
(ನ್ಯೂಸ್ ಕಡಬ) newskadaba.com, ಅ . 23 . ಪ್ರಸಿದ್ಧ ನಾಗ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರಮುಖ ಸೇವೆಗಳ ದರವನ್ನು ಪರಿಷ್ಕರಿಸಲಾಗಿದ್ದು, ಹೊಸ ಸೇವೆಗೆ ಚಾಲನೆ ನೀಡಲಾಗಿದೆ:ಈ ಹಿಂದೆ ₹6,000 ಇದ್ದ ಈ ಸೇವೆಯ ದರವನ್ನು ಈಗ ₹11,000ಕ್ಕೆ ಹೆಚ್ಚಿಸಲಾಗಿದೆ. ದೇವಾಲಯದಲ್ಲಿ ಹೊಸದಾಗಿ ಬೆಳ್ಳಿ ರಥೋತ್ಸವ ಸೇವೆಯನ್ನು ಪರಿಚಯಿಸಲಾಗಿದ್ದು, ಇದರ ದರ ₹12,000 ನಿಗದಿಪಡಿಸಲಾಗಿದೆ.
ಕಾರ್ತಿಕ ಮಾಸದ ಶುದ್ಧ ಷಷ್ಠಿಯಿಂದ ಜ್ಯೇಷ್ಠ ಮಾಸದ ಶುದ್ಧ ಷಷ್ಠಿಯವರೆಗೆ ಪ್ರಮುಖ 10 ದಿನಗಳಲ್ಲಿ (ಪ್ರತಿ ತಿಂಗಳ ಶುದ್ಧ ಹಾಗೂ ಬಹುಳ ಪಕ್ಷದ ಬಿದಿಗೆ, ಚೌತಿ, ಷಷ್ಠಿ, ನವಮಿ ಮತ್ತು ಚತುರ್ದಶಿ) ಮಾತ್ರ ಈ ಹರಿಕೆ ಸೇವೆಗೆ ಅವಕಾಶವಿದೆ.ಬೆಳ್ಳಿ ರಥೋತ್ಸವ ನಡೆಯುವ ದಿನಗಳಲ್ಲಿ ಭಂಡಿ ರಥೋತ್ಸವ ಹಾಗೂ ಬೀದಿ ಉತ್ಸವ ಇರುವುದಿಲ್ಲ.
ವಿಜಯದಶಮಿಯ ಸಂಭ್ರಮದಲ್ಲಿ ಶ್ರೀ ದೇವಿಯನ್ನು ಸಾಲಾಂಕೃತ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಕಾಶಿಕಟ್ಟೆಯ ಮಹಾಗಣಪತಿ ಸನ್ನಿಧಿಗೆ ತರRಲಾಗಿ, ಅರ್ಚಕರ ನೇತೃತ್ವದಲ್ಲಿ ವಿಧಿವಿಧಾನಗಳೊಂದಿಗೆ ಶಮೀಪೂಜೆ ನೆರವೇರಿಸಲಾಯಿತು.ಮಹಾನವಮಿಯ ದಿನದಂದು ದೇವಳದ ಗಜರಾಣಿ ‘ಯಶಸ್ವಿ’ಗೆ ವಿಶೇಷ ಗಜಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಆನೆಗೆ ಹಣ್ಣು-ಹಂಪಲು, ಬೆಲ್ಲ, ತೆಂಗಿನಕಾಯಿ ಸೇರಿದಂತೆ ವಿವಿಧ ತಿನಿಸುಗಳನ್ನು ನೀಡಲಾಗಿದ್ದು, ಯಶಸ್ವಿಯು ಮೊಣಕಾಲೂರಿ ಪ್ರಣಾಮಗೈದು ಭಕ್ತರನ್ನು ಆಶೀರ್ವದಿಸಿತು.




