ಉದ್ಯಮಿ ವೈಶಾಖ್ ಆತ್ಮಹತ್ಯೆ ಪ್ರಕರಣ: ಪೊಲೀಸರಿಗೆ ನಟಿ ಕೃಷಿ ತಾಪಂಡ ಅಧಿಕೃತ ಹೇಳಿಕೆ



(ನ್ಯೂಸ್‌ ಕಡಬ) newskadaba.com,  ಜೂ.26  ಬೆಂಗಳೂರು: ಆರ್.ಆರ್. ನಗರದ ಎಲಿಗೇಟ್ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಗೆಳತಿ ಹಾಗೂ ನಟಿ ಕೃಷಿ ತಾಪಂಡ ಪೊಲೀಸರಿಗೆ ಅಧಿಕೃತ ಹೇಳಿಕೆ ನೀಡಿದ್ದಾರೆ.







ಕೃಷಿ ತಾಪಂಡ ಅವರು ವೈಯಕ್ತಿಕ ಕಾರಣಗಳಿಗಾಗಿ ಮೂರು ದಿನಗಳ ಕಾಲ ‘ಕ್ಷೇಮವನ’ಕ್ಕೆ ತೆರಳಿದ್ದರು. ಬುಧವಾರ ರಾತ್ರಿ 11 ಗಂಟೆಗೆ ಫ್ಲ್ಯಾಟ್‌ಗೆ ಮರಳಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಮ್ಮ ಬಳಿಯಿದ್ದ ಪರ್ಯಾಯ ಕೀ ಬಳಸಿ ಒಳಹೋದಾಗ ವೈಶಾಖ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.






ತಾವೇ ಸೀರೆಯನ್ನು ಕತ್ತರಿಸಿ ಮೃತದೇಹವನ್ನು ಕೆಳಗಿಳಿಸಿ, ಬಳಿಕ ಪೊಲೀಸರು ಮತ್ತು ವೈಶಾಖ್ ಕುಟುಂಬದವರಿಗೆ ಮಾಹಿತಿ ನೀಡಿರುವುದಾಗಿ ನಟಿ ತಿಳಿಸಿದ್ದಾರೆ.ಪೊಲೀಸರು ಕೃಷಿ ಅವರ ಮೊಬೈಲ್ ಕರೆಗಳು, ಸಂದೇಶಗಳು ಹಾಗೂ ವಾಟ್ಸಪ್ ಚಾಟ್‌ಗಳನ್ನು ಪರಿಶೀಲಿಸಿದ್ದು, ಯಾವುದೇ ಅನುಮಾನಾಸ್ಪದ ಅಂಶಗಳು ಕಂಡುಬರದ ಹಿನ್ನೆಲೆಯಲ್ಲಿ ಮೊಬೈಲ್ ಅನ್ನು ವಾಪಸ್ ನೀಡಿದ್ದಾರೆ.

ವೈಶಾಖ್ ಪತ್ನಿ ಮೇಘನಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಚಾಮರಾಜಪೇಟೆ ಚಿತಾಗಾರದಲ್ಲಿ ನೆರವೇರಿದೆ.

error: Content is protected !!
Scroll to Top