ಉಚಿತ 5G ಡೇಟಾ ಸೇವೆಗೆ ಶೀಘ್ರದಲ್ಲೇ ಬ್ರೇಕ್? ಗ್ರಾಹಕರಿಗೆ ಬಿಗ್ ಶಾಕ್!



(ನ್ಯೂಸ್‌ ಕಡಬ) newskadaba.com,  ಜೂ.25 ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಸಂಸ್ಥೆಗಳು ಗ್ರಾಹಕರಿಗೆ ನೀಡುತ್ತಿರುವ ಉಚಿತ ಅನ್‌ಲಿಮಿಟೆಡ್ 5G ಡೇಟಾ ಸೇವೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಮೋತಿಲಾಲ್ ಓಸ್ವಾಲ್ ಸಲಹೆ ನೀಡಿದೆ.







ಕೇವಲ ರೀಚಾರ್ಜ್ ಪ್ಲಾನ್‌ಗಳ ಬೆಲೆ ಏರಿಕೆ ಮಾಡುವುದರಿಂದ ಕಂಪನಿಗಳ ಆದಾಯ (ARPU) ಹೆಚ್ಚುತ್ತಿಲ್ಲ. ನೆಟ್‌ವರ್ಕ್‌ನಲ್ಲಿ ಹೆಚ್ಚುತ್ತಿರುವ ಡೇಟಾ ಬಳಕೆಯಿಂದ ಲಾಭ ಗಳಿಸಬೇಕಾದರೆ ಉಚಿತ ಕೊಡುಗೆಗಳನ್ನು ನಿಲ್ಲಿಸುವುದು ಅನಿವಾರ್ಯ ಎಂದು ವರದಿ ಹೇಳಿದೆ.






2025-26ರ ಹಣಕಾಸು ವರ್ಷದಲ್ಲಿ ದೇಶದ ಒಟ್ಟಾರೆ ಡೇಟಾ ಟ್ರಾಫಿಕ್ 29% ಹೆಚ್ಚಾಗಿದೆ. ಗ್ರಾಹಕರ ಸರಾಸರಿ ಮಾಸಿಕ ಡೇಟಾ ಬಳಕೆ 27.3 GB ಇಂದ 34.1 GB ಗೆ ಏರಿಕೆಯಾಗಿದೆ. ಇದರಲ್ಲಿ 31% ಪ್ರಗತಿಯೊಂದಿಗೆ ಜಿಯೋ ಮುಂಚೂಣಿಯಲ್ಲಿದೆ.ಒಂದು ವೇಳೆ ಈ ಸಲಹೆ ಜಾರಿಯಾದರೆ, ಉಚಿತ 5G ಸೇವೆ ರದ್ದಾಗಲಿದ್ದು, ದಿನದ ಲಿಮಿಟ್ ಮುಗಿದ ನಂತರ ಹೆಚ್ಚಿನ ಡೇಟಾ ಬೇಕಾದಲ್ಲಿ ಗ್ರಾಹಕರು ಕಡ್ಡಾಯವಾಗಿ ಹೆಚ್ಚುವರಿ ಹಣ ನೀಡಿ ಟಾಪ್-ಅಪ್ ವೋಚರ್ ಖರೀದಿಸಬೇಕಾಗುತ್ತದೆ.

error: Content is protected !!
Scroll to Top