ವಿದ್ಯುತ್ ಶಾಕ್- ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 26. ವಿದ್ಯುತ್‌ ತಗುಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಸಾಕ್ಷಿ ಅಹುಜಾ ಎಂದು ಗುರುತಿಸಲಾಗಿದೆ. ಇವರು ಭೋಪಾಲ್‌ಗೆ ಹೋಗಲೆಂದು ತನ್ನ ಸಹೋದರಿ ಮತ್ತು ಮೂವರು ಮಕ್ಕಳೊಂದಿಗೆ ನವದೆಹಲಿ ರೈಲು ನಿಲ್ದಾಣಕ್ಕೆ ಬಂದಿದ್ದು, ಈ ವೇಳೆ ಮಳೆ ಬರುತ್ತಿದ್ದರಿಂದ ಆಧಾರವಾಗಿ ವಿದ್ಯುತ್‌ ಕಂಬವನ್ನು ಹಿಡಿದಿದ್ದರು. ಈ ವೇಳೆ ಕಂಬದಿಂದ ಸಾಕ್ಷಿ ಅವರಿಗೆ ವಿದ್ಯುತ್‌ ಪ್ರವಹಿಸಿದೆ. ತಕ್ಷಣವೇ ಸ್ಥಳೀಯರು ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಸಾಕ್ಷಿ ಮೃತಪಟ್ಟಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!

Join the Group

Join WhatsApp Group