ರನ್‌ವೇನಲ್ಲಿ ಕೇವಲ 200 ಮೀಟರ್ ಅಂತರದಲ್ಲಿ ನಿಂತ ವಿಮಾನಗಳು ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ಕೂದಲೆಳೆಯಲ್ಲಿ ತಪ್ಪಿದ ಮಹಾ ದುರಂತ!

(ನ್ಯೂಸ್‌ ಕಡಬ) newskadaba.com,  ಜೂ.25  ಗುಜರಾತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಜೆ ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳು ಮುಖಾಮುಖಿಯಾಗುವುದರಲ್ಲಿದ್ದ ಭಾರೀ ದುರಂತವೊಂದು ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಗಳ ಜಾಗರೂಕತೆಯಿಂದ ತಪ್ಪಿದೆ.

ರನ್‌ವೇಯಲ್ಲಿ ಕೇವಲ 200 ಮೀಟರ್ ಅಂತರದಲ್ಲಿ ವಿಮಾನಗಳು ನಿಂತಿದ್ದರಿಂದ ನೂರಾರು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.ಮುಂಬೈನಿಂದ ಅಹಮದಾಬಾದ್‌ಗೆ ಬಂದಿಳಿದ ಏರ್ ಇಂಡಿಯಾ ವಿಮಾನ (AI-2493) ಪಾರ್ಕಿಂಗ್ ಬೇ ಕಡೆಗೆ ತೆರಳುವಾಗ ಪೈಲಟ್ ಮಾಡಿದ ತಪ್ಪು ತಿರುವಿನಿಂದಾಗಿ ಸಕ್ರಿಯ ಟ್ಯಾಕ್ಸಿವೇ ಪ್ರವೇಶಿಸಿತು.

ಅದೇ ಸಮಯದಲ್ಲಿ ಮುಂಬೈಗೆ ಟೇಕ್‌ಆಫ್ ಆಗಲು ಸಜ್ಜಾಗಿದ್ದ ಇಂಡಿಗೋ ವಿಮಾನ (6E-5160) ಅದೇ ಮಾರ್ಗದಲ್ಲಿ ಚಲಿಸುತ್ತಿತ್ತು.ಪರಿಸ್ಥಿತಿಯನ್ನು ಗಮನಿಸಿದ ಎಟಿಸಿ ಅಧಿಕಾರಿಗಳು ತಕ್ಷಣವೇ ಎರಡೂ ವಿಮಾನಗಳ ಪೈಲಟ್‌ಗಳಿಗೆ ತುರ್ತು ಸೂಚನೆ ನೀಡಿ ವಿಮಾನಗಳನ್ನು ತಡೆದರು.

\

Scroll to Top