ಸೆಲ್ಫಿ ತೆಗೆಯಲು ಮುಂದಾದ ಕಾರ್ಮಿಕನ ಮೇಲೆ ಕಾಡಾನೆ ದಾಳಿ

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಅ.25. ಸೆಲ್ಫಿ ತೆಗೆಯಲು ಮುಂದಾದ ಕಾರ್ಮಿಕನನ್ನು ಕಾಡಾನೆಯೊಂದು ತುಳಿದು ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಶ್ರೀಕಾಂತ್ ರಾಮಚಂದ್ರ ಸಾತ್ರೆ(23) ಎಂದು ಗುರುತಿಸಲಾಗಿದೆ. ಶ್ರೀಕಾಂತ್ ಸಾತ್ರೆ ನವೆಗಾಂವ್ನಿಂದ ಕೇಬಲ್ ಅಳವಡಿಕೆ ಕೆಲಸಕ್ಕಾಗಿ ಗಡ್ಚಿರೋಲಿಗೆ ತನ್ನ ಸ್ನೇಹಿತರೊಂದಿಗೆ ಬಂದಿದ್ದರು. ತನ್ನ ಇಬ್ಬರು ಸ್ನೇಹಿತರ ಜೊತೆ ಗುರುವಾರ ಬೆಳಿಗ್ಗೆ ಮಹಾರಾಷ್ಟ್ರದ ಗಡ್ಚಿರೋಲಿಯ ಅಬಾಪುರ ಅರಣ್ಯಕ್ಕೆ ಕಾಡಾನೆಯನ್ನು ನೋಡಲು ತೆರಳಿದ್ದರು. ಅರಣ್ಯದಲ್ಲಿ ಸೆಲ್ಫಿ ತೆಗೆಯುವಾಗ ಶ್ರೀಕಾಂತ್ ಮೇಲೆ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಆತನ ಇಬ್ಬರು ಸ್ನೇಹಿತರು ಓಡಿ ಹೋಗಿ ಪ್ರಾಣ ಉಳಿಸಿಕೊಂಡು ಪಾರಾಗಿದ್ದಾರೆ ಎನ್ನಲಾಗಿದೆ.

 

Scroll to Top