈಶಿಷ್ಟ್ಯ: ಮೆಟಾ ಸಂಸ್ಥೆಗೆ ಪ್ರತಿಕ್ರಿಯಿಸಲು 3 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದ ಕೇಂದ್ರ ಸರ್ಕಾರ!

(ನ್ಯೂಸ್‌ ಕಡಬ) newskadaba.com,  ಜು.07:ವಾಟ್ಸಪ್‌ನ ಹೊಸ ‘ಯೂಸರ್ ನೇಮ್ (Username)’ ವೈಶಿಷ್ಟ್ಯದ ಕುರಿತು ಎದ್ದಿರುವ ಆತಂಕಗಳಿಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರವು ಮೆಟಾ ಸಂಸ್ಥೆಗೆ ಹೆಚ್ಚುವರಿಯಾಗಿ ಮೂರು ದಿನಗಳ ಕಾಲಾವಕಾಶ ನೀಡಿದೆ. ಬಳಕೆದಾರರು ತಮ್ಮ ಫೋನ್ ನಂಬರ್ ಹಂಚಿಕೊಳ್ಳದೆ ಚಾಟ್ ಮಾಡಲು ಅನುವು ಮಾಡಿಕೊಡುವ ಈ ಹೊಸ ವೈಶಿಷ್ಟ್ಯದಿಂದ ನಕಲಿ ಖಾತೆಗಳ ಸೃಷ್ಟಿ, ಗುರುತಿನ ಕಳವು, ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ವಂಚನೆ ಹಾಗೂ ಸೈಬರ್ ಅಪರಾಧಗಳು ಹೆಚ್ಚಾಗಬಹುದು ಎಂದು ಕೇಂದ್ರ ಐಟಿ ಸಚಿವಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ.

ವಾಟ್ಸಪ್ ಯೂಸರ್ ನೇಮ್ ವೈಶಿಷ್ಟ್ಯ: ಮೆಟಾ ಸಂಸ್ಥೆಗೆ ಪ್ರತಿಕ್ರಿಯಿಸಲು 3 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದ ಕೇಂದ್ರ ಸರ್ಕಾರ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಜನಸ್ನೇಹಿ ವೈದ್ಯ’ ಪದವಿನಂಗಡಿಯ ಡಾ. ಭರತ್ ಕುಮಾರ್ ಇನ್ನಿಲ್ಲ

(ನ್ಯೂಸ್‌ ಕಡಬ) newskadaba.com,  ಜು.07 ಬಡ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸೇವೆ ಹಾಗೂ ಔಷಧ ನೀಡುವ ಮೂಲಕ ‘ಜನಸ್ನೇಹಿ ವೈದ್ಯ’ ಎಂದೇ ಪ್ರಸಿದ್ಧರಾಗಿದ್ದ ಪದವಿನಂಗಡಿಯ ಡಾ. ಭರತ್ ಕುಮಾರ್ ಎಂ. ಅವರು ಸೋಮವಾರ (ಜುಲೈ 6) ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಪದವಿನಂಗಡಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಇವರು, ಯಾವುದೇ ಸ್ವಾರ್ಥವಿಲ್ಲದೆ ಜನಸಾಮಾನ್ಯರಿಗೆ ಚಿಕಿತ್ಸೆ ನೀಡುತ್ತಿದ್ದರು.ಪದವಿನಂಗಡಿ ಮಾತ್ರವಲ್ಲದೆ ಕೊಂಚಾಡಿ, ಪಚ್ಚನಾಡಿ, ಬೊಂದೇಲ್, ಕಾವೂರು ಹಾಗೂ ದೇರೆಬೈಲ್ ಸೇರಿದಂತೆ ಮಂಗಳೂರಿನ ಸುತ್ತಮುತ್ತಲಿನ ಹಲವು ಪ್ರದೇಶಗಳ ಬಡ ರೋಗಿಗಳಿಗೆ

