ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿ.!

 

(ನ್ಯೂಸ್ ಕಡಬ)newskadaba.com ಚೆನ್ನೈ, ಮಾ. 30 ಅಪ್ಪನ ಮಾತಿಗೆ ಮನನೊಂದು 9 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವಳ್ಳೂರ್ ನಲ್ಲಿ  ನಡೆದಿದೆ.ಮನೆಯ ಬಳಿ ಆಡುತ್ತಿದ್ದ ಮಗಳಿಗೆ ತಂದೆ ಕೃಷ್ಣಮೂರ್ತಿ ಆಡಿದ್ದು ಸಾಕು ಈಗ ಹೋಗಿ ಮನೆಯಲ್ಲಿ ಓದು ಎಂದು ಹೇಳಿ ಮಗಳ ಕೈಯಲ್ಲಿ ಮನೆಯ ಕೀಕೊಟ್ಟು ಕೆಲಸಕ್ಕೆ ಹೋಗಿದ್ದಾರೆ.

ಕೃಷ್ಣಮೂರ್ತಿ ಸಂಜೆ ಬಂದು ಮನೆಒಳಗೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಗಳು ಪತ್ತೆಯಾಗಿದ್ದಾಳೆ. ಕೂಡಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಿದರೂ, ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ಧಾರೆ.

 

 

 

 

Scroll to Top