ರಾಜ್ಯಾದ್ಯಂತ ಶನಿವಾರದ ಶಾಲಾ ಅವಧಿಯಲ್ಲಿ ಮಹತ್ವದ ಬದಲಾವಣೆ ಏಕರೂಪದ ವೇಳಾಪಟ್ಟಿ ಜಾರಿ



(ನ್ಯೂಸ್‌ ಕಡಬ) newskadaba.com,  ಜೂ.26 :ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಹತ್ವದ ಸಿಹಿಸುದ್ದಿ ನೀಡಿದ್ದು, ಶನಿವಾರದ ಶಾಲಾ ಅವಧಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಾಜ್ಯದಾದ್ಯಂತ ಈ ಹಿಂದೆ ಇದ್ದ ಗೊಂದಲಗಳಿಗೆ ತೆರೆ ಎಳೆದು, ಎಲ್ಲಾ ಜಿಲ್ಲೆಗಳ ಶಾಲೆಗಳಿಗೂ ಅನ್ವಯವಾಗುವಂತೆ ಏಕರೂಪದ ವೇಳಾಪಟ್ಟಿಯನ್ನು ಜಾರಿಗೆ ತರಲಾಗಿದೆ.







ಇನ್ನು ಮುಂದೆ ಶನಿವಾರದ ತರಗತಿಗಳು ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ನಡೆಯಲಿವೆ.ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಕಡ್ಡಾಯವಾಗಿ ಇದೇ ಸಮಯವನ್ನು ಪಾಲಿಸಬೇಕಾಗುತ್ತದೆ.ಈ ಹಿಂದೆ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಸಮಯಾವಕಾಶವಿತ್ತು.. ಈ ಗೊಂದಲ ನಿವಾರಿಸಲು ಏಕರೂಪದ ವ್ಯವಸ್ಥೆ ತರಲಾಗಿದೆ.






ಶನಿವಾರ ಬೆಳಗ್ಗೆ ತುಂಬಾ ಬೇಗ ಎದ್ದು ಶಾಲೆಗೆ ಓಡುವ ಒತ್ತಡದಿಂದ ಮಕ್ಕಳಿಗೆ ಮುಕ್ತಿ ಸಿಗಲಿದೆ.ಸರ್ಕಾರದ ನಿಯಮದಂತೆ ಆನ್‌ಲೈನ್ ಹಾಜರಾತಿಯನ್ನು ಸಮಯಕ್ಕೆ ಸರಿಯಾಗಿ ಮತ್ತು ಯಾವುದೇ ತಾಂತ್ರಿಕ ತೊಂದರೆಯಿಲ್ಲದೆ ದಾಖಲಿಸಲು ಈ ಹೊಸ ವೇಳಾಪಟ್ಟಿ ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

 

error: Content is protected !!
Scroll to Top