
(ನ್ಯೂಸ್ ಕಡಬ) newskadaba.com, ಅ.02 . ಉಡುಪಿ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ದುರ್ಬಳಕೆ ತಡೆಯಲು ಪೊಲೀಸರು ಕಳೆದ ಒಂದು ತಿಂಗಳಿನಿಂದ ನಡೆಸಿದ ವಿಶೇಷ ಅಭಿಯಾನದಲ್ಲಿ ಒಟ್ಟು 2,925 ಬಂದೂಕುಗಳನ್ನು ಪರಿಶೀಲಿಸಿದ್ದಾರೆ.
ತಪಾಸಣೆ ವೇಳೆ ಅನಧಿಕೃತವಾಗಿ ಮಾರ್ಪಡಿಸಲಾಗಿದ್ದ 4 ಬಂದೂಕುಗಳನ್ನು ಪತ್ತೆ ಹಚ್ಚಲಾಗಿದೆ.ಕೋಟ, ಬ್ರಹ್ಮಾವರ, ಶಂಕರನಾರಾಯಣ ಹಾಗೂ ಕಾರ್ಕಳ ಪಟ್ಟಣ ಪೊಲೀಸ್ ಠಾಣೆಗಳಲ್ಲಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವ ರೌಡಿ ಶೀಟರ್ಗಳ ಹಿನ್ನೆಲೆ ಹಾಗೂ ನಡವಳಿಕೆಯನ್ನು ಪೊಲೀಸರು ವಿಶೇಷವಾಗಿ ತನಿಖೆಗೆ ಒಳಪಡಿಸಿದ್ದಾರೆ.ಅಕ್ರಮ ಬಂದೂಕು ಸಂಗ್ರಹ ಅಥವಾ ಮಾರ್ಪಾಡು ಕುರಿತು ಮಾಹಿತಿ ಇದ್ದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಉಡುಪಿ ಜಿಲ್ಲಾ ಪೊಲೀಸರು ಕೋರಿದ್ದಾರೆ.




