ಒಂದೇ ಕುಟುಂಬದ ಐವರು ಶವವಾಗಿ ಪತ್ತೆ.!➤ಕೊಲೆ ಶಂಕೆ



(ನ್ಯೂಸ್ ಕಡಬ)newskadaba.com  ಕೇರಳ,ಮೇ.24 ಒಂದೇ ಕುಟುಂಬದ ಮೂವರು ಮಕ್ಕಳು ಸೇರಿದಂತೆ ಐವರು ಶವವಾಗಿ ಚೆರುಪುಳದ ನಿವಾಸದಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಮಹಿಳೆಗೆ ಎರಡನೇ ಮದುವೆಯಾಗಿದ್ದು, ಮೊದಲ ಮದುವೆಯಿಂದ ಮೂವರು ಮಕ್ಕಳು ಇದ್ದರು.







ಒಂದು ವಾರದ ಹಿಂದೆಯಷ್ಟೆ ಮಹಿಳೆ ಎರಡನೇ ಮಾದುವೆಯಯಾಗಿದ್ದರು. ಮದುವೆಯಾಗಿದ್ದ ದಂಪತಿ ಮಕ್ಕಳನ್ನು ಕೊಂದು ನಂತರ ತಾವು ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳು ಮೆಟ್ಟಿಲಿನ ಮೇಲೆ ಹಾಗೂ ದಂಪತಿ ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಘಟನೆ ನಡೆದಿರುವ ಬಗ್ಗೆ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.






 

 

error: Content is protected !!
Scroll to Top