ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ದಾಖಲೆ ಕಾಣಿಕೆ: 21 ದಿನಗಳಲ್ಲೇ ₹3.72 ಕೋಟಿ ಸಂಗ್ರಹಿಸಿದ ಭಕ್ತಸಾಗರ
(ನ್ಯೂಸ್ ಕಡಬ) newskadaba.com, ಜೂ.25 :ಕಲಿಯುಗ ಕಾಮಧೇನು ಎಂದೇ ಪ್ರಸಿದ್ಧವಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಜೂನ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಕಳೆದ 21 ದಿನಗಳಲ್ಲಿ ಒಟ್ಟು 3.72 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ನೋಟುಗಳು: ₹3,61,40,030 ನಾಣ್ಯಗಳು: ₹11,02,500 ಚಿನ್ನ: 67 ಗ್ರಾಂ ಬೆಳ್ಳಿ: 511 ಗ್ರಾಂ ಮಠದ ಅಧಿಕಾರಿಗಳು, ಮುಜರಾಯಿ ಇಲಾಖೆಯ ಅಧಿಕಾರಿಗಳು, ನೂರಾರು ಸಿಬ್ಬಂದಿ ಹಾಗೂ ಕರಸೇವಕರ ಸಮ್ಮುಖದಲ್ಲಿ ಈ ಹುಂಡಿ ಎಣಿಕೆ ಕಾರ್ಯ ಯಶಸ್ವಿಯಾಗಿ ಜರುಗಿದೆ. […]









