ಉದ್ಯೋಗ ಪಡೆಯಲು ಪತಿಯನ್ನೇ ಕೊಲೆ ಮಾಡಿ ಫ್ಯಾನ್ ಗೆ ನೇತು ಹಾಕಿದ ಮಹಿಳೆ..!



(ನ್ಯೂಸ್ ಕಡಬ) newskadaba.com ಜಾರ್ಖಂಡ್, ಮಾ. 18. ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆಗೈದು, ಮೃತದೇಹವನ್ನು ಫ್ಯಾನ್ ಗೆ ನೇತು ಹಾಕಿರುವ ಘಟನೆ ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಂ ಜಿಲ್ಲೆಯಲ್ಲಿ ನಡೆದಿದೆ.







ಕೊಲೆಯಾದವರನ್ನು ರಾಜೀವ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಪತ್ನಿ ಅನಿತಾ ಕುಮಾರಿ ಅಲಿಯಾಸ್ ಅನಿತಾ ಸಿಂಗ್ ಕೊಲೆ ಆರೋಪಿ. ಈಕೆ ತನ್ನ ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಪತಿಯನ್ನು ಕೊಂದಿದ್ದು, ಪ್ರಕರಣದಲ್ಲಿ ತಪ್ಪಿತಸ್ಥಳೆಂದು ಕಂಡುಕೊಂಡ ನಂತರ ಜಾರ್ಖಂಡ್ ನ್ಯಾಯಾಲಯವು ಅನಿತಾ ಸಿಂಗ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೇ ಅಪರಾಧಿಗೆ 10,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ.






 

error: Content is protected !!
Scroll to Top