60ರ ವಯಸ್ಸಿನಲ್ಲಿ ಎರಡನೇ ಮದುವೆಯಾದ ನಟ ಆಶಿಷ್ ವಿದ್ಯಾರ್ಥಿ

 (ನ್ಯೂಸ್ ಕಡಬ) newskadaba.com,ಮುಂಬೈ, ಮೇ.25. ಬಹುಭಾಷಾ ನಟ, ಹಾಗೂ ಜನಪ್ರಿಯ ಫೂಡ್ ವ್ಲಾಗರ್ ಆಶಿಷ್ ವಿದ್ಯಾರ್ಥಿ  ತಮ್ಮ 60ನೇ ವಯಸ್ಸಿನಲ್ಲಿ ಎರಡನೇ ಬಾರಿ ಮದುವೆಯಾಗಿದ್ದಾರೆ. ಇಂದು ಅಸ್ಸಾಮಿ ಮೂಲದ ರೂಪಾಲಿ ಬರುವ  ಎಂಬುವರನ್ನು ಸರಳವಾಗಿ ಆಶಿಷ್ ವಿದ್ಯಾರ್ಥಿ ವಿವಾಹವಾಗಿದ್ದಾರೆ.

ಇಬ್ಬರು ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಜೀವನದ ಈ ಹಂತದಲ್ಲಿ ರೂಪಾಲಿಯೊಟ್ಟಿಗೆ ವಿವಾಹವಾಗಿರುವುದು ಬಹಳ ಖುಷಿಯಾಗಿದೆ ಎಂದು ಆಶಿಷ್ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.

error: Content is protected !!

Join the Group

Join WhatsApp Group