ವಿಶ್ವಬ್ಯಾಂಕ್‌ನ ‘ಮೇಲ್ಮಧ್ಯಮ ಆದಾಯ’ದ ಗಡಿ ದಾಟಿದ ಕರ್ನಾಟಕ ಸೇರಿ ದೇಶದ 5 ರಾಜ್ಯಗಳು; ದೆಹಲಿಗೆ ಪ್ರಥಮ ಸ್ಥಾನ



(ನ್ಯೂಸ್‌ ಕಡಬ) newskadaba.com,  ಜು.07 ಭಾರತವು ಒಟ್ಟಾರೆಯಾಗಿ ಇನ್ನೂ ‘ಕೆಳ-ಮಧ್ಯಮ ಆದಾಯ’ದ ($2,760 ತಲಾದಾಯ) ದೇಶವಾಗಿಯೇ ಉಳಿದಿದ್ದರೂ, ದೇಶದ ಐದು ಪ್ರಮುಖ ರಾಜ್ಯಗಳು ವಿಶ್ವಬ್ಯಾಂಕ್‌ನ ಮೇಲ್ಮಧ್ಯಮ ಆದಾಯ’ಗಡಿಯನ್ನು ($4,636 ಕಟ್‌ಆಫ್) ಯಶಸ್ವಿಯಾಗಿ ದಾಟಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿವೆ.







ದೇಶದ ರಾಜಧಾನಿ ದೆಹಲಿ ($6,217) ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ ($5,579) ದ್ವಿತೀಯ ಸ್ಥಾನದಲ್ಲಿದೆ. ಉಳಿದಂತೆ ತೆಲಂಗಾಣ ($5,407), ತಮಿಳುನಾಡು ($5,329) ಮತ್ತು ಗುಜರಾತ್ ($4,734) ನಂತರದ ಸ್ಥಾನಗಳಲ್ಲಿವೆ.ಮಹಾರಾಷ್ಟ್ರ ($4,628), ಹರಿಯಾಣ ($4,627) ಮತ್ತು ಕೇರಳ ($4,610) ಕೇವಲ ಕೆಲವೇ ಡಾಲರ್‌ಗಳ ಅಂತರದಿಂದ ಈ ಪಟ್ಟಿಯಿಂದ ಹೊರಗುಳಿದಿವೆ.






ಆರ್ಥಿಕತೆಯ ಮತ್ತೊಂದು ತುದಿಯಲ್ಲಿ ಬಿಹಾರ ($984), ಉತ್ತರ ಪ್ರದೇಶ ($1,403) ಮತ್ತು ಜಾರ್ಖಂಡ್ ($1,470) ರಾಜ್ಯಗಳ ತಲಾದಾಯವು ನೆರೆಹೊರೆಯ ನೇಪಾಳ ಹಾಗೂ ಆಫ್ರಿಕಾದ ಸಬ್‌ ಸಹಾರ ದೇಶಗಳಿಗಿಂತಲೂ ಕಡಿಮೆಯಾಗಿದೆ.1994-95 ರಲ್ಲಿ 0.230 ರಷ್ಟಿದ್ದ ರಾಜ್ಯಗಳ ನಡುವಿನ ಆದಾಯದ ಅಸಮಾನತೆ ಅಳೆಯುವ ‘ಗಿನಿ ಕೋಯಿಫಿಷಿಯಂಟ್’ ಸೂಚ್ಯಂಕವು 2025-26 ರ ವೇಳೆಗೆ 0.261 ಕ್ಕೆ ಏರಿಕೆಯಾಗಿದೆ.

,.

error: Content is protected !!
Scroll to Top