ಸ್ಕೂಬಾ ಡೈವಿಂಗ್ ವೇಳೆ ನುಂಗಲು‌ ಬಾಯ್ತೆರೆದ ಶಾರ್ಕ್ ➤ ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ        



(ನ್ಯೂಸ್ ಕಡಬ) newskadaba.com ಮಾ. 18. ಮಹಿಳೆಯೊಬ್ಬರು ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ಬಾಯಿಯಿಂದ ಕೂದಲೆಳೆ ಅಂತರದಿಂದ ಪಾರಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.







ಸ್ಕೂಬಾ ಡೈವಿಂಗ್ ಮಾಡಲು ಸಮುದ್ರಕ್ಕೆ ಹಾರಲು ಪ್ರಯತ್ನಿಸುವ ವೇಳೆ ದಿಡೀರನೆ ಶಾರ್ಕ್ ಪ್ರತ್ಯಕ್ಷಗೊಂಡು ಬಾಯ್ತೆರೆದಿದೆ. ಈ ಅನಿರೀಕ್ಷಿತ ಘಟನೆಯಿಂದ ಗಾಬರಿಗೊಂಡ ಮಹಿಳೆ ಡೈವಿಂಗ್ ಮಾಡದೆ ಹಿಂದೆ ಸರಿದಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದು ಒಂದು ಕ್ಷಣ ಬೆಚ್ಚಿಬೀಳಿಸುವಂತಿದೆ.






 

error: Content is protected !!
Scroll to Top