ಅಮೇರಿಕಾದ ಉಪ ಸಚಿವೆಯಾಗಿ ಭಾರತ ಮೂಲದ ರಾಧಾ ಅಯ್ಯಂಗಾರ್‌ ಆಯ್ಕೆ

(ನ್ಯೂಸ್ ಕಡಬ)newskadaba.com ವಾಷಿಂಗ್ಟನ್, ಏ.23. ಅಮೇರಿಕಾದ ರಕ್ಷಣಾ ಖಾತೆಯ ಉಪ ಸಚಿವೆಯಾಗಿ ಭಾರತ ಮೂಲದ ರಾಧಾ ಅಯ್ಯಂಗಾರ್‌ ಪ್ಲಂಬ್‌ ನೇಮಕಗೊಂಡಿದ್ದಾರೆ.

ರಾಧಾ ಅವರು ರಕ್ಷಣಾ ಸಚಿವಾಲಯದ ಸಿಬ್ಬಂದಿ ಮುಖ್ಯಸ್ಥರಾಗಿದ್ದು, ಸೆನೆಟ್‌ನಲ್ಲಿ 68-30 ಮತಗಳೊಂದಿಗೆ ನೇಮಕ ದೃಢಪಟ್ಟಿದೆ. ಇನ್ನು ರಕ್ಷಣಾ ಸಚಿವಾಲಯದ ಹುದ್ದೆಗಳಿಗೂ ಮುನ್ನ ರಾಧಾ ಅವರು ಗೂಗಲ್‌ನಲ್ಲಿ ಭದ್ರತಾ ಸುರಕ್ಷತೆ ವಿಭಾಗ, ಫೇಸ್‌ಬುಕ್‌ನಲ್ಲಿ ನೀತಿ ವಿಶ್ಲೇಷಣೆಯ ಜಾಗತಿಕ ಮುಖ್ಯಸ್ಥರಾಗಿದ್ದರು.

 

Scroll to Top