ಕಾಶ್ಮೀರ ಕಣಿವೆಯ RSS ನಾಯಕರ ಹಿಟ್‌ಲಿಸ್ಟ್‌ ಬಿಡುಗಡೆ ಮಾಡಿದ ಉಗ್ರರು

 (ನ್ಯೂಸ್ ಕಡಬ)newskadaba.com ಶ್ರೀನಗರ, ಏ.05. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೆಸ್ಸೆಸ್‌ ಪ್ರಮುಖ ನಾಯಕರು ಹಾಗೂ ಕಾರ‍್ಯಕರ್ತರ ರಕ್ತ ಹರಿಸುತ್ತೇವೆ ಎಂದು ಸ್ಥಳೀಯ ಉಗ್ರ ಸಂಘಟನೆ ‘ದಿ ರೆಸಿಸ್ಟೆನ್ಸ್‌ ಫ್ರಂಟ್‌’ (ಟಿಆರ್‌ಎಫ್‌) ಜೀವ ಬೆದರಿಕೆ ಹಾಕಿದೆ.


ಪಾಕ್‌ ಪೋಷಿತ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಅಂಗಸಂಸ್ಥೆ ‘ಟಿಆರ್‌ಫ್‌’ಅನ್ನು ಸರಕಾರ ಜನವರಿಯಲ್ಲಿಯೇ ನಿಷೇಧಿಸಿದೆ. ”ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ, ನಿಮ್ಮ ರಕ್ತ ಹರಿಸುತ್ತೇವೆ,” ಎಂದು 30 ಆರೆಸ್ಸೆಸ್‌ ನಾಯಕರು ಹಾಗೂ ಕಾರ‍್ಯಕರ್ತರ ‘ಟಾರ್ಗೆಟ್‌ ಲಿಸ್ಟ್‌’ಅನ್ನು ಟಿಆರ್‌ಎಫ್‌ ಬಿಡುಗಡೆ ಮಾಡಿದೆ.

 

Scroll to Top