‘ಜನಸ್ನೇಹಿ ವೈದ್ಯ’ ಪದವಿನಂಗಡಿಯ ಡಾ. ಭರತ್ ಕುಮಾರ್ ಇನ್ನಿಲ್ಲ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಡಿಎಲ್ ಇಲ್ಲದ ನಿರ್ವಾಹಕನಿಂದ ಅಪಘಾತ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ: ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಪೊಲೀಸರ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ಜು.07 ಇತ್ತೀಚೆಗೆ ಮಣಿಪಾಲದಲ್ಲಿ ನಡೆದ ಖಾಸಗಿ ಶಾಲಾ ಬಸ್ ಅಪಘಾತ ಹಾಗೂ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ, ಉಡುಪಿ ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಶಾಲಾ ವಾಹನಗಳ ದಿಢೀರ್ ತಪಾಸಣೆ ನಡೆಸಲಾಯಿತು. ಮಾನ್ಯ ಚಾಲನಾ ಪರವಾನಗಿ (DL) ಇಲ್ಲದ ನಿರ್ವಾಹಕನೊಬ್ಬ ಬಸ್ ಚಲಾಯಿಸಿದ್ದೇ ಮಣಿಪಾಲ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಚಾಲಕರ ಚಾಲನಾ ಪರವಾನಗಿ (DL), ವಾಹನ ಫಿಟ್‌ನೆಸ್ ಪ್ರಮಾಣಪತ್ರ

ಡಿಎಲ್ ಇಲ್ಲದ ನಿರ್ವಾಹಕನಿಂದ ಅಪಘಾತ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ: ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಪೊಲೀಸರ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಶ್ವಬ್ಯಾಂಕ್‌ನ ‘ಮೇಲ್ಮಧ್ಯಮ ಆದಾಯ’ದ ಗಡಿ ದಾಟಿದ ಕರ್ನಾಟಕ ಸೇರಿ ದೇಶದ 5 ರಾಜ್ಯಗಳು; ದೆಹಲಿಗೆ ಪ್ರಥಮ ಸ್ಥಾನ

(ನ್ಯೂಸ್‌ ಕಡಬ) newskadaba.com,  ಜು.07 ಭಾರತವು ಒಟ್ಟಾರೆಯಾಗಿ ಇನ್ನೂ ‘ಕೆಳ-ಮಧ್ಯಮ ಆದಾಯ’ದ ($2,760 ತಲಾದಾಯ) ದೇಶವಾಗಿಯೇ ಉಳಿದಿದ್ದರೂ, ದೇಶದ ಐದು ಪ್ರಮುಖ ರಾಜ್ಯಗಳು ವಿಶ್ವಬ್ಯಾಂಕ್‌ನ ‘ಮೇಲ್ಮಧ್ಯಮ ಆದಾಯ’ದ ಗಡಿಯನ್ನು ($4,636 ಕಟ್‌ಆಫ್) ಯಶಸ್ವಿಯಾಗಿ ದಾಟಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿವೆ. ದೇಶದ ರಾಜಧಾನಿ ದೆಹಲಿ ($6,217) ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ ($5,579) ದ್ವಿತೀಯ ಸ್ಥಾನದಲ್ಲಿದೆ. ಉಳಿದಂತೆ ತೆಲಂಗಾಣ ($5,407), ತಮಿಳುನಾಡು ($5,329) ಮತ್ತು ಗುಜರಾತ್ ($4,734) ನಂತರದ ಸ್ಥಾನಗಳಲ್ಲಿವೆ.ಮಹಾರಾಷ್ಟ್ರ ($4,628), ಹರಿಯಾಣ ($4,627) ಮತ್ತು ಕೇರಳ ($4,610)

ವಿಶ್ವಬ್ಯಾಂಕ್‌ನ ‘ಮೇಲ್ಮಧ್ಯಮ ಆದಾಯ’ದ ಗಡಿ ದಾಟಿದ ಕರ್ನಾಟಕ ಸೇರಿ ದೇಶದ 5 ರಾಜ್ಯಗಳು; ದೆಹಲಿಗೆ ಪ್ರಥಮ ಸ್ಥಾನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top