ಮೂವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ನಾಪತ್ತೆ

(ನ್ಯೂಸ್ ಕಡಬ) newskadaba.com ಮಾಸ್ಕೊ, ಸೆ. 17.  ಮೂವರನ್ನು ಕರೆದೊಯ್ಯುತ್ತಿದ್ದ ರಶ್ಯ ಚಿನ್ನದ ಗಣಿಗಾರಿಕೆ ಕಂಪನಿಯೊಂದರ ಹೆಲಿಕಾಪ್ಟರ್ ಸೋಮವಾರ ಅಮುರ್ ಪ್ರಾಂತ್ಯದಲ್ಲಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.


ಖೇರ್ಗು ಚಿನ್ನದ ಗಣಿಗಾರಿಕೆ ಕಂಪನಿಗೆ ಸೇರಿದ ರಾಬಿನ್ಸನ್ ಆರ್66 ಹೆಲಿಕಾಪ್ಟರ್, ಪೂರ್ವ ರಶ್ಯದ ಅಮುರ್ ಪ್ರಾಂತ್ಯದಲ್ಲಿ ಅನಧಿಕೃತ ಹಾರಾಟ ನಡೆಸುತ್ತಿತ್ತು. ನಾಪತ್ತೆಯಾಗಿರುವ ಹೆಲಿಕಾಪ್ಟರ್ ಶೋಧನೆಗೆ 20ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಿದೆ. ಹೆಲಿಕಾಪ್ಟರ್ ಜೌಗು ಪ್ರದೇಶದಲ್ಲಿ ನಾಪತ್ತೆಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ ಎಂದು ಹೇಳಲಾಗಿದೆ. ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಕುರಿತು ಇದುವರೆಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

Also Read  ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ದಾಟಿ ಟಿಪ್ಪರ್ ಗೆ ಡಿಕ್ಕಿ -(2) ವರ್ಷದ ಮಗು ಸೇರಿ ನಾಲ್ವರ ದುರ್ಮರಣ➤ಇನ್ನಿಬ್ಬರ ಸ್ಥಿತಿ ಗಂಭೀರ

 

error: Content is protected !!
Scroll to Top