ಭಾರೀ ಮಳೆಗೆ ಬಿದ್ದ ಮದುವೆ ಮನೆಯ ಪೆಂಡಲ್ ➤ 8 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಜೂ. 26. ಭಾರೀ ಮಳೆ ಮತ್ತು ಬಿರುಸಿನ ಗಾಳಿಯಿಂದಾಗಿ ಪೆಂಡಾಲ್ ಕುಸಿದು ಬಿದ್ದು ಮದುವೆಯಲ್ಲಿ ಭಾಗವಹಿಸಿದ್ದ ಎಂಟು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ದಾಮೋಹ್‌ ನಲ್ಲಿ ನಡೆದಿದೆ.

ಅಧಿಕಾರಿಗಳ ಪ್ರಕಾರ, ಭಾನುವಾರದಂದು ರಾತ್ರಿ ಭಾರೀ ಮಳೆ, ಗಾಳಿಯಿಂದಾಗಿ ದಾಮೋಹ್‌ ನಲ್ಲಿ ಪೆಂಡಾಲ್ ಕುಸಿದು  ಬಿದ್ದು ಸುಮಾರು 8 ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಓರ್ವ ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಜಬಲ್‌ ಪುರಕ್ಕೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

Scroll to Top