ಲಿಫ್ಟ್ ಕೇಬಲ್ ತುಂಡಾಗಿ ಮೂವರು ಕಾರ್ಮಿಕರು ಮೃತ್ಯು

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಮಾ. 18.  ಆಂಧ್ರಪ್ರದೇಶದ ವಿಜಯವಾಡ ಶಾಖೋತ್ಪನ ವಿದ್ಯುತ್ ಸ್ಥಾವರ (ವಿಟಿಪಿಎಸ್) ನಲ್ಲಿ ಎಲಿವೇಟರ್ ಕೇಬಲ್ ತುಂಡಾಗಿ ಮೂವರು ಮೃತಪಟ್ಟ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ವಿಟಿಪಿಎಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಧಾವಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇನ್ನು ಅಪಘಾತ ಸಂಭವಿಸಿದಾಗ 8 ಜನರು ಲಿಫ್ಟ್‌ನಲ್ಲಿ ಇದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

Scroll to Top