
(ನ್ಯೂಸ್ ಕಡಬ) newskadaba.com, ಅ. 03. ದಸರಾ ಹಬ್ಬದ ಹಿನ್ನೆಲೆಯಲ್ಲಿ ಭಕ್ತಾದಿಗಳು ಮತ್ತು ಸಾರ್ವಜನಿಕರಿಗಾಗಿ ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿ, ಉಡುಪಿ ಬಸ್ ಘಟಕದಿಂದ ಅಕ್ಟೋಬರ್ 11 ರಿಂದ 20 ರವರೆಗೆ ‘ದಸರಾ ವಿಶೇಷ ಪ್ಯಾಕೇಜ್ ಪ್ರವಾಸ’ ಆಯೋಜಿಸಿದೆ.
ಬೆಳಗ್ಗೆ 7:30ಕ್ಕೆ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ನಿರ್ಗಮನ ಹಾಗೂ ಪ್ರಯಾಣ ದರವು ವಯಸ್ಕರಿಗೆ ರೂ. 500 | ಮಕ್ಕಳಿಗೆ (6-12 ವರ್ಷ) ರೂ. 400..

ಆಸಕ್ತ ಪ್ರಯಾಣಿಕರಿಗೆ ಮುಂಗಡ ಆಸನ ಕಾಯ್ದಿರಿಸುವ ಸೌಲಭ್ಯವಿದ್ದು, ಸಾರ್ವಜನಿಕರು ಈ ಪ್ರವಾಸದ ಪ್ರಯೋಜನ ಪಡೆದುಕೊಳ್ಳುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.ಮುಂಗಡ ಬುಕಿಂಗ್ ಕೌಂಟರ್: 9663266400..




